ಹೈದರಾಬಾದ್: ತೆಲುಗು ಸೆಲೆಬ್ರಿಟಿ ಟಾಕ್ ಶೋ ಅನ್‌ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2ರ ಈ ಭಾನುವಾರದ ಎಪಿಸೋಡ್ನ ಗೆಸ್ಟ್ ಬಗ್ಗೆ ಆಹಾ ಟ್ರೈಲರ್ ಬಿಡುಗಡೆ ಮಾಡಿದೆ. ಈ ಹಿಂದೆಯೇ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ಈಗ ಆ ಮಾತು ಸತ್ಯ ಆಗಿದ್ದು ಟ್ರೈಲರ್ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಗ್ಯಾಂಡ್ ಎಂಟ್ರಿಯನ್ನು ರಿವಿಲ್ ಮಾಡಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಬಾಲಯ್ಯ ಅವರ ನಡುವಿನ ಸಂವಾದ ಇಂದೇ ಆಹಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. PSPK x NBK (ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಂದಮೂರಿ ಬಾಲಕೃಷ್ಣ) ಸಂವಾದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಬ್ಬರೂ ಇಂಡಸ್ಟ್ರೀಯ ಸೂಪರ್ ಸ್ಟಾರ್ಗಳಾಗಿದ್ದಾರೆ. ಎರಡು ನಟರು ತಮ್ಮದೇ ಆದ ಫ್ಯಾನ್ ಪಾಲೋಯಿಂಗ್ ಹೊಂದಿದ್ದಾರೆ.
ಬಿಡುಗಡೆ ಆದ ಟ್ರೈಲರ್ನಲ್ಲಿ ನಟರ ಸಂಭಾಷಣೆ ಬಿಡುಗಡೆಯಾಗಿಲ್ಲ. ಶೋಗೆ ಬರುತ್ತಿರುವ ಇಬ್ಬರು ಸೂಪರ್ ಸ್ಟಾರ್ಗಳ ಎಂಟ್ರಿ ಮಾತ್ರ ತೋರಿಸಿದ್ದಾರೆ. ಈ ಹಿಂದಿನ ಎಪಿಸೋಡ್ನಲ್ಲಿ ಪ್ರಭಾಸ್ ಬಂದಿದ್ದು, ಅದು ತುಂಬಾ ವೀಕ್ಷಣೆಗಳಿಸಿತ್ತು ಮತ್ತು ಅದರಲ್ಲಿ ಪ್ರಭಾಸ್ ಅವರ ಡೇಟಿಂಗ್ ಬಗ್ಗೆ ಬಾಲಯ್ಯ ಪ್ರಶ್ನೆ ಕೇಳಿದ್ದು ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಈಗ ಈ ಇಬ್ಬರ ಸಮಾಗಮದ ಬಗ್ಗೆ ಹೆಚ್ಚಿನ ಹೈಪ್ ಕ್ರಿಯೆಟ್ ಆಗಿದ್ದು ಇದು ಅನ್‌ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2 ಅತೀ ಹೆಚ್ಚು ವೀಕ್ಷಿಸಲ್ಪಡುವ ಎಪಿಸೋಡ್ ಎನ್ನಲಾಗಿದೆ.
ಇಬ್ಬರು ಸೂಪರ್ ಸ್ಟಾರ್ಗಳು ಮೊದಲ ಬಾರಿಗೆ ಕಿರುತೆರೆಯಲ್ಲಿ ಒಟ್ಟಿಗೆ ಒಂದು ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕ್ಷಣವನ್ನು ಎರಡು ಸ್ಟಾರ್ಗಳ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಭಿಮಾನಿ ಒಬ್ಬರು ಕಮೆಂಟ್ ಮಾಡಿದ್ದು "ಇದು ಇಬ್ಬರು ಶಕ್ತಿಶಾಲಿ ತಾರೆಗಳನ್ನು ಒಳಗೊಂಡ ಅತ್ಯಂತ ರೋಮಾಂಚಕಾರಿ ಸಂಚಿಕೆಯಾಗಿದೆ" ಎಂದಿದ್ದಾರೆ. ಇನ್ನೊಬ್ಬ ಅಭಿಮಾನಿ "ಅತ್ಯಂತ ಅಪರೂಪದ ಸಂಚಿಕೆ. ಒಟಿಟಿಯಲ್ಲಿ ಪವನ್ ಕಲ್ಯಾಣ್ ಬರುತ್ತಿದ್ದು ಒಂದು ದೊಡ್ಡ ಮನರಂಜನೆ" ಎಂದು ಬರೆದು ಕೊಂಡಿದ್ದಾರೆ.
ಇಂಟರ್ನೆಟ್ ಮೂವಿ ಡೇಟಾಬೇಸ್ (IMDb)ಯಲ್ಲಿ ಟಾಪ್ ಶೋ ಎನ್ನಿಸಿಕೊಂಡಿರುವ ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2 ಇಂದಿನ ಸಂಚಿಕೆಯಿಂದ ಇನ್ನಷ್ಟು ಹೈಪ್ಗೆ ಹೋಗಲಿದೆ. ಟ್ವಿಟರ್ನಲ್ಲಿ ಪೋಸ್ಟರ್ಗಳು ರಾರಾಜಿಸುತ್ತಿದೆ. ಅಲ್ಲದೇ ಶೋನಲ್ಲಿ ಭಾಗವಹಿಸಿದ ಪ್ರೇಕ್ಷಕರು ತಮ್ಮ ಮೊಬೈಲ್ನಲ್ಲಿ ತೆಗೆದಿರುವ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.
ಟಾಕ್ ಶೋದ ಎರಡನೇ ಆವೃತ್ತಿ ಅಕ್ಟೋಬರ್ನಲ್ಲಿ ಆರಂಭವಾಯಿತು. ತೆಲುಗು ಸಿನಿಮಾ ರಂಗದ ಖ್ಯಾತ ನಟ, ನಿರ್ಮಾಪಕ ಮತ್ತು ನಿರ್ದೇಶಕರು ಭಾಗವಗಹಿಸಿದ್ದರು. ಇಂದು ಪ್ರಸಾರವಾಗಲಿರುವ ಪವನ್ ಕಲ್ಯಾಣ್ ಭಾಗವಹಿಸುತ್ತಿರುವ ಎಪಿಸೋಡ್ ಈ ಆವೃತ್ತಿಯ ಕೊನೆಯದ್ದು ಎಂದು ಹೇಳಲಾಗುತ್ತಿದೆ. ಈ ಕಾರಣ ಯಾವುದೇ ಸೆಲೆಬ್ರಿಟಿ ಟಾಕ್ ಶೋನಲ್ಲಿ ಕಾಣಿಸಿಕೊಳ್ಳದ ಪವನ್ ಕಲ್ಯಾಣ್ ಅವರನ್ನು ಕರೆಸಿ ಅದ್ಧೂರಿಯಾಗಿ ತೆರೆ ಎಳೆಯಲು ಆಹಾ ಬಯಸಿದೆ. ಇಡೀ ಸೀಸನ್ನ ಅತೀ ಹೆಚ್ಚು ಫ್ಯಾನ್ ಬೇಸ್ ಕಾರ್ಯಕ್ರಮ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಆರ್ಆರ್ಆರ್ ಬಾಲಿವುಡ್ ಸಿನಿಮಾವಲ್ಲ, ಅಪ್ಪಟ ತೆಲುಗು ಚಿತ್ರ: ಅಮೆರಿಕದಲ್ಲಿ ರಾಜಮೌಳಿ ಪ್ರತಿಕ್ರಿಯೆ