ಕರ್ನಾಟಕ

karnataka

ETV Bharat / entertainment

ಟಾಲಿವುಡ್​ನಲ್ಲಿ ಬೆಳೆಯುತ್ತಿರುವ ಕರುನಾಡ ಕುಡಿ.. 'ಇಂಟಿಂಟಿ ರಾಮಾಯಣಂ' ಸಿನಿಮಾಗೆ ನವ್ಯಾ ನಾಯಕಿ - etv bharat kannada

ಬಹುಭಾಷಾ ಕಿರುತೆರೆ ನಟಿ ನವ್ಯಾ ಸ್ವಾಮಿಗೆ 'ಇಂಟಿಂಟಿ ರಾಮಾಯಣಂ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ.

navya
ನವ್ಯಾ ಸ್ವಾಮಿ

By

Published : Mar 11, 2023, 10:08 AM IST

ಜನಪ್ರಿಯ ಹಾಗೂ ಬಹುಭಾಷಾ ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಇದೀಗ ಸಿನಿಮಾ ಅವಕಾಶ ಒದಗಿ ಬಂದಿದೆ. ಮೈಸೂರು ಮೂಲದ ಈ ಹುಡುಗಿ ಓದುತ್ತಿರುವಾಗಲೇ ಆಡಿಷನ್​ ಕೊಟ್ಟು ನಟನೆಯಲ್ಲಿ ಗುರುತಿಸಿಕೊಂಡ ಬಹುಮುಖ ಪ್ರತಿಭೆ. ಕನ್ನಡ ಟೆಲಿವಿಷನ್​ ನಟಿಯರಲ್ಲಿ ಜನಪ್ರಿಯ ಸೆಲೆಬ್ರಿಟಿಯೂ ಆಗಿರುವ ಇವರು, ಓರ್ವ ಮಾಡಲ್​ ಕೂಡ ಹೌದು. ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಲಕುಮಿ' ಧಾರಾವಾಹಿ ಮೂಲಕ ಮೊದಲಿಗೆ ಬಣ್ಣ ಹಚ್ಚಿದ ನವ್ಯಾ ಕರ್ನಾಟಕದ ಮನೆಮಾತಾಗಿದ್ದರು. ಜೊತೆಗೆ ರಿಯಾಲಿಟಿ ಶೋಗಳ ನಿರೂಪಕಿಯೂ ಆಗಿದ್ದರು.

ನವ್ಯಾ ಅವರು ಕನ್ನಡ 'ಸ್ಟಾರ್​ ಸವಿರುಚಿ' ಶೋದಿಂದ ಟಾಲಿವುಡ್​ ಅಂಗಳಕ್ಕೆ ಜಿಗಿದರು. ಇದು ಅವರ ಪ್ರತಿಭೆಗೆ ಒಲಿದುಬಂದ ಸುವರ್ಣಾವಕಾಶಗಳಲ್ಲಿ ಒಂದು. ಬಳಿಕ ಅವರನ್ನು ಹುಡುಕಿಕೊಂಡು ಬಂದ 'ನಾ ಪೇರು ಮೀನಾಕ್ಷಿ' ಎಂಬ ತೆಲುಗು ಧಾರವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಈ ಸೀರಿಯಲ್​ ಅವರ ಕೈ ಹಿಡಿಯಿತು. ಇದಾದ ನಂತರ ತೆಲುಗು ಧಾರಾವಾಹಿಗಳಲ್ಲಿ ಅವರಿಗೆ ಸಾಲು ಸಾಲು ಆಫರ್​ಗಳು ಬಂದವು. ಭಾರ್ಯಾಮಣಿ, ತಲಂಬ್ರಾಲು, ಕಂತೆ ಕೂತೂರ್ನೆ ಕನು, ವಾಣಿ ರಾಣಿ, ವಿನೋದ ಭೋಜನಂಬು ಮುಂತಾದ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ನವ್ಯಾ ಮತ್ತಷ್ಟು ಹತ್ತಿರವಾದರು.

ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್ 5ನೇ ಸೀಸನ್: ಸಾಧಕರ ಸೀಟ್​ನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್?

