ನಟ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ಯಾವುದು ಅನ್ನೋ ಕುತೂಹಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಮುಂದಿನ ಚಿತ್ರದ ಬಗ್ಗೆ ಅಂತೆ - ಕಂತೆಗಳು ಶುರುವಾಗಿದ್ದು ಇದಕ್ಕೆ ಸುದೀಪ್ ಅವರು ತಲೆ ಬಿಸಿ ಮಾಡಿಕೊಂಡಿಲ್ಲ. ಸ್ನೇಹಿತರ ಜೊತೆ ಕ್ರಿಕೆಟ್ ಆಡುವ ಮುಖಾಂತರ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ರಿಲ್ಯಾಕ್ಸ್ ಮೂಡ್ನಲ್ಲಿ ಸುದೀಪ್ ಇತ್ತೀಚೆಗಷ್ಟೇ ಬಿಗ್ಬಾಸ್ ರಿಯಾಲಿಟಿ ಶೋ ಮುಗಿಸಿರುವ ಅವರು ಶೀಘ್ರದಲ್ಲೇ ತಮ್ಮ ಹೊಸ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಊಹೆ ಆಗಿತ್ತು. ಆದರೆ, ಸದ್ಯಕ್ಕೆ ಕೊಂಚ ಬ್ರೇಕ್ ತೆಗೆದುಕೊಳ್ಳುವ ಮೂಲಕ ಆ ಕಾತುರತೆಯನ್ನು ಮತ್ತಷ್ಟು ಹೆಚ್ಚಿಸಿತೊಡಗಿದ್ದಾರೆ. 'ಪೈಲ್ವಾನ್' ಮತ್ತು 'ವಿಕ್ರಾಂತ್ ರೋಣ' ಸಿನಿಮಾ ನಂತರ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಯುತ್ತಿರುವುದು ನಿಜ. ಆದರೆ, ಯಾವ ನಿರ್ಮಾಣ ಸಂಸ್ಥೆ ಅವರ ಚಿತ್ರಕ್ಕೆ ಹಣ ಹೂಡಲಿದೆ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇತ್ತ ಅವರನ್ನು ಹುಡುಕಿಕೊಂಡು ಹಲವು ಆಫರ್ಗಳು ಬರುತ್ತಿದ್ದು ಯಾವ ರೀತಿಯ ಸಿನಿಮಾ ಮಾಡಬೇಕು? ಅಂತಾ ಸುದೀಪ್ ತಲೆಯಲ್ಲಿ ಸಾಕಷ್ಟು ಯೋಚನೆಗಳು ಓಡುತ್ತಿವೆ.
ರಿಲ್ಯಾಕ್ಸ್ ಮೂಡ್ನಲ್ಲಿ ಸುದೀಪ್ ಅದೆಲ್ಲವನ್ನು ಪಕ್ಕಕ್ಕೆ ಸರಿಸಿರುವ ಅವರು, ಸದ್ಯಕ್ಕೆ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಜೆಕೆ, ಸುನೀಲ್ ರಾವ್, ರಾಜೀವ್ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆ ಸೇರಿ ಸಿನಿಮಾ ಪತ್ರಕರ್ತರ ಜೊತೆ ಕ್ರಿಕೆಟ್ ಮ್ಯಾಚ್ ಆಡುವ ಮೂಲಕ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಯಲಹಂಕದ ರಾಜನಾಕುಂಟೆಯಲ್ಲಿರುವ ಜೆಸ್ಟ್ ಕ್ರಿಕೆಟ್ ಮೈದಾನದಲ್ಲಿ ಸಿನಿಮಾ ಪತ್ರಕರ್ತರ ಜೊತೆ ಇಂದು ಸಹ ಕ್ರಿಕೆಟ್ ಮ್ಯಾಚ್ ಆಡಿದ್ದಾರೆ. ಈ ಮಧ್ಯೆ ಸುದೀಪ್ ಸಿಸಿಎಲ್ ಕ್ರಿಕೆಟ್ ಮ್ಯಾಚ್ ಬಗ್ಗೆ ಸಿದ್ಧತೆ ಮಾಡಿಕೊಂಡಿರುವ ಅವರು, ನಿರ್ಮಾಪಕ ಜಾಕ್ ಮಂಜು, ನಿರ್ದೇಶಕ ನಂದ ಕಿಶೋರ್ ಸೇರಿದಂತೆ ಕೆಲ ಸ್ನೇಹಿತರ ಜೊತೆ ಒಂದು ಮೀಟಿಂಗ್ ಕೂಡ ಮುಗಿಸಿದ್ದಾರಂತೆ.
