ಕನ್ನಡ ಚಿತ್ರರಂಗದಲ್ಲಿ 8 ಪ್ಯಾಕ್ ಬಾಡಿ ಬಿಲ್ಡ್ ಮಾಡಿ ಗಮನ ಸೆಳೆದ ನಟ ವಿನೋದ್ ಪ್ರಭಾಕರ್. ಸದ್ಯ ಲಂಕಾಸುರ ಸಿನಿಮಾ ಜಪ ಮಾಡುತ್ತಿರುವ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್. ಸೆನ್ಸಾರ್ ಮಂಡಳಿ ