ಕರ್ನಾಟಕ

karnataka

ಕಂಚಿನ ಕಂಠದ ಯುವನಟ ವಸಿಷ್ಠ ಸಿಂಹ ಅಭಿನಯದ love..ಲಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಆನಂದ್ ಪುತ್ರಿ

By

Published : Sep 1, 2022, 12:44 PM IST

ಕಂಚಿನ ಕಂಠದ ಯುವನಟ ವಸಿಷ್ಠ ಸಿಂಹ ಮತ್ತು ಸ್ಟೆಫಿ ಪಟೇಲ್ ನಟನೆಯ love..ಲಿ ಚಿತ್ರಕ್ಕೆ ಪಟ ಪಟ ಅಂತ ಅರಳು ಹುರಿದಂತೆ ಮಾತನಾಡುವ ಪಟಾಕಿ ಪೋರಿ ವಂಶಿಕಾ ಅಂಜನಿ ಕಶ್ಯಪ ಎಂಟ್ರಿಯಾಗಿದ್ದಾಳೆ.

Vamshika Anjani Kashyap Joined Love li Movie
love ಲಿ ಚಿತ್ರದ ಪೋಸ್ಟರ್​

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ಹಾಗೂ ಗಾಯಕರೂ ಆಗಿರುವ ವಸಿಷ್ಠ ಸಿಂಹ ಅಭಿನಯನದ ಬಹುನಿರೀಕ್ಷಿತ 'love..ಲಿ' ಸಿನಿಮಾ ದಿನದಿಂದ ದಿನಕ್ಕೆ ತನ್ನ ಕ್ರೇಜ್​ ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇದೀಗ ಮತ್ತೊಂದು ವಿಷಯಕ್ಕೆ ಗಮನ ಸೆಳೆಯುತ್ತಿದೆ.

ಹೌದು, 'ನನ್ನಮ್ಮ ಸೂಪರ್ ಸ್ಟಾರ್', 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋಗಳ ಖ್ಯಾತಿಯ ವಂಶಿಕಾ ಅಂಜನಿ ಕಶ್ಯಪ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಈ ಮೂಲಕ 'love..ಲಿ' ಸಿನಿಮಾ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿದೆ.

ಅದ್ಭುತವಾದ ನಟನೆ, ಡೈಲಾಗ್, ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿರುವ ಬಿಜಲಿ ಪಟಾಕಿ, ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರ ಪುತ್ರಿಯಾಗಿರುವ ವಂಶಿಕಾ ಅಂಜನಿ ಕಶ್ಯಪ ಈಗಾಗಲೇ ಕಿರುತೆರೆ ಲೋಕದಲ್ಲಿ ಹವಾ ಸೃಷ್ಟಿಸಿರುವ ಬಾಲ ಪ್ರತಿಭೆ. ಅವಳ ಎಂಟ್ರಿಯಿಂದ ಚಿತ್ರ ತಂಡದಲ್ಲಿ ಖುಷಿ ಆವರಿಸಿದೆ.

ವಂಶಿಕಾ ಅಂಜನಿ ಕಶ್ಯಪ

ಇನ್ನು, ತನ್ನ ಅಮೋಘ ನಟನೆಯಿಂದ ಸಣ್ಣಪರದೆಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಈ ಪಟಾಕಿ ಪೋರಿ ಇದೀಗ ಬೆಳ್ಳಿತೆರೆಗೂ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾಳೆ. ವಂಶಿಕಾ ತನು ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಬರುವ ಸೆಪ್ಟೆಂಬರ್ 6ರಿಂದ ಶೂಟಿಂಗ್ ಶುರುವಾಗಲಿದೆ.

ವಂಶಿಕಾ ಅಂಜನಿ ಕಶ್ಯಪ

ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಪಾತ್ರ ಸೃಷ್ಟಿಸಿದ್ದು ಖಂಡಿತ ವೀಕ್ಷಕರಿಗೆ ವಂಶಿಕಾ ಮನರಂಜನೆ ನೀಡುತ್ತಾಳೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕೇಶವ್. ಈಗಾಗಲೇ ಸಿನಿಮಾದ 50% ಶೂಟಿಂಗ್ ಕಂಪ್ಲೀಟ್ ಆಗಿದ್ದು, ಆ್ಯಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹನಿಗೆ ಜೋಡಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಾಯಕಿಯಾಗಿ ನಟಿಸುತ್ತಿದ್ದಾರೆ.

love ಲಿ ಚಿತ್ರದ ಪೋಸ್ಟರ್​

ಮಫ್ತಿ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರೌಡಿಸಂ ಕಥೆ ಜೊತೆಗೆ ಆ್ಯಕ್ಷನ್‌ ರೋಮ್ಯಾಂಟಿಕ್‌ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರವೀಂದ್ರ ಕುಮಾರ್‌ ನಿರ್ಮಿಸುತ್ತಿದ್ದು, ಹರೀಶ್‌ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಕ್ಯಾಮೆರಾ ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ 'ಭೀಮ' ಸಿನಿಮಾಗೆ ಹೇರ್​​ಸ್ಟೈಲ್ ಚೇಂಜ್​ ಮಾಡಿಕೊಂಡ ಖಳನಟ ಸುಧೀಂದ್ರ

ABOUT THE AUTHOR

...view details