ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಮಾಸ್ ಆ್ಯಕ್ಷನ್ ಎಂಟರ್ಟೈನ್ಮೆಂಟ್ ಸಿನಿಮಾ 'ಸ್ಕಂದ'. ಕನ್ನಡತಿ ಶ್ರೀಲೀಲಾ ನಟನೆಯ ಬಹುನಿರೀಕ್ಷಿತ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ.
'ನಿನ್ ಸುತ್ತ ಸುತ್ತ ನಾನು ತಿರುಗಿದೆ' ಎಂಬ ಗಾನಬಜಾನಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಕಂಠದಾನ ಮಾಡಿದ್ದಾರೆ. ಎಸ್ ಎಸ್ ತಮನ್ ಟ್ಯೂನ್, ರಾಮ್ ಎನರ್ಜಿ, ಶ್ರೀಲೀಲಾ ಗ್ಲಾಮರ್ ರಂಗು, ಅದ್ಧೂರಿ ಸೆಟ್ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿಯಾಗುತ್ತಿರುವ ಈ ಚಿತ್ರದ ಹಾಡು ಐದು ಭಾಷೆಯಲ್ಲಿಯೂ ಅನಾವರಣಗೊಂಡಿದೆ.
ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಸ್ಕಂದ ಸಿನಿಮಾಗಾಗಿ ಮಾಸ್ ಅವತಾರ ತಾಳಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮರಾ ವರ್ಕ್, ತಮನ್ ಎಸ್ ಎಸ್ ಸಂಗೀತ ಈ ಚಿತ್ರಕ್ಕಿದೆ. ಸ್ಕಂದ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.
ಸ್ಕಂದ ಸಿನಿಮಾವನ್ನು ದಸರಾ ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ದಸರಾಗೂ ಮೊದಲೇ ಅಂದರೆ ಸೆಪ್ಟಂಬರ್ 15ರಂದು ಸ್ಕಂದ ಚಿತ್ರ ತೆರೆಕಾಣಲಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ಸ್ಕಂದ ಸಿನಿಮಾ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ:Sreeleela: ಬಹುಬೇಡಿಕೆ ನಟಿ ಶ್ರೀಲೀಲಾ ಕೈಯಲ್ಲಿ 10 ಸಿನಿಮಾಗಳು.. ಮುಂದಿನ 6 ತಿಂಗಳಲ್ಲಿ ತೆರೆಕಾಣಲಿವೆ 5 ಚಿತ್ರಗಳು!
ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿರುವ ಶ್ರೀಲೀಲಾ ಸದ್ಯ ತೆಲುಗು ನೆಲದಲ್ಲ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಈ ನಟಿ ಕೈಯಲ್ಲಿ 10 ಸಿನಿಮಾಗಳಿವೆ. ಮುಂದಿನ 6 ತಿಂಗಳಲ್ಲಿ 5 ಸಿನಿಮಾಗಳು ತೆರೆಕಾಣಲು ಸಜ್ಜಾಗುತ್ತಿದೆ. ಶ್ರೀಲೀಲಾ ನಟನೆಯ 'ಆದಿಕೇಶವ' ಆಗಸ್ಟ್ 18ಕ್ಕೆ, 'ಸ್ಕಂದ' ಸೆಪ್ಟೆಂಬರ್ 18ಕ್ಕೆ, 'ಭಗವಂತ್ ಕೇಸರಿ' ಅಕ್ಟೋಬರ್ 19ಕ್ಕೆ, 'ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್' ಡಿಸೆಂಬರ್ 23ಕ್ಕೆ, 'ಗುಂಟೂರು ಕಾರಂ' 2024ರ ಜನವರಿ 13 ರಂದು ತೆರೆಗಪ್ಪಳಿಸಲಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಐದು ಚಿತ್ರಗಳು ಒಂದಾದ ಮೇಲೊಂದರಂತೆ ಬಿಡುಗಡೆ ಆಗುತ್ತಿರುವುದು ಬಹುಶಃ ಇದೇ ಮೊದಲು. 22ರ ಹರೆಯದಲ್ಲೇ ಶ್ರೀಲೀಲಾ ಅವರ ಸಿನಿ ಸಾಧನೆ ಅಪಾರ.
ಇದನ್ನೂ ಓದಿ:'ಆ ಸೂಪರ್ ಸ್ಟಾರ್ ನಟಿಯೊಂದಿಗೆ ಅಭಿನಯಿಸುವ ಕನಸು ಈಡೇರಿತು': ಡಾರ್ಲಿಂಗ್ ಪ್ರಭಾಸ್