ಕರ್ನಾಟಕ

karnataka

ETV Bharat / entertainment

'ಭಗವಂತ ಕೇಸರಿ' ರಿಲೀಸ್​ಗೆ ಮುಹೂರ್ತ ಫಿಕ್ಸ್​: ಬಾಲಯ್ಯ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ - ಈಟಿವಿ ಭಾರತ ಕನ್ನಡ

ದಸರಾ ಪ್ರಯುಕ್ತ ಅಕ್ಟೋಬರ್​ 19 ರಂದು ನಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ ಕೇಸರಿ' ಸಿನಿಮಾ ಬಿಡುಗಡೆಯಾಗಲಿದೆ.

bhagwant kesari
ಭಗವಂತ ಕೇಸರಿ

By

Published : Jul 22, 2023, 10:50 PM IST

ಯಾವುದೇ ಪಾತ್ರ ಅಥವಾ ಯಾವುದೇ ಕಥೆ ಇರಲಿ ನೂರಕ್ಕೆ ನೂರರಷ್ಟು ಬದ್ಧತೆ ತೋರಿಸುವ ಕೆಲವೇ ಕೆಲ ನಟರ ಪೈಕಿ ನಂದಮೂರಿ ಬಾಲಕೃಷ್ಣ ಕೂಡ ಒಬ್ಬರು. ತಂದೆ ನಂದಮೂರಿ ತಾರಕ ರಾಮರಾವ್ ಅವರ ಪರಂಪರೆ ಮುಂದುವರಿಸಿ, ತೆಲುಗು ಇಂಡಸ್ಟ್ರಿಯಲ್ಲಿ ಟಾಪ್ ಹೀರೋ ಎನಿಸಿಕೊಂಡವರು. ಯುವ ನಾಯಕ ನಟರಿಗೆ ಸ್ಫೂರ್ತಿ ಇವರು. ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 60ರ ಹರೆಯದಲ್ಲೂ ಅತಿ ಉತ್ಸಾಹದಿಂದ ಸಿನಿ ಪ್ರೇಮಿಗಳನ್ನು ರಂಜಿಸುತ್ತಾರೆ.

ಟಾಲಿವುಡ್​​ನ ಸೂಪರ್​ ಸ್ಟಾರ್ ಎನಿಸಿಕೊಂಡಿರುವ​ ನಂದಮೂರಿ ಬಾಲಕೃಷ್ಣ ನಟನೆಯ ಮುಂದಿನ ಚಿತ್ರ 'ಭಗವಂತ ಕೇಸರಿ'. ಈ ಸಿನಿಮಾಗೆ ಪ್ರಾರಂಭದಲ್ಲಿ NBK108 ಟೈಟಲ್​ ಇಡಲಾಗಿತ್ತು. ಅದಾದ ಬಳಿಕ ಕೆಲವು ದಿನಗಳ ನಂತರ ಚಿತ್ರತಂಡ ಟೈಟಲ್​ ಪೋಸ್ಟರ್​ ಅನ್ನು ಅನಾವರಣಗೊಳಿಸಿತ್ತು. ಬಾಲಕೃಷ್ಟ ಅವರ ಹುಟ್ಟುಹಬ್ಬದ ದಿನದಂದು ಭಗವಂತ ಕೇಸರಿ ಟೀಸರ್​ ರಿಲೀಸ್​ ಮಾಡಲಾಗಿತ್ತು. ಇದೀಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದ್ದು, ದಿನಾಂಕ ಅನೌನ್ಸ್​ ಆಗಿದೆ.

ಅನಿಲ್ ರವಿಪುಡಿ ನಿರ್ದೇಶನದಲ್ಲಿ 'ಭಗವಂತ ಕೇಸರಿ' ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ವಿಜಯದಶಮಿಯ ಉಡುಗೊರೆಯಾಗಿ ಈ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಇಂದು ಚಿತ್ರತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿದೆ. ದಸರಾ ಪ್ರಯುಕ್ತ ಅಕ್ಟೋಬರ್​ 19 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಬಾಲಯ್ಯ ಟೀಮ್​ ಮತ್ತೊಮ್ಮೆ ಅಧಿಕೃತವಾಗಿ ಘೋಷಿಸಿದೆ. ಶೈನ್​ ಸ್ಕ್ರೀನ್​ ಈ ವಿಚಾರವನ್ನು ಟ್ವೀಟ್​ ಮಾಡುವ ಮೂಲಕ ತಿಳಿಸಿದೆ.

ಇದನ್ನೂ ಓದಿ:ಕಾನ್ಪುರದಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪ್ರಚಾರ: ರಣ್​ವೀರ್ ​ - ಆಲಿಯಾ ಕಂಡು ಸಂತಸಪಟ್ಟ ಅಭಿಮಾನಿಗಳು

ಭಗವಂತ ಕೇಸರಿ ಟೀಸರ್​:ಬಾಲಕೃಷ್ಟ ಅವರ ಹುಟ್ಟುಹಬ್ಬದ ದಿನದಂದು ಭಗವಂತ ಕೇಸರಿ ಟೀಸರ್​ ರಿಲೀಸ್​ ಆಗಿದೆ. ಮೊದಲ ನೋಟ​ ಆಕರ್ಷಕವಾಗಿದ್ದು, ಫುಲ್​ ರಗಡ್​ ಅವತಾರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ. ತೆಲಂಗಾಣ ಆಡುಭಾಷೆಯಲ್ಲಿರುವ ಬಾಲಯ್ಯ ಅವರ ಡೈಲಾಗ್‌ಗಳು ಪ್ರೇಕ್ಷಕರನ್ನು ಸೆಳೆದಿವೆ. ಮಾಸ್​ ಅವತಾರದಲ್ಲಿರುವ ಬಾಲಯ್ಯ ಚಿತ್ರದಲ್ಲಿ ಕಾಮಿಡಿ ಮಾಡುವ ಮೂಲಕ ಮನರಂಜನೆ ಕೂಡ ಕೊಡಲಿದ್ದಾರೆ.

ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಹಿರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಅವರು ಬಾಲಯ್ಯ ಅವರಿಗೆ ತಕ್ಕಂತೆ ಮಾಸ್ ಎಲಿಮೆಂಟ್ಸ್ ಸೇರಿಸಿ, ಮನರಂಜನೆಯನ್ನು ಮಿಸ್ ಮಾಡದೇ ಚಿತ್ರವನ್ನು ರೂಪಿಸುತ್ತಿದ್ದಾರೆ. ಬಾಲಯ್ಯ ಜೊತೆ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.

ಇವರಿಬ್ಬರ ಕಾಂಬಿನೇಷನ್​ನ ಮೊದಲ ಚಿತ್ರವಿದು. ಶ್ರೀಲೀಲಾ ಮತ್ತು ತಮಿಳಿನ ಸ್ಟಾರ್ ನಟ ಶರತ್ ಕುಮಾರ್ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಬಾಲಯ್ಯ ಎದುರು ವಿಲನ್​ ಅಗಿ ಕಾಣಿಸಿಕೊಳ್ಳಲಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ಅಡಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:'ಬ್ರೋ' ಟ್ರೇಲರ್​ ರಿಲೀಸ್​: ಪವನ್​ ಕಲ್ಯಾಣ್ ​- ಸಾಯಿ ತೇಜ್ ​ಕಾಂಬೋ ಸೂಪರ್​

ABOUT THE AUTHOR

...view details