ಕರ್ನಾಟಕ

karnataka

ETV Bharat / entertainment

ಸಲ್ಮಾನ್ ಖಾನ್, ಅವರ ತಂದೆಗೆ ಕೊಲೆ ಬೆದರಿಕೆ ಪತ್ರ.. ಹೆಚ್ಚಿನ ಭದ್ರತೆ ನೀಡಿದ ಗೃಹ ಇಲಾಖೆ - Salman Khan house

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆಯನ್ನ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬರುತ್ತಿದ್ದಂತೆ ಮುಂಬೈ ಪೊಲೀಸರು ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

Mumbai Police team arrives at Salman Khan house
Mumbai Police team arrives at Salman Khan house

By

Published : Jun 6, 2022, 1:46 PM IST

ಮುಂಬೈ:ಬಾಲಿವುಡ್ ನಟ ಸಲ್ಮಾನ್ ಖಾನ್​ ಹಾಗೂ ಅವರ ತಂದೆ ಸಲೀಂ ಖಾನ್​​ ಅವರಿಗೆ ಜೀವ ಬೆದರಿಕೆ ಪತ್ರ ಬಂದಿರುವ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಇಲಾಖೆ ಹೆಚ್ಚಿನ ಭದ್ರತೆ ನೀಡಿದೆ. ಜೊತೆಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರ ತಂಡ ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದು, ಭದ್ರತೆ ಕುರಿತಾಗಿ ಎಲ್ಲ ರೀತಿಯ ಮಾಹಿತಿ ಪಡೆದುಕೊಂಡಿದೆ. ನಿನ್ನೆ ಸಲ್ಮಾನ್ ಖಾನ್ ತಂದೆ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಇದರ ಬೆನ್ನಲ್ಲೇ ಖಾಕಿ ಪಡೆ ಕಾರ್ಯೋನ್ಮುಖವಾಗಿದೆ. ಜೊತೆಗೆ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು ಮಾಡಿಕೊಂಡು, ತನಿಖೆ ಆರಂಭಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯ್ ಎಂಬುದು ಗೊತ್ತಾಗುತ್ತಿದ್ದಂತೆ ನಟ ಸಲ್ಮಾನ್ ಖಾನ್​ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ನಟ ಸಲ್ಮಾನ್​ ಖಾನ್​​ ಅವರ ತಂದೆ ಭಾನುವಾರ ಬೆಳಗ್ಗೆ ಜಾಗಿಂಗ್​ ಮುಗಿಸಿ ಬಂದಾಗ ಮನೆಯ ಟೇಬಲ್​ ಮೇಲಿದ್ದ ಪತ್ರವನ್ನು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಹತ್ಯೆ ಮಾಡುವುದಾಗಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ!

2018ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್​ ಜೈಲಿಗೆ ಹೋಗಿದ್ದರು. ಈ ಸಮಯದಲ್ಲಿ ಕೋರ್ಟ್ ಹೊರಗೆ ಮಾತನಾಡಿದ್ದ ಬಿಷ್ಣೋಯ್, ಸಲ್ಮಾನ್ ಖಾನ್​ ಅವರನ್ನ ಕೊಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದರು. ಬಿಷ್ಣೋಯ್​ ಅವರ ನಿಕಟ ಸಂಪರ್ಕದಲ್ಲಿದ್ದ ರಾಹುಲ್ ಅಲಿಯಾಸ್ ಸುನ್ನಿಯನ್ನ 2020ರಲ್ಲಿ ಬಂಧನ ಮಾಡಲಾಗಿತ್ತು. ಈ ವೇಳೆ, ವಿಚಾರಣೆ ನಡೆಸಿದಾಗ ಸಲ್ಮಾನ್ ಖಾನ್​​ ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

ABOUT THE AUTHOR

...view details