ಇಸ್ರೇಲ್ ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್‌ಎಫ್‌ಐ (ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ) 2022ರ ತೀರ್ಪುಗಾರರ ಮುಖ್ಯಸ್ಥರಾಗಿದ್ದ ನಡಾವ್ ಲಪಿಡ್ (Nadav Lapid) ಅವರು ಭಾರತದ ಸೂಪರ್ ಹಿಟ್ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು "ಪ್ರಚಾರ ಮತ್ತು ಅಶ್ಲೀಲ ಚಲನಚಿತ್ರ" ಎಂದು ಟೀಕಿಸಿದ್ದರು. ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲದ ಪ್ರಚಾರ ಮತ್ತು ಅಸಭ್ಯ ಚಲನಚಿತ್ರದಂತೆ ನಮಗೆ ಭಾಸವಾಯಿತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಆಸ್ಕರ್-ನಾಮನಿರ್ದೇಶಿತ ನಿರ್ಮಾಪಕ ಜಿಂಕೊ ಗೊಟೊಹ್ (Jinko Gotoh) ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ಈಗ ನಡಾವ್ ಲಪಿಡ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇವರು ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದ ಸ್ಪರ್ಧೆಯ ಐವರು ಸದಸ್ಯರ ತೀರ್ಪುಗಾರರ ಭಾಗವಾಗಿದ್ದರು.
ಜ್ಯೂರಿಗಳಾಗಿದ್ದ ಪಾಸ್ಕೇಲ್ ಚಾವಾನ್ಸ್ (Pascale Chavance), ಜೇವಿಯರ್ ಅಂಗುಲೋ ಬಾರ್ಟುರೆನ್ ಮತ್ತು ಜಿಂಕೊ ಗೊಟೊಹ್ ಅವರು ಶನಿವಾರದಂದು ಅವರ ಟ್ವಿಟರ್‌ನಲ್ಲಿ ನಡಾವ್ ಲಪಿಡ್ ಹೇಳಿಕೆಯನ್ನು ಬೆಂಬಲಿಸಿ ಪೋಸ್ಟ್ ಒಂದನ್ನು ಮಾಡಿದ್ದಾರೆ.