ಮಾನ್ಸೂನ್ ರಾಗ.. ನಟ ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇಂದು ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳು ಪರಭಾಷೆಯ ಚಿತ್ರಗಳಿಗೆ ಪೈಪೋಟಿ ಕೊಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಸಿನಿಪ್ರಿಯರ ಮನಸ್ಸಿಗೆ ಇಷ್ಟವಾಗುವ ಹಾಡುಗಳಿದ್ರೆ ಸಿನಿಪ್ರೇಕ್ಷಕರು ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ.
ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಮಾನ್ಸೂನ್ ರಾಗಾ ಬಿಡುಗಡೆ ಆಗಿದ್ದು, ಡಾಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ನಿರ್ದೇಶಕ ರವೀಂದ್ರನಾಥ್ ಸಂತೋಷ್ ಚಿತ್ರಮಂದಿರದ ಪ್ರೊಜೆಕ್ಟರ್ಗೆ ಪೂಜೆ ಮಾಡುವ ಮೂಲಕ ಚಿತ್ರ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಧನಂಜಯ್ ಅಭಿಮಾನಿಗಳು ಬೆಲ್ ಬಾಟಮ್ ಕಾಸ್ಟೂಮ್‌ನಲ್ಲಿ ಚಿತ್ರಮಂದಿರಕ್ಕೆ ಬಂದು ಗಮನ ಸೆಳೆದರು.