ಕೆಲವು ದಿನಗಳ ಹಿಂದೆ 'ಬಾನದಾರಿಯಲ್ಲಿ' ಚಿತ್ರತಂಡ ಕೂಡ ಸಿನಿಮಾ ಪತ್ರಕರ್ತರ ತಂಡದ ಜೊತೆ ಒಂದು ಪಂದ್ಯವನ್ನು ಆಡಿತ್ತು. ಇದೀಗ ಸುದೀಪ್ ನೇತೃತ್ವದ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ರಾಜೀವ್, ಭಜರಂಗಿ ಲೋಕಿ, ಜೆಕೆ, ಸುನೀಲ್ ರಾವ್, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೇರಿದಂತೆ ಸಾಕಷ್ಟು ಸಿನಿಮಾ ಸ್ನೇಹಿತರ ಜೊತೆ ಅಭ್ಯಾಸ ನಡೆಸಿದ್ದಾರೆ. ಸಿನಿಮಾ ತಾರೆಯರೇ ಸೇರಿಕೊಂಡು ನಡೆಸುವ ಸಿಸಿಎಲ್ ಪಂದ್ಯಗಳು ಬರುವ ಫೆಬ್ರವರಿಯಲ್ಲಿ ನಡೆಯಲಿದ್ದು ಅದಕ್ಕಾಗಿ ಸಿದ್ಧತೆ ಸಹ ನಡೆಸಿದ್ದಾರೆ.
ರಿಲ್ಯಾಕ್ಸ್ ಮೂಡ್ನಲ್ಲಿ ಸುದೀಪ್ ಕ್ರಿಕೆಟ್ ಪ್ರೇಮಿಯ ಜೊತೆಗೆ ಅಪ್ಪಟ ಆಟಗಾರರೂ ಆಗಿರುವ ಸುದೀಪ್, ನಟರಾಗದಿದ್ದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಗುರುತಿಸಿಕೊಳ್ಳುವ ಕನಸು ಕಂಡಿದ್ದರು. ಅದರಂತೆ ಕರ್ನಾಟಕ ರಣಜಿ ತಂಡದಲ್ಲಿ ಒಮ್ಮೆ ಕ್ರೀಡಾಂಗಣಕ್ಕೆ ಇಳಿದಿರುವ ಕಿಚ್ಚ ಸ್ಟಾರ್ ಕೂಡ ಆಗಿದ್ದರು. ಹಾಗಾಗಿ ಇವತ್ತಿಗೂ ಕ್ರಿಕೆಟ್ ಆಡುವುದಲ್ಲಿ ತಾವು ಸದಾ ಮುಂದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.
ರಿಲ್ಯಾಕ್ಸ್ ಮೂಡ್ನಲ್ಲಿ ಸುದೀಪ್ ವಿರಾಟ್ ಕೊಹ್ಲಿ ಕೊಂಡಾಡಿದ್ದ ಸುದೀಪ್:ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ರೋಚಕ ಗೆಲುವನ್ನು ಸಾಧಿಸಿತ್ತು. ಭಾರತದ ಗೆಲುವಿಗೆ ಪ್ರಮುಖ ಕಾರಣರಾದ ರನ್ ಮಿಷನ್ ವಿರಾಟ್ ಕೊಹ್ಲಿ ಅವರನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದರು. 'ಮಹಾರಾಜ ಎಲ್ಲಿದ್ದರೂ ಮಹಾರಾಜನೇ ತಾನೇ.. ರಾಜ ಯಾವಾಗಲೂ ರಾಜನೇ.. ಆ ರಾಜ ವಿರಾಟ್ ಕೊಹ್ಲಿ. ಇದನ್ನು ನೇರವಾಗಿ ನೋಡುವುದಕ್ಕೆ ಸಾಧ್ಯವಾಗಿದ್ದು, ಒಂದು ಗೌರವ. ಹ್ಯಾಟ್ಸ್ ಆಫ್ ಹಾರ್ದಿಕ್ ಪಾಂಡ್ಯ.. ನಿಮ್ಮೊಳಗಿನ ಶಾಂತತೆ ಇಲ್ಲವಾಗಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ. ಹ್ಯಾಟ್ಸ್ ಆಫ್...' ಎಂದು ಸುದೀಪ್ ಶೀರ್ಷಿಕೆ ಬರೆದು ಕೊಂಡಿದ್ದರು.
ಇದನ್ನೂ ಓದಿ:ಭಾರತೀಯ ಸೈನಿಕರ ಶೌರ್ಯ ತೋರಿಸುವ ಸಿನಿಮಾಗಳಿವು..: ನೀವು ನೋಡಿದ್ದೀರಾ?