ಕರ್ನಾಟಕ

karnataka

ETV Bharat / entertainment

ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ.. ಹೆಸರೇನು ಗೊತ್ತಾ? - ನಿಖಿಲ್ ಮಗನ ನಾಮಕರಣ ಕಾರ್ಯಕ್ರಮ

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಗಂಡು ಮಗುವಿಗೆ 9 ತಿಂಗಳ ಬಳಿಕ ನಾಮಕರಣ ಕಾರ್ಯಕ್ರಮ ನಡೆದಿದೆ.

nikhil-kumaraswamy-son-naming-ceremony-in-bengaluru
ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ.. ಹೆಸರೇನು ಗೊತ್ತಾ?

By

Published : Jun 8, 2022, 1:22 PM IST

Updated : Jun 8, 2022, 1:33 PM IST

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಗಂಡು ಮಗುವಿಗೆ 9 ತಿಂಗಳ ಬಳಿಕ ನಾಮಕರಣ ಕಾರ್ಯಕ್ರಮ ಜರುಗಿದೆ. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಪುತ್ರನಿಗೆ 10:30ರಿಂದ 12:20ರವರ ನಡುವಿನ ಶುಭ ಲಗ್ನದಲ್ಲಿ ನಾಮಕರಣ ಮಾಡಲಾಗಿದೆ.

ನಾಮಕರಣ ಕಾರ್ಯಕ್ರಮದಲ್ಲಿ ಹೆಚ್​ಡಿಕೆ

ನಿಖಿಲ್​ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲಾಗಿದೆ. ಆವ್ಯನ್ ದೇವ್ ಎಂದರೆ ಪರ್ಫೆಕ್ಟ್ ಎಂದು ಅರ್ಥವಂತೆ. ಎಲ್ಲಾ ವಿಚಾರದಲ್ಲೂ ಸರಿ ಎಂಬ ಅರ್ಥ ಎಂಬಂತೆ ಆವ್ಯನ್ ದೇವ್ ಎಂದು ಹೆಸರು ಇಡಲಾಗಿದೆ. 2021ರ ಸೆಪ್ಟೆಂಬರ್ 24ರಂದು ನಿಖಿಲ್, ರೇವತಿ ದಂಪತಿ ಪುತ್ರನನ್ನು ಬರಮಾಡಿಕೊಂಡಿದ್ದರು.

ನಿಖಿಲ್ ಪುತ್ರನ ನಾಮಕರಣ ಕಾರ್ಯಕ್ರಮ

ಸದ್ಯ ಮಗುವಿಗೆ 9 ತಿಂಗಳು ತುಂಬಿದ್ದು, ಶುಭ ಕಾರ್ಯದ ವೇಳೆ ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಭಿಷೇಕ ಕಾರ್ಯಕ್ರಮ ನಡೆದಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ.

ನಾಮಕರಣ ಕಾರ್ಯಕ್ರಮ

2020ರ ಏಪ್ರಿಲ್​ನಲ್ಲಿ ರೇವತಿ ಜೊತೆ ನಿಖಿಲ್​ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಲಾಕ್​ಡೌನ್​ ನಿಯಮಗಳ ಅನುಸಾರ ದೇವಗೌಡರ ಕುಟುಂಬದಲ್ಲಿ ವಿವಾಹ ಸಮಾರಂಭ ನೆರವೇರಿತ್ತು. ಬಿಡದಿ ಬಳಿ ಇರುವ ಫಾರ್ಮ್​ಹೌಸ್​ನಲ್ಲಿ ರೇವತಿ ಮತ್ತು ನಿಖಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ:ವಿವಾದಾತ್ಮಕ ಹೇಳಿಕೆ: ನೂಪುರ್​ ಶರ್ಮಾ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

Last Updated : Jun 8, 2022, 1:33 PM IST

ABOUT THE AUTHOR

...view details