ಕರ್ನಾಟಕ

karnataka

ETV Bharat / entertainment

'ಬ್ಯಾಂಗ್​' ಬಿಡುಗಡೆಗೆ ಸಿದ್ಧ: ಶಾನ್ವಿ ಶ್ರೀವಾತ್ಸವ್ ಸಿನಿಮಾಗೆ ಕಿಚ್ಚ ಸುದೀಪ್​ ಸಾಥ್​ - etv bharat kannada

Bang: ಶಾನ್ವಿ ಶ್ರೀವಾತ್ಸವ್ ಮುಖ್ಯಭೂಮಿಕೆಯಲ್ಲಿರುವ 'ಬ್ಯಾಂಗ್' ಸಿನಿಮಾ ಆಗಸ್ಟ್ 18 ರಂದು ತೆರೆ ಕಾಣಲಿದೆ.

bang
ಬ್ಯಾಂಗ್​

By

Published : Jul 28, 2023, 2:47 PM IST

'ಅವನೇ ಶ್ರೀಮನ್ನಾರಾಯಣ' ಬಳಿಕ ಶಾನ್ವಿ ಶ್ರೀವಾತ್ಸವ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಬ್ಯಾಂಗ್'. ಚಿತ್ರದ ಟೈಟಲ್​ನಿಂದಲೇ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಚಿತ್ರ ಸದ್ಯ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಸಮಯದಲ್ಲಿ ಚಿತ್ರಕ್ಕೆ ಸ್ಟಾರ್​ ಸ್ಪರ್ಶ ಸಿಕ್ಕಿದೆ. ‘ಬ್ಯಾಂಗ್’ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದು, ಚಿತ್ರತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಶಾನ್ವಿ ಶ್ರೀವಾತ್ಸವ್ ಇದೇ ಮೊದಲ ಬಾರಿಗೆ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದು ಡಾರ್ಕ್ ಕಾಮಿಡಿ ಆ್ಯಕ್ಷನ್ ಚಿತ್ರವಾಗಿದೆ.

ಈ ಕುರಿತು ಮಾತನಾಡಿರುವ ನಿರ್ದೇಶಕ ಗಣೇಶ್ ಪರಶುರಾಮ್, "ನಾವೆಲ್ಲರೂ ಸುದೀಪ್ ಅವರ ಚಿತ್ರಗಳನ್ನು ನೋಡಿ ಬೆಳೆದವರು. ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಅವರ ಚಿತ್ರ ನೋಡಿ ಪುಳಕಿತರಾದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹು ವರ್ಷಗಳ ಕನಸು ನನಸಾದಂತಾಯಿತು. ಚಿತ್ರದಲ್ಲಿನ ಸುದೀಪ್ ಅವರ ಉಪಸ್ಥಿತಿಯನ್ನು ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾತ್ಸವ್ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು" ಎಂದು ಹೇಳಿದರು.

ಇದನ್ನೂ ಓದಿ:ಟಾಲಿವುಡ್​ ಸ್ಟಾರ್​ ಪ್ರಭಾಸ್​ಗೆ ಶಾಕ್​.. ಡಾರ್ಲಿಂಗ್​ ಫೇಸ್​ಬುಕ್​ ಹ್ಯಾಕ್​ ಮಾಡಿದ ಹ್ಯಾಕರ್ಸ್​!

ಚಿತ್ರತಂಡ ಹೀಗಿದೆ.. 'ಬ್ಯಾಂಗ್' ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆಗೆ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ಸ್ಟೈಲಿಶ್‌ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಜೇತ್‌ ಚಂದ್ರ ಸಂಕಲನ, ಉದಯ್‌ ಲೀಲಾ ಛಾಯಾಗ್ರಹಣ, ಬಿ ಆರ್‌ ನವೀನ್‌ ಧ್ವನಿ ವಿನ್ಯಾಸ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಸಾಹಸ ನಿರ್ದೇಶನವನ್ನು ಚೇತನ್ ಮಾಡಿದ್ದಾರೆ. 'ನಮ್ ಗಣಿ ಬಿ.ಕಾಮ್ ಪಾಸ್‌' ಸಿನಿಮಾದಲ್ಲಿ ಗಮನ ಸೆಳೆದಿದ್ದ ನಾಟ್ಯ ರಂಗ, ಸುನೀಲ್ ಗುಜ್ಜರ್‌, ಜಹಾಂಗೀರ್, ನಾಗೇಂದ್ರ ಶಾ 'ಬ್ಯಾಂಗ್'ನಲ್ಲಿ ನಟಿಸುತ್ತಿದ್ದಾರೆ.

ಬ್ಯಾಂಗ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ಜುಲೈ 29ರಂದು ಟ್ರೇಲರ್ ಬಿಡುಗಡೆಯಾಗಲಿದೆ. 'ಯುಕೆ ಪ್ರೊಡಕ್ಷನ್ಸ್‌' ಬ್ಯಾನರ್‌ ಅಡಿ 'ಬ್ಯಾಂಗ್‌' ಚಿತ್ರಕ್ಕೆ ಪೂಜಾ ವಸಂತ್‌ ಕುಮಾರ್‌ ಮತ್ತು ವಸಂತ್‌ ಕುಮಾರ್‌ ಅವರು ಬಂಡವಾಳ ಹೂಡಿದ್ದಾರೆ. ಅಂದಹಾಗೆ, ಈ ಸಿನಿಮಾ ಕನ್ನಡ ಮಾತ್ರವಲ್ಲದೇ, ತೆಲುಗು ಭಾಷೆಯಲ್ಲಿಯೂ ಆಗಸ್ಟ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ:Captain Miller Teaser: ಧನುಷ್​ ಜನ್ಮದಿನಕ್ಕೆ 'ಕ್ಯಾಪ್ಟನ್​ ಮಿಲ್ಲರ್'​ ಟೀಸರ್ ಗಿಫ್ಟ್

ABOUT THE AUTHOR

...view details