ಸಿನಿಮಾ ತಾರೆಯರು ಮನೆಯಿಂದ ಹೊರಗೆ ಸುತ್ತಾಡುವಾಗ ತುಂಬಾ ಜಾಗರೂಕರಾಗಿರುತ್ತಾರೆ. ತಾರೆಯರು ಎಲ್ಲೇ ಹೋದರೂ ಪಾಪರಾಜಿಗಳು ಅವರನ್ನು ಹಿಂಬಾಲಿಸಿರುತ್ತಾರೆ. ಅಲ್ಲದೇ ನಟ, ನಟಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಖಾಸಗಿತನಕ್ಕೆ ಅಡ್ಡಿಪಡಿಸುತ್ತಿರುವ ಪಾಪರಾಜಿಗಳ ವಿರುದ್ಧ ನಟ ಸೈಫ್ ಅಲಿಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ವರ್ತನೆಗೆ ನಟ ವ್ಯಂಗ್ಯ ರೀತಿಯಲ್ಲಿ ಮಾತನಾಡಿದ್ದಾರೆ.
ನಟ ಸೈಫ್ ಅಲಿಖಾನ್ ಅವರು ಪತ್ನಿ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ತಡರಾತ್ರಿ ಪಾರ್ಟಿಯಿಂದ ಹಿಂದಿರುಗುತ್ತಿದ್ದ ವೇಳೆ, ಅವರ ಮನೆಯ ಹೊರಗೆ ದಂಪತಿ ಫೋಟೋಗಾಗಿ ಪಾಪರಾಜಿಗಳು ಸಾಲುಗಟ್ಟಿ ನಿಂತಿದ್ದರು. ಈ ವೇಳೆ, ಕೊಂಚ ಅಸಮಾಧಾನಗೊಂಡ ನಟ, 'ನಮ್ಮ ಬೆಡ್ರೂಮ್ ತನಕ ಬನ್ನಿ..' ಎಂದು ವ್ಯಂಗ್ಯದ ಜೊತೆಗೆ ಹಾಸ್ಯ ರೀತಿಯಲ್ಲಿ ಮಾತನಾಡಿದ್ದಾರೆ. ಸೈಫ್ ಅಲಿಖಾನ್ ಕೋಪದಲ್ಲಿ ಹೇಳದಿದ್ದರೂ, ಸಿನಿ ತಾರೆಯರಿಗೆ ಪಾಪರಾಜಿಗಳ ವರ್ತನೆ ನಿಜಕ್ಕೂ ಆತಂಕ ಉಂಟುಮಾಡಿದೆ.
ಈ ಹಿಂದೆ, ಆಲಿಯಾ ಭಟ್ ತನ್ನ ಅನುಮತಿಯಿಲ್ಲದೇ ತನ್ನ ಮನೆಯಲ್ಲಿಯೇ ಫೋಟೋ ತೆಗೆಯುವ ಮೂಲಕ ಪಾಪರಾಜಿಗಳು ನನ್ನ ಖಾಸಗಿತನವನ್ನು ಆಕ್ರಮಿಸಿದ್ದಾರೆ ಎಂದು ಆರೋಪಿಸಿದ್ದರು. ಅನೇಕ ಸೆಲೆಬ್ರಿಟಿಗಳು ಆಲಿಯಾ ಹೇಳಿಕೆಗೆ ಬೆಂಬಲವಾಗಿ ನಿಂತಿದ್ದರು. ಅನುಷ್ಕಾ ಶರ್ಮಾ, ಅರ್ಜುನ್ ಕಪೂರ್, ಜಾನ್ವಿ ಕಪೂರ್ ಮತ್ತು ಕರಣ್ ಜೋಹರ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿಗಳ ಬಗ್ಗೆ ಹೇಳಿಕೊಂಡಿದ್ದರು.
ಇದನ್ನೂ ಓದಿ:'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್ ಬಿಡುಗಡೆಗೂ ಮುನ್ನವೇ ಸರ್ಪ್ರೈಸ್ ಕೊಟ್ಟ ನಿರ್ದೇಶಕ ಆರ್ ಚಂದ್ರು