ಕರ್ನಾಟಕ

karnataka

ETV Bharat / entertainment

ಇವರ ವಯಸ್ಸು 68 ಅಂದ್ರೆ ನಂಬ್ತೀರಾ - ಯುವ ಕಲಾವಿದರೊಂದಿಗೆ ತರುಣಿಯಂತೆ ಕಂಗೊಳಿಸಿದ ಬಾಲಿವುಡ್​ ಬ್ಯೂಟಿ ರೇಖಾ - ಮನೀಶ್ ಮಲ್ಹೋತ್ರಾ ಪಾರ್ಟಿ

ಡಿಸೈನರ್​ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್​​ ಹಿರಿಯ ನಟಿ ರೇಖಾ ಅವರು ಯುವತಿಯಂತೆ ಕಂಗೊಳಿಸಿದ್ದಾರೆ.

Rekha stuns in black
ಯುವ ಕಲಾವಿದರೊಂದಿಗೆ ಹಿರಿಯ ನಟಿ ರೇಖಾ

By

Published : Aug 1, 2023, 1:47 PM IST

ಬಾಲಿವುಡ್​ನ ಜನಪ್ರಿಯ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಇತ್ತೀಚೆಗೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸೆಲೆಬ್ರಿಟಿ ಗೆಟ್ ಟುಗೆದರ್ ಪಾರ್ಟಿಯನ್ನು ಆಯೋಜಿಸಿದ್ದರು. ಸೋಮವಾರದಂದು ಇನ್​ಸ್ಟಾಗ್ರಾಮ್​ನಲ್ಲಿ ಈ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಡಿಸೈನರ್​ ಶೇರ್ ಮಾಡಿರುವ ಪೋಸ್ಟ್‌ನಲ್ಲಿ, ಹಿರಿಯ ನಟಿ ರೇಖಾ ಅವರು ಕಲಾವಿದರಾದ ಜಾನ್ವಿ ಕಪೂರ್, ಪರಿಣಿತಿ ಚೋಪ್ರಾ, ಕುಶಿ ಕಪೂರ್, ಮನೀಶ್ ಮಲ್ಹೋತ್ರಾ ಮತ್ತು ಅವರ ಆಪ್ತ ಸ್ನೇಹಿತರೊಬ್ಬರೊಂದಿಗೆ ಕ್ಯಾಮರಾಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಫೋಟೋಗಳನ್ನು ಹಂಚಿಕೊಂಡ ಡಿಸೈನರ್​ ಮನೀಶ್ ಮಲ್ಹೋತ್ರಾ, "ದೀರ್ಘ ಕೆಲಸದ ನಂತರ ಮನೆಯಲ್ಲಿ ಈ ರೀತಿಯ ಗೆಟ್​ ಟುಗೆದರ್ ರಿಲ್ಯಾಕ್ಸ್ ಅಂಡ್​​ ಫನ್​ ಮೂಡ್​ಗೆ ಕೊಂಡೊಯ್ಯುತ್ತವೆ''. ರೇಖಾಜಿ, ಪರಿಣಿತಿ ಚೋಪ್ರಾ, ಜಾನ್ವಿ ಕಪೂರ್​, ಕುಶಿ ಕಪೂರ್​ ಹೆಸರನ್ನು ಉಲ್ಲೇಖಿಸಿ, ಫ್ರೆಂಡ್ಸ್ ಫಾರೆವರ್​, ಲವ್​'' ಎಂದು ಬರೆದುಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಹಿರಿಯ ನಟಿ ರೇಖಾ ಅಮೋಘ ಅಭಿನಯ ಮಾತ್ರವಲ್ಲದೇ ತಮ್ಮ ರೂಪಕ್ಕೆ ಹೆಸರುವಾಸಿಯಾಗಿದ್ದಾರೆ. ಸದ್ಯ ಬ್ಲ್ಯಾಕ್​​ ಡ್ರೆಸ್​ನಲ್ಲಿ ಬಾಲಿವುಡ್​ ಬ್ಯೂಟಿ ಕಂಗೊಳಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳು ಸದ್ದು ಮಾಡುತ್ತಿವೆ.

ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಫೋಟೋ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಸದ್ದು ಮಾಡಿದರು. ರೆಡ್​ ಹಾರ್ಟ್ ಮತ್ತು ಫೈಯರ್ ಎಮೋಜಿಗಳೊಂದಿಗೆ ತಮ್ಮ ಪ್ರೀತಿ ವ್ಯಕ್ತಪಡಿಸಿದರು. "ರೇಖಾ ಜಿ ಮೇಲೆ ನನ್ನ ಕಣ್ಣುಗಳು" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, 'ಬಿಟೌನ್​​ನಲ್ಲಿರುವ ಈ ಹೊಸ ಹದಿಹರೆಯದ ಹುಡುಗಿಯನ್ನು (ರೇಖಾ) ಪ್ರೀತಿಸುತ್ತೇನೆ' ಎಂದು ತಿಳಿಸಿದ್ದಾರೆ.

ನಟಿ ಪರಿಣಿತಿ ಚೋಪ್ರಾ ಕೂಡ ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪರಿಣಿತಿ ಡಿಸೈನರ್ ಮತ್ತು ಹಿರಿಯ ನಟಿಯೊಂದಿಗೆ ಕ್ಯಾಮರಾಗೆ ಪೋಸ್ ನೀಡುತ್ತಿದ್ದಾರೆ. ಇಶಕ್​ಝಾದೆ ನಟಿ ರೇಖಾರನ್ನು ತಬ್ಬಿಕೊಂಡು ಕ್ಯಾಮರಾಗೆ ಫೋಸ್​ ಕೊಟ್ಟಿದ್ದರೆ, ಡಿಸೈನರ್​ ಮನೀಶ್ ಮಲ್ಹೋತ್ರಾ ಅವರ ಬಳಿ ನಿಂತು ಕ್ಯಾಮರಾ ಕಂಡು ನಸು ನಕ್ಕರು.

ಮುಂಬೈನಲ್ಲಿ ಇತ್ತೀಚೆಗೆ ಡಿಸೈನರ್​ ಮನೀಶ್ ಮಲ್ಹೋತ್ರಾ ಫ್ಯಾಶನ್​ ಈವೆಂಟ್​ ಒಂದನ್ನು ಆಯೋಜಿಸಿದ್ದರು. ಕೌಚರ್ ಶೋ 2023ನಲ್ಲಿ ತಮ್ಮ ಹೊಸ ಡ್ರೆಸ್​ ಕಲೆಕ್ಷನ್​ಗಳನ್ನು ಪ್ರದರ್ಶಿಸಿದರು. ಈವೆಂಟ್​​ನಲ್ಲಿ ನಟರಾದ ರಣ್​​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಹೆಜ್ಜೆ ಹಾಕಿ, ಎಲ್ಲರ ಗಮನ ಸೆಳೆದಿದ್ದರು.

ಇದನ್ನೂ ಓದಿ:Taapsee Pannu Birthday: ಜನ್ಮದಿನದ ಸಂಭ್ರಮದಲ್ಲಿರುವ ಬಹುಭಾಷಾ ನಟಿ ತಾಪ್ಸಿ ಪನ್ನುಗೆ ಶುಭಾಶಯಗಳ ಮಹಾಪೂರ

ಇನ್ನೂ ಚೆಲುವೆ ರೇಖಾ ಅವರು ಖೂಬ್ಸೂರತ್, ಬಸೇರಾ, ಖೂನ್ ಭರಿ ಮಾಂಗ್, ಏಕ್ ಹಿ ಭೂಲ್, ಜೀವನ್ ಧಾರಾ, ಮತ್ತು ಅಗರ್ ತುಮ್ ನಾ ಹೋತೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ, ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಉಮ್ರಾವ್ ಜಾನ್‌ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯದಾಗಿ ಯಮ್ಲಾ ಪಾಗ್ಲಾ ದೀವಾನಾ: ಫಿರ್ ಸೆ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ವಿಶೇಷ ಪಾತ್ರ ನಿರ್ವಹಿಸಿ ಗಮನ ಸೆಳೆದರು.

ABOUT THE AUTHOR

...view details