ಕರ್ನಾಟಕ

karnataka

ETV Bharat / entertainment

'ಮಿಸ್​ ಯೂನಿವರ್ಸ್​ ಫ್ರಾಂಚೈಸ್ ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ': ಸುಶ್ಮಿತಾ ಸೇನ್​

Sushmita Sen: ಅಮೆರಿಕದ ಮಾಜಿ​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮಾಲೀಕತ್ವದ ಸಮಯದಲ್ಲಿ, ಭಾರತದಲ್ಲಿ ಮಿಸ್​ ಯೂನಿವರ್ಸ್​ ಫ್ರಾಂಚೈಸ್​ ಅನ್ನು ನೋಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹೇಳಿದ್ದಾರೆ.

Sushmita Sen says overseeing Miss Universe franchise in India under Donald Trump's ownership wasn't 'easy or fun'
'ಮಿಸ್​ ಯೂನಿವರ್ಸ್​ ಫ್ರಾಂಚೈಸ್ ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ': ಸುಶ್ಮಿತಾ ಸೇನ್​

By ETV Bharat Karnataka Team

Published : Nov 18, 2023, 5:33 PM IST

ಅಮೆರಿಕದ ಮಾಜಿ​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮಾಲೀಕತ್ವದ ಸಮಯದಲ್ಲಿ, ಭಾರತದಲ್ಲಿ ಮಿಸ್​ ಯೂನಿವರ್ಸ್​ ಫ್ರಾಂಚೈಸ್​ ಅನ್ನು ನೋಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಬಾಲಿವುಡ್​ ನಟಿ ಮತ್ತು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ತಮ್ಮ ಹಿಂದಿನ ಅನುಭವಗಳನ್ನು ತೆರೆದಿಟ್ಟಿದ್ದಾರೆ. ತಮ್ಮ ಪಾತ್ರದಲ್ಲಿ ಎದುರಿಸಿದ ಸವಾಲುಗಳು, ಕೊನೆಗೆ ಸಿಕ್ಕ ಗೆಲುವಿನ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಮಿಸ್​ ಯೂನಿವರ್ಸ್​ ಫ್ರಾಂಚೈಸಿಯನ್ನು ನೋಡಿಕೊಳ್ಳುವ ತಮ್ಮ ಅಧಿಕಾರವನ್ನು ಪ್ರತಿಬಿಂಬಿಸುತ್ತಾ, ಸೇನ್​ ಅವರು ರೆನೀ ಜ್ಯುವೆಲರ್ಸ್​ನಲ್ಲಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವಾಗ ಮತ್ತು ವಿವಿಧ ಅನುಮೋದನೆಗಳನ್ನು ನಿರ್ವಹಿಸುತ್ತಿರುವಾಗ ಈ ಅವಕಾಶವು ಹುಟ್ಟಿಕೊಂಡಿತು ಎಂದು ಬಹಿರಂಗಪಡಿಸಿದ್ದಾರೆ.

ಮಿಸ್​ ಯೂನಿವರ್ಸ್​ ಸಂಸ್ಥೆಯು ಫ್ರಾಂಚೈಸಿಯನ್ನು ತೆಗೆದುಕೊಳ್ಳುವ ಪ್ರಸ್ತಾಪದೊಂದಿಗೆ ಅವರನ್ನು ಸಂಪರ್ಕಿಸಿತು. ಈ ಪ್ರಸ್ತಾಪವು ಸೇನ್​ ಅವರನ್ನು ಆಶ್ಚರ್ಯಗೊಳಿಸಿರುವುದಾಗಿ ಹೇಳಿದರು. ಆದರೆ, ಪ್ರಾರಂಭದಲ್ಲಿ ಸುಶ್ಮಿತಾಗೆ ತಮ್ಮ ಮೇಲೆಯೇ ನಂಬಿಕೆ ಇರಲಿಲ್ಲವಂತೆ. ಆದರೆ ಈಗ ಕನಸೆಲ್ಲವೂ ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅದಾಗ್ಯೂ, ಪ್ರಾಂಚೈಸ್​ ನಂತರದಲ್ಲಿ ಅಮೆರಿಕದ ಮಾಜಿ​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಒಡೆತನದಲ್ಲಿದ್ದುದರಿಂದ ಅವರು ಶೀಘ್ರದಲ್ಲೇ ಪಾತ್ರದ ಸಂಕೀರ್ಣತೆಗಳನ್ನು ಕಂಡುಹಿಡಿದರು.

