ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, 'ಟಿಪ್ಪು' ಚಿತ್ರದ ನಿರ್ಮಾಪಕರು, ಮೈಸೂರಿನ ರಾಜನ "ಭಿನ್ನ ಮುಖ"ವನ್ನು ಪ್ರಸ್ತುತಪಡಿಸಲಿದ್ದೇವೆ ಎಂದು ಘೋಷಿಸಿದ್ದಾರೆ.
ಟಿಪ್ಪು ಸುಲ್ತಾನ್ ಅನ್ನು ಸ್ವಾತಂತ್ರ್ಯ ಹೋರಾಟಗಾರ, ಸಮರ್ಥ ಆಡಳಿತಗಾರ ಎಂದು ಕರೆಯಲಾಗುತ್ತಿತ್ತು. ಕೆಲ ವರ್ಷಗಳಿಂದ, ಕರ್ನಾಟಕದಲ್ಲಿ ಬಿಜೆಪಿಯು ಟಿಪ್ಪುವಿನ ಬಲವಂತದ ಮತಾಂತರ ವಿಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿದೆ ಎಂಬ ಆರೋಪವಿದೆ. ಅದೇ ವಿಚಾರವನ್ನು ಚಿತ್ರ ಹೈಲೈಟ್ ಮಾಡಲು ಪ್ರಯತ್ನಿಸಲಿದೆ. ಬಿಜೆಪಿಯ ಈಶಾನ್ಯ ರಾಜಕೀಯ ತಂತ್ರಜ್ಞ, ಮಣಿಪುರ ಮುಖ್ಯಮಂತ್ರಿಯ ಸಲಹೆಗಾರ ಮತ್ತು ಪ್ರಸಿದ್ಧ ಲೇಖಕ ಮತ್ತು ಟಿವಿ ನಿರೂಪಕ ರಜತ್ ಸೇಥಿ ( Rajat Sethi) ಅವರು ಚಿತ್ರಕ್ಕಾಗಿ ಸಂಶೋಧನೆ ನಡೆಸಿದ್ದಾರೆ.
ಚಿತ್ರ ನಿರ್ದೇಶಕ ಪವನ್ ಶರ್ಮಾ (Pawan Sharma) ಮಾತನಾಡಿ,"ಟಿಪ್ಪು ಸುಲ್ತಾನ್ ಬಗ್ಗೆ ಶಾಲೆಯಲ್ಲಿ ನಮಗೆ ಕಲಿಸಿರುವ ವಿಷಯವೇ ಬೇರೆಯಾಗಿದೆ. ಅವರ ನೈಜತೆಯನ್ನು ತಿಳಿದುಕೊಳ್ಳುವ ವೇಳೆ ಸಂಪೂರ್ಣವಾಗಿ ಬೆಚ್ಚಿಬಿದ್ದಿದ್ದೇನೆ ಮತ್ತು ಈ ವಿಷಯಗಳ ಬಗ್ಗೆ ಭ್ರಮನಿರಸನಗೊಂಡಿದ್ದೇನೆ. ನನ್ನ ಈ ಚಿತ್ರದ ಮೂಲಕ ಟಿಪ್ಪು ಸುಲ್ತಾನ್ ವಾಸ್ತವ ತೋರಿಸಲು ಧೈರ್ಯ ಮಾಡಿದ್ದೇನೆ. ಈ ಹಿಂದೆ ಅವರನ್ನು ಯೋಧ ಮತ್ತು ಮಹಾನ್ ನಾಯಕರನ್ನಾಗಿ ಚಿತ್ರಿಸಲಾಗಿದೆ. ಟಿಪ್ಪು ಸುಲ್ತಾನ್ನ ಮತಾಂತರ ಪ್ರಕ್ರಿಯೆ ಅವರ ತಂದೆ ಹೈದರ್ ಅಲಿ ಖಾನ್‌ಗಿಂತ ಕೆಟ್ಟದಾಗಿತ್ತು‘‘ಎಂದು ಒತ್ತಿ ಹೇಳಿದ್ದಾರೆ.
ರಜತ್ ಸೇಥಿ, "ಇತಿಹಾಸವು ಅನೇಕ ವೀರರ ಕಥೆಯನ್ನು ನಿರ್ಲಕ್ಷಿಸಿದೆ. ಟಿಪ್ಪು ಅಂತಹ ಒಬ್ಬ ವ್ಯಕ್ತಿಯಯಾಗಿ ಪರಿಗಣಿಸಲಾಗಿದೆ. ಆದರೆ ಅವರ ಮತ್ತೊಂದು ಮುಖವನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಅಚ್ಚುಕಟ್ಟಾಗಿ ಮರೆ ಮಾಚಲಾಗಿದೆ'' ಎಂದು ಹೇಳಿದ್ದಾರೆ.