ಕರ್ನಾಟಕ

karnataka

ETV Bharat / entertainment

ಕಿಚ್ಚ 46: ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಅಭಿನಯ ಚಕ್ರವರ್ತಿ ಸುದೀಪ್​ - Sudeep tweet

ತಮ್ಮ ಮುಂದಿನ ಸಿನಿಮಾ ಕುರಿತು ಟ್ವೀಟ್​ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್​.

Sudeep upcoming movie
ಸುದೀಪ್ ಮುಂದಿನ ಸಿನಿಮಾ

By

Published : Jun 24, 2023, 9:53 AM IST

ಕಿಚ್ಚ ಸುದೀಪ್, ಕಿಚ್ಚ 46 ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್​ನಲ್ಲಿರೋ ವಿಚಾರ. ಕಳೆದ ಸುಮಾರು ಏಳೆಂಟು ತಿಂಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಅಂತೆ - ಕಂತೆಗಳು ಕೇಳಿಬರುತ್ತಲೇ ಇದೆ. ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಘೋಷಿಸುವುದಾಗಿ ಹೇಳಿದ್ದ ನಟ ಸುದೀಪ್​​ ಇದೀಗ, ಟ್ವೀಟ್​ ಮೂಲಕ ಅಭಿಮಾನಿಗಳಿಗೊಂದು ಶುಭ ಸುದ್ದಿ ನೀಡಿದ್ದಾರೆ.

ಕಿಚ್ಚ 46 ಮೇಲೆ ಕುತೂಹಲ: ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನಟ ಸುದೀಪ್​​ ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಸಂಪಾದಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಇವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಅಭಿನಯ ಚಕ್ರವರ್ತಿ ಎಂದೇ ಖ್ಯಾತನಾಮರು. ಹಾಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಕೊಂಚ ಹೆಚ್ಚೇ ಅಲ್ವೇ?. ಮುಂಬರುವ ಅವರ ಸಿನಿಮಾ ಯಾವುದು? ಯಾವ ರೀತಿಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆಯಡಿ ಕಿಚ್ಚನ ಸಿನಿಮಾ ನಿರ್ಮಾಣವಾಗಲಿದೆ? ನಟಿ ಯಾರಾಗಬಹುದು? ಕಥೆ ಹೇಗಿರಬಹುದು? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿರುವುದು ಸಹಜ.

ನಟ ಸುದೀಪ್​ ಟ್ವೀಟ್​​: ''K46 ರ ಟೀಸರ್ (ಸಣ್ಣ ನೋಟ) ಸಿದ್ಧವಾಗಿದೆ. ಸಂಚಿತ್​ ಸಂಜೀವ್​​ ಅವರ ಸಿನಿಮಾ ಅನೌನ್ಸ್​ಮೆಂಟ್​ ಟೀಸರ್​​​ ಜೂನ್​ 25ಕ್ಕೆ ಅನಾವರಣಗೊಳ್ಳಲಿದ್ದು, ಅದಕ್ಕಾಗಿ ಕಾಯುತ್ತಿದ್ದೇನೆ. K46 ತಂಡ ಬಹಳ ಶ್ರಮಿಸಿದೆ ಮತ್ತು ಅದನ್ನು (ಟೀಸರ್​) ನಿಮ್ಮ ಮುಂದೆ ತರಲು ಎಲ್ಲರೂ ಉತ್ಸುಕರಾಗಿದ್ದಾರೆ. ಜೂನ್ 27ಕ್ಕೆ ಸಿನಿಮಾ ಕುರಿತು ಘೋಷಣೆ ಆಗಲಿದೆ'' ಎಂದು ಟ್ವೀಟ್​ ಮಾಡಿದ್ದಾರೆ.

ನಟ ಸುದೀಪ್​​ ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​​ನಲ್ಲಿ ಬ್ಯುಸಿಯಾಗಿದ್ದರು. ವಿಕ್ರಾಂತ್​​ ರೋಣ ತೆರೆಕಂಡು ಸುಮಾರು 11 ತಿಂಗಳಾದರೂ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಘೋಷಣೆ ಇಲ್ಲ. ಹೀಗಾಗಿ ಕಿಚ್ಚ 46 ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಗ್​ ಆಗುತ್ತಿದೆ. ಅಭಿಮಾನಿಗಳ ಬೇಡಿಕೆ ಹೆಚ್ಚಾದ ಬೆನ್ನಲ್ಲೇ, ಶೀಘ್ರದಲ್ಲೇ ಸಿನಿಮಾ ಘೋಷಿಸುವುದಾಗಿ ತಿಳಿಸಿದರು. ಇದರ ಬೆನ್ನಲ್ಲೇ ಅಕ್ಕನ ಮಗ ಜೂ. ಕಿಚ್ಚ ಸಂಚಿತ್​ ಸಂಜೀವ್​​ ಚೊಚ್ಚಲ ಸಿನಿಮಾಗೂ ಶುಭ ಹಾರೈಸಿದರು. ಇದೀಗ ಈ ಬಗ್ಗೆ ಟ್ವೀಟ್ ಮೂಲಕ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಂಚಿತ್​ ಸಂಜೀವ್​​ ಅವರ ಚೊಚ್ಚಲ ಸಿನಿಮಾ ಅನೌನ್ಸ್​ಮೆಂಟ್​ ಟೀಸರ್ ನಾಳೆ ಅನಾವರಣಗೊಂಡರೆ, ಮಂಗಳವಾರದಂದು ಸುದೀಪ್​ ಸಿನಿಮಾ ಬಗ್ಗೆ ಘೋಷಣೆ ಆಗಲಿದೆ.

ಇದನ್ನೂ ಓದಿ:ಕುದುರೆ ಸವಾರಿ ತರಬೇತಿ ಪಡೀತಿದ್ದಾರೆ ರಿಷಬ್​ ಶೆಟ್ಟಿ: ಯಾಕೆ ಗೊತ್ತೇ?

ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಸುದೀಪ್​, ನಿಮ್ಮ ಕುತೂಹಲ ನನಗೆ ಅರ್ಥವಾಗುತ್ತದೆ. ಸದ್ಯ ಕೊಂಚ ವಿರಾಮದಲ್ಲಿದ್ದೇನೆ. ಆದ್ರೆ ನನ್ನ ಮುಂದಿನ ಸಿನಿಮಾ ಕೆಲಸಗಳು ನಡೆಯುತ್ತಿದೆ. ಚಿತ್ರತಂಡ ಹಗಲಿರುಳು ಕೆಲಸ ಮಾಡುತ್ತಿದೆ. ಮೂರು ಕಥೆ ನನ್ನ ಕೈಯಲ್ಲಿದೆ. ಅದಕ್ಕೆ ಬೇಕಾದ ತಯಾರಿಗಳೂ ನಡೆಯುತ್ತಿದೆಯೆಂದು ತಿಳಿಸಿದ್ದರು.

ಇದನ್ನೂ ಓದಿ:'ಓರ್ವ ನಟಿಯಾಗಿ ನಾನು ಯಾವ ಪಾತ್ರವನ್ನಾದರೂ ನಿಭಾಯಿಸಬಲ್ಲೆ': ತಮನ್ನಾ ಭಾಟಿಯಾ

ABOUT THE AUTHOR

...view details