ವೆಬ್ಲಾಯ್ಡ್​ ಜೊತೆಯಲ್ಲಿ, ಸೇನ್​ ಅವರು ತಮ್ಮ ಅಧಿಕಾರಾವಧಿಯಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು. "ಇದು ಸುಲಭ ಅಥವಾ ವಿನೋದವನ್ನು ಉಂಟು ಮಾಡಲಿಲ್ಲ" ಎಂದು ಹೇಳಿದ್ದಾರೆ. ಟ್ರಂಪ್​ ಮಾಲೀಕತ್ವದ ಅಡಿ ಕೆಲಸ ಮಾಡುತ್ತಿದ್ದರೂ, ಅವರೆಂದಿಗೂ ಸೇನ್​ಗೆ ಬಾಸ್​ ಆಗಿರಲಿಲ್ಲ ಎಂದು ಒತ್ತಿ ಹೇಳಿದರು. ಪ್ಯಾರಾಮೌಂಟ್​ ಕಮ್ಯುನಿಕೇಷನ್​ ಮತ್ತು ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ ಸೇನ್​ ಅಧಿಕಾರಾವಧಿಯಲ್ಲಿ ಆ ಸ್ಥಾನವನ್ನು ಹೊಂದಿದ್ದ ಘಟಕಗಳಾಗಿವೆ.

2010ರಲ್ಲಿ ಸೇನ್​ ಅವರು ಫ್ರಾಂಚೈಸಿಯನ್ನು ತೆಗೆದುಕೊಂಡರು. ಅದಕ್ಕೆ 'ಐ ಆಮ್​ ಶೀ (I Am She)' ಎಂದು ಹೆಸರಿಟ್ಟರು. ಆ ಸಮಯದಲ್ಲಿ, ಅವರು ಮೊದಲ ವರ್ಷದಲ್ಲಿ 30 ಮಹಿಳೆಯರಿಗೆ ಮತ್ತು ನಂತರದ ಪ್ರತಿ ವರ್ಷಗಳಲ್ಲಿ 25 ಮಹಿಳೆಯರಿಗೆ ತರಬೇತಿ ನೀಡಿದರು. ವರ್ಷಗಳು ಕಳೆದಂತೆ ಮಿಸ್​ ಯೂನಿವರ್ಸ್​ ಫ್ರಾಂಚೈಸ್​ನೊಂದಿಗೆ ಸೇನ್​ ಅವರ ಸಂಬಂಧವು ರೂಪಾಂತರಕ್ಕೆ ಒಳಗಾಯಿತು. 2012ರ ಸಮಯದಲ್ಲಿ ಅವರು ಭಾರತದಿಂದ ಅನೇಕ ಹುಡುಗಿಯರನ್ನು ಸ್ಪರ್ಧೆಗಳಿಗೆ ಕಳುಹಿಸುವ ಪ್ರಕ್ರಿಯೆಯನ್ನು ಸ್ವಾಗತಿಸಿದರೂ, ಅವರು ಕೆಲಸ ಮಾಡುವ ಜನರೊಂದಿಗೆ ತೃಪ್ತರಾಗಿಲ್ಲ ಎಂಬುದನ್ನು ಅರಿತುಕೊಂಡರು.

ಪರಿಣಾಮವಾಗಿ ಸುಶ್ಮಿತಾ ಸೇನ್​, 2012ರಲ್ಲಿ ಪ್ರತಿಷ್ಠಿತ ಸ್ಪರ್ಧೆಯಿಂದ ಬೇರೆಯಾಗಲು ನಿರ್ಧರಿಸಿದರು. ಅದರ ನಂತರ ಸೇನ್​ ಕೆಲವು ಸಂದರ್ಭಗಳಲ್ಲಿ ಟ್ರಂಪ್​ ಅವರನ್ನು ಭೇಟಿಯಾಗಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವರೊಂದಿಗೆ ಹೆಚ್ಚಿನ ವಿಚಾರಗಳನ್ನು ಚರ್ಚಿಸಲಿಲ್ಲ ಎಂದು ಹೇಳಿದ್ದಾರೆ. 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ಸುಮಾರು ಮೂರು ದಶಕಗಳ ನಂತರ, ಸುಶ್ಮಿತಾ ಸೇನ್ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ, ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆಯುತ್ತಿದ್ದಾರೆ.

ಇದನ್ನೂ ಓದಿ:ಮಾಜಿ ಬಾಯ್‌ಫ್ರೆಂಡ್‌ ರೋಹ್ಮನ್ ಶಾಲ್ ಜೊತೆ ಸುಶ್ಮಿತಾ ಸೇನ್​: ವಿಡಿಯೋ ವೈರಲ್

ABOUT THE AUTHOR

...view details