ಕರ್ನಾಟಕ

karnataka

ETV Bharat / entertainment

'ಸೀತಾ ರಾಮಂ' ಚಿತ್ರಕ್ಕೆ ಒಂದು ವರ್ಷ.. ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಮೃಣಾಲ್​ ಠಾಕೂರ್​ - ಹನು ರಾಘವಪುಡಿ

2022ರ ಆಗಸ್ಟ್​ 5ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಕಂಡ 'ಸೀತಾ ರಾಮಂ' ಚಿತ್ರ ಒಂದು ವರ್ಷ ಪೂರೈಸಿದೆ.

sita ramam
ಸೀತಾ ರಾಮಂ

By

Published : Aug 6, 2023, 11:18 AM IST

ಭಾರತೀಯ ಚಿತ್ರರಂಗದಲ್ಲಿ ಪ್ರೀತಿ ಮತ್ತು ದೇಶ ಪ್ರೇಮ ಸಾರುವ ಸಿನಿಮಾವೊಂದು ನಿರ್ಮಾಣಗೊಂಡು ಆಗಸ್ಟ್​ 5ಕ್ಕೆ ಒಂದು ವರ್ಷ ಪೂರೈಸಿದೆ. ಮಾಲಿವುಡ್​ ಹ್ಯಾಂಡ್ಸಮ್​ ನಟ ದುಲ್ಕರ್​ ಸಲ್ಮಾನ್​ ಮತ್ತು ಚೆಲುವೆ ಮೃಣಾಲ್​ ಠಾಕೂರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸೀತಾ ರಾಮಂ' ಚಿತ್ರ ತೆರೆ ಕಂಡು 365 ದಿನ ಕಂಪ್ಲೀಟ್​ ಆಗಿದೆ. ಈ ಸುಂದರ ಪ್ರೇಮ ಕಥೆಯು ದೇಶ ಪ್ರೇಮ ಸಾರುವುದರೊಂದಿಗೆ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿತ್ತು.

ಒಂದು ವರ್ಷದ ಹಿಂದಿನವರೆಗೂ ಮೃಣಾಲ್​ ಠಾಕೂರ್​ ಅವರನ್ನು ಅಷ್ಟಾಗಿ ಯಾರಿಗೂ ಪರಿಚಯವಿರಲಿಲ್ಲ. ಆದರೆ 'ಸೀತಾ ರಾಮಂ' ಚಿತ್ರದ ಮೂಲಕ ಸೀತಾ ಮಹಾಲಕ್ಷ್ಮಿಯಾಗಿ ಇಂದು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ. ಸಿನಿಮಾದಲ್ಲಿ ರಾಮ್​ ಮತ್ತು ಸೀತೆಯ ಸುಂದರ ಪ್ರಣಯ ನೋಡುಗರನ್ನು ಪ್ರೀತಿಯ ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ. ದೇಶ ಕಾಯುವ ಯೋಧನಿಗಾಗಿ ಒಂದು ಜೀವ ಕಾಯುತ್ತಿರುವಂತೆ ಸುಂದರವಾಗಿ ಕಥೆಯನ್ನು ಕಟ್ಟಿಕೊಡಲಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಬರುವಂತೆ ಕಥೆಯನ್ನು ನಿರೂಪಿಸಿದ ರೀತಿ ನಿಜಕ್ಕೂ ಅಮೋಘ.

ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶಿಸಿದ್ದಾರೆ. 'ಸೀತಾ ರಾಮಂ' ಒಂದು ವರ್ಷ ಪೂರೈಸಿದ ಹಿನ್ನೆಲೆ ಮೃಣಾಲ್​ ಠಾಕೂರ್​ ಭಾವನಾತ್ಮಕ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ತೆಲುಗು ಪ್ರೇಕ್ಷಕರು ಮತ್ತು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಮೊದಲಿಗೆ 'ಸೀತಾ ರಾಮಂ' ತೆಲುಗು ಭಾಷೆಯಲ್ಲೇ ಮೂಡಿಬಂದಿತ್ತು. ಆ ನಂತರದಲ್ಲಿ ಇತರೆ ಭಾಷೆಗಳಲ್ಲಿಯೂ ಈ ಚಿತ್ರವನ್ನು ಹೊರ ತರಲಾಯಿತು. ನೋಡುಗರಿಗೆ ಅರ್ಥವಾಗಲು ತೆಲುಗು ಭಾಷೆ ಹೊರತು ಪಡಿಸಿ ಉಳಿದ ಭಾಷೆಗಳಲ್ಲೂ ಸಿನಿಮಾವನ್ನು ರಿಲೀಸ್​ ಮಾಡಲಾಯಿತು.