ಬಳಿಕ ತಾರೆ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು. ಜೊತೆಗೆ ತೆಲುಗು ಟಿವಿ ಶೋಗಳಲ್ಲೂ ನವ್ಯಾ ಮಿಂಚಿದ್ದಾರೆ. ಸದ್ಯ ನವ್ಯಾ ಸ್ವಾಮಿಗೆ ಟಾಲಿವುಡ್​ನಲ್ಲಿ ಸಿನಿಮಾ ಆಫರ್​ಗಳು ಬರುತ್ತಿವೆ. ಇತ್ತೀಚೆಗೆ ಬುಟ್ಟಬೊಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ನಟಿಗೆ 'ಇಂಟಿಂಟಿ ರಾಮಾಯಣಂ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒದಗಿ ಬಂದಿದೆ. ಸಿನಿಮಾ ರಂಗದಲ್ಲಿ ಮಿಂಚಲು ನವ್ಯಾ ಸಜ್ಜಾಗಿದ್ದಾರೆ. ಧಾರಾವಾಹಿ ಮೂಲಕ ಮನೆಮಾತಾಗಿದ್ದ ತಾರೆ ಇನ್ಮುಂದೆ ಚಲನಚಿತ್ರದಲ್ಲೂ ಮಿಂಚಲಿದ್ದಾರೆ. ಸೌಂದರ್ಯದ ಜೊತೆಗೆ ನಟನೆಯಿಂದ ಕ್ರೇಜ್​ ಹೆಚ್ಚಿಸಿಕೊಂಡಿರುವ ಕರುನಾಡ ಕುವರಿ ನವ್ಯಾಗೆ ಇಂತಹ ಅವಕಾಶಗಳು ಒದಗಿ ಬರುತ್ತಿರುವುದು ನಿಜಕ್ಕೂ ಸಂತಸದ ವಿಚಾರ.

ಮುಂದೆಯೂ ಸಿನಿಮಾದಲ್ಲಿ ನಟಿಸುತ್ತೇನೆ.. ಈ ಬಗ್ಗೆ ಮಾತನಾಡಿರುವ ನವ್ಯಾ ಸ್ವಾಮಿ, ನನ್ನ ಕನಸು ನನಸಾಗುವ ಸಮಯ. ನಾನು ಧಾರವಾಹಿಗಳನ್ನು ಮಾಡುವಾಗ ಸಿನಿಮಾದಲ್ಲಿ ನಟಿಸಬೇಕೆಂದು ಬಯಸಿದ್ದೆ. ನಾನು ಸಾಕಷ್ಟು ಸೀರಿಯಲ್​ಗಳನ್ನು ಮಾಡಿದ್ದೇನೆ. ಇದೀಗ ನನಗೆ ಇಂಟಿಂಟಿ ರಾಮಾಯಣಂ ಚಲನಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂದಿದೆ. ಇಂತಹ ಒಳ್ಳೆ ಆಪರ್ಚ್ಯುನಿಟಿ ಸಿಕ್ಕಿರುವುದು ನಿಜಕ್ಕೂ ಖುಷಿ ತಂದು ಕೊಟ್ಟಿದೆ. ಇನ್ನು ಮುಂದೆ ಕೂಡ ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇನೆ ಎಂದು ಹೇಳಿದರು. ರಾಹುಲ್​ ರಾಮಕೃಷ್ಣ ಮತ್ತು ನವ್ಯಾ ಸ್ವಾಮಿ ಜೊತೆಯಾಗಿ ನಟಿಸಿರುವ ಇಂಟಿಂಟಿ ರಾಮಾಯಣಂ ಇದೇ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ:25 ಗ್ರಾಂನ ಉಡುಗೆ, ಮತ್ಯಾಕೆ ದೊಡ್ಡ ಲಗೇಜ್?​: ಮತ್ತೆ ಟ್ರೋಲ್​ಗೊಳಗಾದ ಉರ್ಫಿ ಜಾವೇದ್!

ABOUT THE AUTHOR

...view details