ಕರ್ನಾಟಕ

karnataka

ETV Bharat / entertainment

ಖಡಕ್​​​ ಪೊಲೀಸ್​ ಅಧಿಕಾರಿಯಾಗಿ ಸೋನಾಕ್ಷಿ ಸಿನ್ಹಾ: 'ದಹಾದ್' ಪ್ರಸಾರಕ್ಕೆ ಮುಹೂರ್ತ ಫಿಕ್ಸ್ - ಸೋನಾಕ್ಷಿ ಸಿನ್ಹಾ ಲೇಟೆಸ್ಟ್ ನ್ಯೂಸ್

ಸೋನಾಕ್ಷಿ ಸಿನ್ಹಾ ದಹಾದ್ ಮೂಲಕ ಒಟಿಟಿಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಖಡಕ್​ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸರಣಿಯು ಮೇ 12ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

Sonakshi Sinha in Dahaad
ದಹಾದ್ ಸೀರಿಸ್​ನಲ್ಲಿ ಸೋನಾಕ್ಷಿ ಸಿನ್ಹಾ

By

Published : Apr 20, 2023, 4:12 PM IST

ದಬಾಂಗ್​ ಚಿತ್ರದಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಸೋನಾಕ್ಷಿ ಸಿನ್ಹಾ ಬಳಿಕ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸದ್ಯ ವೆಬ್​ ಸೀರಿಸ್​ ಕಡೆ ಮುಖ ಮಾಡಿದ್ದಾರೆ. ತಮ್ಮ ಚೊಚ್ಚಲ ಬೆಬ್​ ಸರಣಿಯಲ್ಲಿ ಖಡಕ್​ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ ಅಭಿನಯದ ದಹಾದ್ (Dahaad) ಸೀರಿಸ್ ಮೇ 12ರಿಂದ ಪ್ರಸಾರ ಆಗಲಿದೆ ಎಂದು ಪ್ರೈಮ್ ವಿಡಿಯೋ ಇಂದು ಪ್ರಕಟಿಸಿದೆ. ಕ್ರೈಮ್ ಡ್ರಾಮಾ ಸೀರಿಸ್ ಅನ್ನು​​ ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್ ನಿರ್ದೇಶಿಸಿದ್ದಾರೆ ಎಂದು ಪ್ರೈಮ್ ವಿಡಿಯೋದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸೋನಾಕ್ಷಿ ಸಿನ್ಹಾ ಜೊತೆಗೆ, ವಿಜಯ್ ವರ್ಮಾ, ಗುಲ್ಶನ್ ದೇವಯ್ಯ ಮತ್ತು ಸೋಹಮ್ ಶಾ ಅವರು ಸಹ ಬಣ್ಣ ಹಚ್ಚಿದ್ದಾರೆ.

ಎಂಟು ಸಂಚಿಕೆಗಳ ಸರಣಿಯನ್ನು ಕಾಗ್ತಿ ಮತ್ತು ನಿರ್ದೇಶಕಿ ಜೋಯಾ ಅಖ್ತರ್ ಅಭಿವೃದ್ಧಿಪಡಿಸಿದ್ದಾರೆ. ಇದು ಫೆಬ್ರವರಿಯಲ್ಲಿ ಬರ್ಲಿನೇಲ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಸೋನಾಕ್ಷಿ ಸಿನ್ಹಾ ತಮ್ಮ OTT ಚೊಚ್ಚಲ ಸರಣಿಯ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ಕಳುಹಿಸಿದ್ದಾರೆ.

ತಮ್ಮ ಇನ್​ಸ್ಟಾ ಪೇಜ್​ನಲ್ಲಿ ಸರಣಿಯ ಫಸ್ಟ್ ಲುಕ್ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದು, ಶಕ್ತಿಯುತ ಘರ್ಜನೆ ಮಾತ್ರ ಸತ್ಯ ಬಹಿರಂಗಪಡಿಸುತ್ತದೆ. ಪ್ರೈಮ್ ವಿಡಿಯೋದಲ್ಲಿ 'ದಹಾದ್'. ಮೇ 12ರಂದು ಸೀರಿಸ್ ಪ್ರಸಾರ ಎಂದು ಬರೆದುಕೊಂಡಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ ಮಾಹಿತಿಯನ್ನು ಶೇರ್ ಮಾಡಿದ ತಕ್ಷಣ, ಅವರ ಅಭಿಮಾನಿಗಳು ಮತ್ತು ಇತರ ಸೆಲೆಬ್ರಿಟಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಾರ್ಟ್ ಮತ್ತು ಫೈಯರ್ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬ "ಲೇಡಿ ದಬಾಂಗ್" ಎಂದು ಬರೆದಿದ್ದಾರೆ. ಮತ್ತೊಬ್ಬರು ಸೀರಿಸ್​ ಬಿಡುಗಡೆಗೆ ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ ಅವರು ಅಂಜಲಿ ಭಾಟಿ ಎಂಬ ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಸರಣಿ ಕೊಲೆ ಸುತ್ತ ನಡೆಯುವ ಕಥೆ ಇದು. ಕೊಲೆ ಪ್ರಕರಣದ ಬೆನ್ನು ಹತ್ತುವ ದಿಟ್ಟ ಪೊಲೀಸ್​ ಅಧಿಕಾರಿ ಪಾತ್ರಕ್ಕೆ ಸೋನಾಕ್ಷಿ ಜೀವ ತುಂಬಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ, ಭೀಕರ ಕೊಲೆ ಪ್ರಕರಣವನ್ನು ಭೇದಿಸಲು ತಮ್ಮ ಸಹುದ್ಯೋಗಿಗಳೊಂದಿಗೆ ಕೆಲಸ ಮಾಡುವ ಪಾತ್ರವಿದು. ಸಾರ್ವಜನಿಕ ವಿಶ್ರಾಂತಿ ಕೊಠಡಿಗಳಲ್ಲಿ ಮಹಿಳೆಯರ ನಿಗೂಢ ಸಾವಿನ ಸರಣಿಯನ್ನು ತನಿಖೆ ಮಾಡಲು ಸಬ್ ಇನ್ಸ್‌ಪೆಕ್ಟರ್ ಅಂಜಲಿ ಭಾಟಿ ಅವರನ್ನು ನಿಯೋಜಿಸಿದಾಗ ಈ ಕಥೆ ಪ್ರಾರಂಭವಾಗುತ್ತದೆ. ಪ್ರಕರಣದ ತನಿಖೆ ಚುರುಕುಗೊಳ್ಳುತ್ತದೆ. ಮೊದಲಿಗೆ, ಈ ಸಾವುಗಳು ಆತ್ಮಹತ್ಯೆ ಎಂದು ಬಿಂಬಿತವಾಗಿರುತ್ತದೆ. ನಂತರ ಕಥೆಯಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತದೆ.

ಇದನ್ನೂ ಓದಿ:ಒಟಿಟಿ, ಥಿಯೇಟರ್‌ಗಳಲ್ಲಿ ಕಾಂತಾರದ 'ವರಾಹ ರೂಪಂ' ಬ್ಯಾನ್​ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಹಾಗೂ ಟೈಗರ್ ಬೇಬಿ ಸೀರಿಸ್​ನ ನಿರ್ಮಾಪಕರು. ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬಹಳಷ್ಟಿದೆ.

ಇದನ್ನೂ ಓದಿ:ಹಿಂದಿ ಚಿತ್ರ ಬಾಲಿವುಡ್​ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲಿ: ಸಂಚಲನ ಮೂಡಿಸಿದ ಮಣಿ ರತ್ನಂ

ABOUT THE AUTHOR

...view details