ಇದನ್ನೂ ಓದಿ:ದುಲ್ಕರ್​ ಸಲ್ಮಾನ್​ ಹುಟ್ಟುಹಬ್ಬ: 'ಗನ್ಸ್ ಅಂಡ್​​ ಗುಲಾಬ್ಸ್‌' ಟ್ರೇಲರ್​ ಡೇಟ್​ ಅನೌನ್ಸ್

ಮೃಣಾಲ್​ ಠಾಕೂರ್​ ಪೋಸ್ಟ್​: ಇಡೀ ಭಾರತೀಯ ಚಿತ್ರರಂಗಕ್ಕೆ ಮೃಣಾಲ್​ ಠಾಕೂರ್​ರನ್ನು ಪರಿಚಯಿಸಿದ ಚಿತ್ರ 'ಸೀತಾ ರಾಮಂ'. ಸಿನಿಮಾ ಒಂದು ವರ್ಷ ಪೂರೈಸಿದ ಹಿನ್ನೆಲೆ ನಟಿ ಭಾವನಾತ್ಮಕ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. "ಪ್ರೀತಿಯ ಪ್ರೇಕ್ಷಕರೇ. ನಟಿಯಾಗಿ ನನ್ನ ಮೊದಲ ತೆಲುಗು ಚಿತ್ರ 'ಸೀತಾ ರಾಮಂ'. ನನ್ನ ಕಲ್ಪನೆಗೂ ಮೀರಿ ನೀವು ನನ್ನನ್ನು ಪ್ರೀತಿಸಿದ್ದೀರ. ಈ ಸುಂದರ ಪ್ರಯಾಣದಲ್ಲಿ ನೀವು ನನ್ನನ್ನು ತೆಲುಗು ಹುಡುಗಿಯಾಗಿ ಪರಿಗಣಿಸಿದ್ದಕ್ಕಾಗಿ ಮತ್ತು ತುಂಬಾ ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಇದು ನನಗೆ ವಿಶೇಷವಾಗಿದೆ. ಇನ್ನು ಮುಂದೆಯೂ ವಿಭಿನ್ನ ಪಾತ್ರಗಳ ಮೂಲಕ ನಿಮ್ಮನ್ನು ರಂಜಿಸುತ್ತೇನೆ" ಎಂದು ಹೇಳಿದ್ದಾರೆ.

ಅಲ್ಲದೇ, "ನನ್ನನ್ನು ಸೀತಾ ಪಾತ್ರದಲ್ಲಿ ತೆರೆಗೆ ತಂದ ನಿದೇಶಕ ಹನು ರಾಘವಪುಡಿ ಅವರಿಗೆ ಧನ್ಯವಾದಗಳು. ಈ ಇಡೀ ಪಯಣವನ್ನು ಸ್ಮರಣೀಯವಾಗಿಸಿದ ದುಲ್ಕರ್​ ಸಲ್ಮಾನ್​ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದಗಳು." ಎಂದಿದ್ದಾರೆ. ಜೊತೆಗೆ 'ಸೀತಾ ರಾಮಂ' ಮೇಕಿಂಗ್​ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವೈಜಯಂತಿ ಮೂವೀಸ್​ ಮತ್ತು ಸ್ವಪ್ನಾ ಸಿನಿಮಾಸ್​ ಜಂಟಿಯಾಗಿ ನಿರ್ಮಿಸಿದ ಈ ಚಿತ್ರವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಉತ್ತಮ ಕಲೆಕ್ಷನ್​ ಮಾಡಿತ್ತು.

ಇದನ್ನೂ ಓದಿ:ವಧುವಿನಂತೆ ಕಂಗೊಳಿಸುತ್ತಿರುವ ಮೃಣಾಲ್​ ಠಾಕೂರ್​; ಕ್ಯಾಪ್ಶನ್​ ನೋಡಿ ಫ್ಯಾನ್ಸ್​ ಶಾಕ್​!

ABOUT THE AUTHOR

...view details