ಸಿನಿಮಾಗಿಂತ ಹೆಚ್ಚಾಗಿ ಸೌಂದರ್ಯದಿಂದಲೇ ಸದ್ದು ಮಾಡುವ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ. ಇವರಿಗೆ ಟ್ರೋಲಿಂಗ್ ಮತ್ತು ಟೀಕೆ ಹೊಸದೇನಲ್ಲ. ನಟಿ ತಮ್ಮ ಬೆರಗುಗೊಳಿಸುವ ನೋಟಕ್ಕೆ ಹೆಸರುವಾಸಿಯಾಗಿದ್ದರೂ ಕೂಡ, ಅವರ ಹೇಳಿಕೆಗಳು ಅಥವಾ ಜನರ ಗಮನ ಸೆಳೆಯುವ ಮನೋಭಾವದಿಂದಾಗಿ ಆಗಾಗ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವೈರಲ್ ಆದ ಫೋಟೋದಿಂದಾಗಿ ಹಿಂದಿ ಚಿತ್ರ ನಟಿ ಮತ್ತೊಮ್ಮೆ ಟ್ರೋಲ್ ಸುಳಿಯಲ್ಲಿ ಸಿಲುಕಿದ್ದಾರೆ.
ಊರ್ವಶಿ ರೌಟೇಲಾ ಶಾಲಾ ದಿನಗಳ ವೈರಲ್ ಫೋಟೋಗಳಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಅವರು ಅದ್ಭುತವಾದ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ, ಇದು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮಾತ್ರ ಸಾಧ್ಯ ಎಂದು ವಾದಿಸಿದ್ದಾರೆ. ನಟಿಯ ಶಾಲಾ ದಿನಗಳ ಚಿತ್ರಗಳು ಸೋಶಿಯಲ್ ಮೀಡಿಯಾ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ. ಬಾಲಿವುಡ್ ದಿವಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ.
ತೆಳ್ಳಗಿನ ಹುಬ್ಬುಗಳು ಮತ್ತು ಸಾಮಾನ್ಯ ಕೇಶ ಶೈಲಿಯಿಂದಾಗಿ ಸನಮ್ ರೇ ಚಿತ್ರನಟಿ ಫೋಟೋಗಳಲ್ಲಿ ಗುರುತಿಸಲಾಗದಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾಡೆಲ್, ನಟಿಯ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಈ ವೈರಲ್ ಫೋಟೋಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಆಶ್ಚರ್ಯಕ್ಕೆ ಕಾರಣವಾಗಿದೆ. ಆನ್ಲೈನ್ನಲ್ಲಿ ಊರ್ವಶಿ ಅವರ ಫೋಟೋಗಳು ಗಮನ ಸೆಳೆದ ತಕ್ಷಣ ಒಂದು ಗುಂಪಿನ ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಸೌಂದರ್ಯವನ್ನು ಹೆಚ್ಚಿಸಲು ಕಾಸ್ಮೆಟಿಕ್ ಸರ್ಜರಿ ಮಾಡಿಸಿದ್ದಾರೆಂದು ಆರೋಪಿಸಿದರು.
ನಟಿ ಊರ್ವಶಿ ರೌಟೇಲಾ ಸಂಪೂರ್ಣ ನಕಲಿ ಎಂದು ನೆಟಿಜನ್ಗಳು ಆರೋಪಿಸಿದ್ದಾರೆ. ಅವರ ಮೂಗು ಮತ್ತು ಹುಬ್ಬು ಎರಡೂ ತೀವ್ರವಾಗಿ ಬದಲಾಗಿದೆ. ಇದೆಲ್ಲವೂ ಸರಿ, ನನ್ನನ್ನು ಕೆರಳಿಸುವ ಏಕೈಕ ವಿಷಯವೆಂದರೆ ಅವರು ಇನ್ನೂ ಜನಪ್ರಿಯತೆ ಮತ್ತು ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರೋರ್ವರು ತಿಳಿಸಿದ್ದಾರೆ. ಅವರು ಮುಗ್ಧರಂತೆ ತೋರುತ್ತಾರೆ, ಅವರ ತಾಯಿಯೇ ಒತ್ತಡ ಹಾಕಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.