ಸ್ಯಾಂಡಲ್ವುಡ್ನ ನಟ ಡಾಲಿ ಧನಂಜಯ್ ಸಸ್ಪೆನ್ಸ್ & ಥ್ರಿಲ್ಲರ್ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ', 'ಹೊಯ್ಸಳ', 'ಉತ್ತರಕಾಂಡ', ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿರತರಾಗಿರುವ ಇವರು, ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಸುದ್ದಿ ನೀಡುವ ಉತ್ಸಾಹದಲ್ಲಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡುತ್ತಾ ಸದ್ಯ 12-1=2023 ಎಂಬ ಊಹಾತ್ಮಕ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿರ್ಬೋದು? ನೀವೇ ಕಂಡು ಹಿಡಿಯಿರಿ ನೋಡೋಣ ಎಂಬ ಗೂಢಾರ್ಥದಲ್ಲಿ ಆ ಟ್ವಿಟರ್ ಪೋಸ್ಟ್‌ಗೆ ಶೀರ್ಷಿಕೆ ಕೂಡ ಕೊಟ್ಟಿದ್ದಾರೆ. ಡಾಲಿಯ ಈ ಟ್ವೀಟ್ ಗಮನಿಸಿದ ಅಭಿಮಾನಿಗಳು, ಮದುವೆ ಆಗುತ್ತಿರುವ ಗೆಳೆಯ ವಸಿಷ್ಠ ಸಿಂಹ ಅವರ ಹಾದಿಯಲ್ಲಿದ್ದಾರಾ? ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ಕೂಡ ನಿಮ್ಮ ಮದುವೆಯ ದಿನಾಂಕ (Your Wedding Date) ಇರಬಹುದು ಎಂದು ರಿಪ್ಲೈ ಮಾಡಿದ್ದಾರೆ. ಇನ್ನೂ ಕೆಲವರು ಇದು ನಿಮ್ಮ ಮುಂದಿನ ನಿರ್ಮಾಣದ ಚಿತ್ರವೇ? ಎಂದು ಕೇಳಿದ್ದಾರೆ.
ಮೇಲ್ನೋಟಕ್ಕಿದು ಅವರ ನಿರ್ಮಾಣದ ಹೊಸ ಚಿತ್ರ ಇರಬಹುದು ಎಂದು ಹೇಳಲಾಗುತ್ತಿದೆ. ಇದು ಅಲ್ಲದೇ ಹೋದರೆ ಹೊಸ ಚಿತ್ರದ ಬಿಡುಗಡೆಯ ದಿನಾಂಕವಿರಬಹುದು. ಅದನ್ನೇ ಮೆಥಮೆಟಿಕಲ್ ರೂಪದಲ್ಲಿ ಈ ರೀತಿ ಹಿಂಟ್ ಕೊಟ್ಟಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇಲ್ಲ, ಇಲ್ಲ ಇದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆ ದಿನಾಂಕ ಇರಬೇಕೇನೋ ಎಂದು ಕೆಲವರು ಗೆಸ್ ಮಾಡಿದ್ದಾರೆ. ನಾನಾ ಅರ್ಥ ನೀಡುವಂತಿರುವ ಈ ವಿಡಿಯೋ ಬಗ್ಗೆ ಡಾಲಿ ಮಾತ್ರ ಈವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಧನಂಜಯ್ ತಮ್ಮ ಸಿನಿಮಾಗಳ ಜೊತೆಗೆ ಇತ್ತೀಚೆಗೆ ತಮ್ಮ ಮದುವೆ ಬಗ್ಗೆಯೂ ಸಖತ್ ಸುದ್ದಿಯಲ್ಲಿರುವ ಕ್ರೇಜಿ ನಟ. ತನ್ನ ಆತ್ಮೀಯ ಗೆಳೆಯ ವಸಿಷ್ಠ ಸಿಂಹ ಹಸೆಮಣೆ ಏರುತ್ತಿದ್ದು ಇದರ ಬೆನ್ನಲ್ಲೇ ಮುಂದಿನ ಸರದಿ ನಿಮ್ಮದೇ (ಧನಂಜಯ್) ಎಂಬ ಅರ್ಥದಲ್ಲಿ ಮೋಹಕ ತಾರೆ ರಮ್ಯಾ ಕೂಡ ಕಾಮೆಂಟ್ ಮಾಡಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ. ಗೆಳೆಯರು ಸಹ ತಲೆಬಿಸಿ ಮಾಡಿಕೊಂಡಿದ್ದು ಈ ಮೆಥಮೆಟಿಕಲ್ ರಹಸ್ಯ ಬೇಧಿಸಲು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಒಟ್ನಲ್ಲಿ ಸಸ್ಪೆನ್ಸ್ ಅಂತೂ ಇದ್ದೇ ಇದೆ, ಕಾದು ನೋಡಬೇಕಷ್ಟೇ!.
ಇದನ್ನೂ ಓದಿ:ಅಣ್ಣನ ಪತ್ನಿಗೆ ವರದಕ್ಷಿಣೆ ಕಿರುಕುಳ: ಸ್ಯಾಂಡಲ್ವುಡ್ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ!!