ಕರ್ನಾಟಕ

karnataka

ETV Bharat / entertainment

ರಜನಿಕಾಂತ್ ಮಗಳ ಮನೆಯಲ್ಲಿ ಚಿನ್ನ, ವಜ್ರ ಕದ್ದು ಮನೆ ಖರೀದಿಸಿದ ಕೆಲಸದಾಕೆ! - ಈಟಿವಿ ಭಾರತ ಕನ್ನಡ

ಐಶ್ವರ್ಯಾ ರಜನಿಕಾಂತ್ ಅವರ​ ಮನೆಯಲ್ಲಿ ನಡೆದಿರುವ ಕಳ್ಳತನಕ್ಕೆ ಸಂಬಂಧಿಸಿ ಕೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

aishwarya
ಐಶ್ವರ್ಯಾ ರಜನಿಕಾಂತ್

By

Published : Mar 22, 2023, 10:10 AM IST

ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಪುತ್ರಿ ಹಾಗೂ ಸಿನಿಮಾ ನಿರ್ದೇಶಕಿ ಐಶ್ವರ್ಯಾ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚಿನ್ನಾಭರಣ ಮತ್ತು ವಜ್ರಾಭರಣ ಕದ್ದ ಆರೋಪದಡಿ ಐಶ್ವರ್ಯಾ ಮನೆಯ ಕೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಕಾರು ಚಾಲಕ ವೆಂಕಟೇಶನ ಸಹಾಯದೊಂದಿಗೆ ಕೆಲಸದಾಕೆ ಈಶ್ವರಿ ಸುಮಾರು 100 ತೊಲ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಹಾಗೂ ನಾಲ್ಕು ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ.

ಸುಮಾರು 18 ವರ್ಷಗಳಿಂದ ಐಶ್ವರ್ಯಾ ಮನೆಯಲ್ಲಿ ಕೆಲಸ ಮಾಡುತ್ತಿರುವ ಈಶ್ವರಿಗೆ ಅವರ ಮನೆಯ ಬಗ್ಗೆ ಸಂಪೂರ್ಣ ಜ್ಞಾನವಿದೆ. ಅಲ್ಲದೇ ಆಕೆ 2019 ರಿಂದಲೇ ಹಲವು ಬಾರಿ ಲಾಕರ್​ ತೆರೆದು ಚಿನ್ನ ದೋಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಶ್ವರಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಆ ಕಾರಣಕ್ಕಾಗಿಯೇ ಅವರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಐಶ್ವರ್ಯಾ ಅವರ ಚಿನ್ನಾಭರಣ ಕದ್ದ ಈಶ್ವರಿ ಅದನ್ನು ಮಾರಿ ಮನೆ ಖರೀದಿಸಿದ್ದರು. ಕದ್ದ ಚಿನ್ನದ ಒಂದು ಭಾಗವನ್ನು ವೆಂಕಟೇಶನಿಗೂ ಕೊಟ್ಟಿದ್ದಳು. ಪೊಲೀಸರು ಈಶ್ವರಿ ಮತ್ತು ವೆಂಕಟೇಶನನ್ನು ವಿಚಾರಣೆಗೊಳಪಡಿಸಿದಾಗ ಇಬ್ಬರೂ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಈಶ್ವರಿ ಮನೆ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಶ್ವರಿ ಮತ್ತು ವೆಂಕಟೇಶನನ್ನು ಬಂಧಿಸಿದ ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:'ಮೀಸೆ ಬಿಟ್ಟಿದ್ರೆ ಚೆನ್ನಾಗಿರ್ತಿತ್ತು': 'ಗುರುದೇವ್​ ಹೊಯ್ಸಳ' ಟ್ರೇಲರ್ ಲಾಂಚ್​ ಮಾಡಿದ ಕಿಚ್ಚ

ಹಿನ್ನೆಲೆ:ಕಳೆದ ವಾರ ರಜನಿಕಾಂತ್​ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಅವರು ಚೆನ್ನೈನ ತೆನಾಂಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. "2019ರಲ್ಲಿ ನನ್ನ ತಂಗಿಯ ಮದುವೆ ನಂತರ ಚಿನ್ನಾಭರಣಗಳನ್ನು ಲಾಕರ್​ನಲ್ಲಿ ಇರಿಸಿದ್ದೆ. ಲಾಕರ್​ ಅನ್ನು 2021ರಲ್ಲಿ ಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಗಸ್ಟ್ 21, 2021ರಂದು ಸಿಐಟಿ ನಗರದಲ್ಲಿರುವ ಮಾಜಿ ಪತಿ ಧನುಷ್ ಅವರ ಫ್ಲಾಟ್‌ಗೆ ಇತರೆ ಸಾಮಗ್ರಿಗಳೊಂದಿಗೆ ತೆಗೆದುಕೊಂಡು ಹೋಗಲಾಗಿತ್ತು. ಬಳಿಕ ಸೆಪ್ಟೆಂಬರ್ 2021ರಲ್ಲಿ ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್​ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 2022ರಲ್ಲಿ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಲಾಕರ್‌ನ ಕೀಗಳು ಮಾತ್ರ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ಉಳಿದಿವೆ. ಫೆಬ್ರವರಿ 10, 2023ರಂದು ಲಾಕರ್​ ತೆರೆದಾಗ ಆಭರಣಗಳು ಕಳ್ಳತನವಾಗಿರುವುದು ತಿಳಿದು ಬಂದಿದೆ" ಎಂದು ದೂರಿನಲ್ಲಿ ತಿಳಿಸಿದ್ದರು.

ಅಲ್ಲದೇ "ನಾನು ಚಿನ್ನಾಭರಣಗಳು, ವಜ್ರ ಮತ್ತು ನವರತ್ನದ ಆಭರಣಗಳನ್ನು ಲಾಕರ್​ನಲ್ಲಿ ಇಟ್ಟ ವಿಚಾರ ಮನೆಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಗೊತ್ತಿತ್ತು. ಹೀಗಾಗಿ ಅವರೇ ಕಳ್ಳತನ ಮಾಡಿರಬಹುದು" ಎಂದು ಐಶ್ವರ್ಯಾ ರಜನಿಕಾಂತ್ ದೂರಿನಲ್ಲಿ ಈಶ್ವರಿ, ಲಕ್ಷ್ಮಿ ಮತ್ತು ಅವರ ಚಾಲಕ ವೆಂಕಟ್ ಹೆಸರು ನಮೂದಿಸಿದ್ದರು.

ಇದನ್ನೂ ಓದಿ:ಮತ್ತೆ ಬರ್ತಿದೆ 'ವೀಕೆಂಡ್ ವಿತ್ ರಮೇಶ್' ಶೋ! ಮೋಹಕತಾರೆ ರಮ್ಯಾ ಮೊದಲ ಅತಿಥಿ

ABOUT THE AUTHOR

...view details