ಕರ್ನಾಟಕ

karnataka

ETV Bharat / entertainment

Lust Stories 2 ಟ್ರೇಲರ್​ ರಿಲೀಸ್: ಜೂನ್ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ - ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ, ವಿಜಯ್​ ವರ್ಮಾ ಸೇರಿದಂತೆ ಬಹು ತಾರಾಗಣದ ಲಸ್ಟ್ ಸ್ಟೋರೀಸ್ 2 ಟ್ರೇಲರ್​ ರಿಲೀಸ್ ಆಗಿದೆ.

Lust Stories 2
ಲಸ್ಟ್ ಸ್ಟೋರಿಸ್​​ 2

By

Published : Jun 21, 2023, 6:28 PM IST

2018ರಲ್ಲಿ ತೆರೆಕಂಡ 'ಲಸ್ಟ್ ಸ್ಟೋರಿಸ್​​' ವೆಬ್ ಸೀರಿಸ್​ನ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದೆ. 'ಲಸ್ಟ್ ಸ್ಟೋರೀಸ್ 2' ಶೀರ್ಷಿಕೆಯ ಸರಣಿಯು ಜೂನ್ 29ರಿಂದ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸೀರಿಸ್​​ ತಂಡ ಟ್ರೇಲರ್ ಬಿಡುಗಡೆ ಮಾಡಿದ್ದು ಹೆಚ್ಚು ವೀಕ್ಷಣೆ ಪಡೆಯುತ್ತಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಟ್ರೇಲರ್ ಶೇರ್ ಮಾಡಿದ್ದು, "ಎಷ್ಟು Lust (ಕಾಮ) ಎಂದರೆ? ನೀವೇ ತಿಳಿದುಕೊಳ್ಳಿ, #LustStories2 ಜೂನ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಪ್ರಸಾರ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ. ಈ ವೆಬ್​ ಸೀರಿಸ್​ 'Lust' ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ.

ನಟರಾದ ಕಾಜೋಲ್, ನೀನಾ ಗುಪ್ತಾ, ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಅಂಗದ್ ಬೇಡಿ, ಅಮೃತಾ ಶುಭಾಷ್, ತಿಲೋಟಮಾ ಶೋಮ್, ಕುಮುದ್ ಮಿಶ್ರಾ ಸೇರಿದಂತೆ ಹಲವರು ಸೀರಿಸ್‌ನಲ್ಲಿ ನಟಿಸಿದ್ದಾರೆ. ಈ ತಾರಾಗಣವನ್ನು ಹೊರತುಪಡಿಸಿ, ಇಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ತಮನ್ನಾ ಮತ್ತು ವಿಜಯ್ ಜೋಡಿಯ ಕೆಮಿಸ್ಟ್ರಿ.

ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಲವ್​ ಬರ್ಡ್ಸ್​​​ ತಮನ್ನಾ ಮತ್ತು ವಿಜಯ್ ವರ್ಮಾ ಈ ಸರಣಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದು ಸೀರಿಸ್​ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚು ಆಸಕ್ತಿ ಮೂಡಿಸಿದೆ. ಈ ಸೀರಿಸ್​ನ ಶೂಟಿಂಗ್​ ಸೆಟ್​ನಲ್ಲಿಯೇ ಈ ಜೋಡಿಯ ಪ್ರೇಮಾಂಕುರವಾಗಿದೆ ಎಂದು ಹೇಳಲಾಗಿದೆ. ಇತ್ತೀಚಿನ ಸಂದರ್ಶನಗಳಲ್ಲಿ ಪರಸ್ಪರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿಯೂ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:"ಪ್ರೇಕ್ಷಕರು ಇಷ್ಟಪಡಲಿ, ಇಲ್ಲದಿರಲಿ ಕಥೆ ಇರುವುದೇ ಹಾಗೆ": ಹಸಿಬಿಸಿ ದೃಶ್ಯಗಳ ಬಗ್ಗೆ ತಮನ್ನಾ ಭಾಟಿಯಾ ಸ್ಪಷ್ಟನೆ ಹೀಗಿದೆ..

2018ರಲ್ಲಿ ಮೊದಲ ಸೀಸನ್ ಬಂದಾಗ ಒಟಿಟಿ ವೇದಿಕೆಗಳು ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಲಾಕ್‌ಡೌನ್ ನಂತರ ಎಲ್ಲವೂ ಬದಲಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಒಟಿಟಿಯಲ್ಲಿ ಸಿನಿಮಾ ಮತ್ತು ಧಾರಾವಾಹಿಗಳನ್ನು ನೋಡುತ್ತಿದ್ದಾರೆ. ಅದೂ ಅಲ್ಲದೇ ಈ ಸೀಸನ್​​ನಲ್ಲಿ ಕಾಜೋಲ್, ಮೃಣಾಲ್, ತಮನ್ನಾ, ವಿಜಯ್​ ಸೇರಿದಂತೆ ಬಹುತೇಕ ತಾರೆಯರು ಇರುವುದರಿಂದ ಅಭಿಮಾನಿಗಳು ಈ ಸೀಸನ್ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 29ರಿಂದ ಲಸ್ಟ್ ಸ್ಟೋರಿಸ್ 2 ಪ್ರಸಾರಗೊಳ್ಳಲಿದೆ.

ಇದನ್ನೂ ಓದಿ:'ಲಸ್ಟ್ ಸ್ಟೋರೀಸ್ 2' ಸೆಟ್​​ನಲ್ಲಿ ಅರಳಿದ ವಿಜಯ್ ವರ್ಮಾ-ತಮನ್ನಾ ಭಾಟಿಯಾ ಪ್ರೇಮ

ಕಿರಿ ವಯಸ್ಸಿಗೆ ಬಣ್ಣದ ಲೋಕ ಪ್ರವೇಶಿಸಿದತಮನ್ನಾ ಭಾಟಿಯಾ ಚಿತ್ರರಂಗದಲ್ಲಿ ಸುಮಾರು 18 ವರ್ಷ ಪೂರೈಸಿದ್ದಾರೆ. ಈವರೆಗೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೆ 'ಲಸ್ಟ್ ಸ್ಟೋರೀಸ್ 2' ಮತ್ತು ಜೀ ಕರ್ದಾ ಸೀರಿಸ್​ನಲ್ಲಿ ಹುಬ್ಬೇರಿಸುವಂತಹ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಈ ಬಗ್ಗೆ ಅಭಿಮಾನಿಗಳು, ವೀಕ್ಷಕರಿಂದ ಟೀಕೆಗಳನ್ನೂ ಸಹ ಸ್ವೀಕರಿಸಬೇಕಾಯಿತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, "ಕಥೆಗೆ ತಕ್ಕಂತೆ ನಟಿಸಿದ್ದೇನೆ. ಪ್ರೇಕ್ಷಕರು ಇಷ್ಟ ಪಡಲಿ, ಇಲ್ಲದಿರಲಿ ಕಥೆ ಇರುವುದೇ ಹಾಗೆ" ಎಂದು ಸಮರ್ಥಿಸಿಕೊಂಡಿದ್ದರು.

ABOUT THE AUTHOR

...view details