ಕರ್ನಾಟಕ

karnataka

ETV Bharat / entertainment

ಶಾಕುಂತಲಂ ಬಿಡುಗಡೆಗೆ ಕ್ಷಣಗಣನೆ: ವ್ಯಾಪಕ ಪ್ರಚಾರ ಬೆನ್ನಲ್ಲೇ ನಟಿ ಸಮಂತಾ ಅಸ್ವಸ್ಥ - ಶಾಕುಂತಲಂ

ದಕ್ಷಿಣದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರ ಆರೋಗ್ಯ ಹದಗೆಟ್ಟಿದೆ.

Samantha health updates
ಸಮಂತಾ ಆರೋಗ್ಯ

By

Published : Apr 13, 2023, 12:30 PM IST

ಸಮಂತಾ ರುತ್ ಪ್ರಭು ಮತ್ತು ದೇವ್​ ಮೋಹನ್​ ಅಭಿನಯದ ಶಾಕುಂತಲಂ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತದ, ವಿಶೇಷವಾಗಿ ದಕ್ಷಿಣದ ಬಹುನಿರೀಕ್ಷಿತ ಚಿತ್ರ ನಾಳೆ ಚಿತ್ರಮಂದಿರಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಶಾಕುಂತಕಲಂ ಅದ್ಧೂರಿಯಾಗಿ ತೆರೆ ಕಾಣಲಿದೆ. ಈ ಹಿನ್ನೆಲೆ ನಟಿ ಸಮಂತಾ ಕಳೆದೊಂದು ತಿಂಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬ್ಯಾಕು ಟು ಬ್ಯಾಕ್​ ಸಂದರ್ಶನಗಳಲ್ಲಿ ಭಾಗಿ ಆಗುವ ಮೂಲಕ ಬ್ಯುಸಿ ಶೆಡ್ಯೂಲ್ ಕಳೆದಿದ್ದಾರೆ. ಇನ್ನೇನು ಸಿನಿಮಾ ತೆರೆಕಾಣಲು ಕೆಲವೇ ಗಂಟೆಗಳು ಬಾಕಿ ಎನ್ನುವಾಗ ಸಮಂತಾ ರುತ್ ಪ್ರಭು ಅಸ್ವಸ್ಥರಾಗಿದ್ದು, ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಇಷ್ಟು ದಿನಗಳ ಕಾಲ ಚಿತ್ರದ ವ್ಯಾಪಕ ಪ್ರಚಾರ ಕೈಗೊಂಡಿರುವ ಸಮಂತಾ ರುತ್ ಪ್ರಭು ಅವರ ಆರೋಗ್ಯ ಹದಗೆಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ತಾವು ಆರೋಗ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಹೌದು, ಬುಧವಾರದಂದು ಟ್ವೀಟ್ ಮಾಡಿರುವ ನಟಿ, ಜ್ವರದಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಮುಂಬರುವ ಪೌರಾಣಿಕ ಚಿತ್ರದ ಬಿಸಿ ಶೆಡ್ಯೂಲ್‌ಗಳು ಮತ್ತು ಪ್ರಚಾರಗಳ ನಂತರ ತಮ್ಮ ಧ್ವನಿ ಸಮಸ್ಯೆ ಎದುರಾಗಿರುವುದಾಗಿಯೂ ಅಭಿಮಾನಿಗಳಿಗೆ ತಿಳಿಸಿದರು.

ಟ್ವಿಟ್ಟರ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿರುವ ನಟಿ, ಈ ವಾರ ನನ್ನ ಚಿತ್ರದ ಪ್ರಚಾರಕ್ಕಾಗಿ ಮತ್ತು ನಿಮ್ಮ ಪ್ರೀತಿ ಸ್ವೀಕರಿಸಲು ನಾನು ನಿಜವಾಗಿಯೂ ಉತ್ಸುಕಳಾಗಿದ್ದೆ. ದುರಾದೃಷ್ಟವಶಾತ್, ಒತ್ತಡದ ವೇಳಾಪಟ್ಟಿಗಳು ಮತ್ತು ಪ್ರಚಾರಗಳು ಅದರ ಶುಲ್ಕ ಪಡೆದಿದೆ. ನಾನು ಜ್ವರದಿಂದ ಬಳಲುತ್ತಿದ್ದೇನೆ, ನನ್ನ ಧ್ವನಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಸಮಂತಾ ರುತ್ ಪ್ರಭು ಟ್ವೀಟ್​ ಬೆನ್ನಲ್ಲೇ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ನೀಡಲು ಶುರು ಹಚ್ಚಿಕೊಂಡಿದ್ದಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಟ್ವಿಟರ್ ಬಳಕೆದಾರರು ಕಾಮೆಂಟ್ ವಿಭಾಗಕ್ಕೆ ಸೇರಿದರು. ಬಳಕೆದಾರರೊಬ್ಬರು, "ನಾವು ಅರ್ಥಮಾಡಿಕೊಳ್ಳಬಲ್ಲೆವು, ನಿಮ್ಮ ಆರೋಗ್ಯ ಎಲ್ಲಕ್ಕಿಂತ ಮೊದಲ. ಕಾಳಜಿ ವಹಿಸಿ. ವಿಶ್ರಾಂತಿ ತೆಗೆದುಕೊಳ್ಳಿ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಏ. 14ಕ್ಕೆ ಕಾಯಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ. ಮತ್ತೊಬ್ಬರು, "ಮೊದಲು ನಿಮ್ಮ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಮಂತಾ, ಚಿಂತಿಸಬೇಡಿ, ನೀವು ನಿಮ್ಮ ಕೆಲಸವನ್ನು ಮಾಡಿದ್ದೀರಿ, ಕುಳಿತುಕೊಳ್ಳಿ ಮತ್ತು ಚೇತರಿಸಿಕೊಳ್ಳಿ ಎಲ್ಲವೂ ಸರಿಯಾಗುತ್ತದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಿನಿಪ್ರಿಯರಿಗೆ ಗುಡ್​ನ್ಯೂಸ್: ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬೋದಲ್ಲಿ ಮತ್ತೊಂದು ಸಿನಿಮಾ

'ಶಾಕುಂತಲಂ' ಕವಿ ಕಾಳಿದಾಸರ ಪ್ರಸಿದ್ಧ ನಾಟಕ ಶಾಕುಂತಲವನ್ನು ಆಧರಿಸಿದೆ. ಗುಣಶೇಖರ್ ಅವರು ನಿರ್ದೇಶಿಸಿದ ಈ ಚಲನಚಿತ್ರವು ಶಕುಂತಲಾ ಮತ್ತು ರಾಜ ದುಷ್ಯಂತನ ಪ್ರೇಮಕಥೆ ಹೇಳಲಿದೆ. ಪ್ರೀತಿಸಿ ಮದುವೆಯಾದ ನಂತರ ಅವರ ಭಾವನಾತ್ಮಕ ಪ್ರಯಾಣವನ್ನು ಚಿತ್ರ ಗುರುತಿಸುತ್ತದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಚಿತ್ರವು ನಾಳೆ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಬಹುದಿನಗಳ ನಂತರ ಸಮಂತಾ ರುತ್ ಪ್ರಭು ಅವರನ್ನು ತೆರೆ ಮೇಲೆ ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಕನ್ನಡದ KD ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡ ಬಾಲಿವುಡ್​ ನಟ ಸಂಜಯ್​ ದತ್

ABOUT THE AUTHOR

...view details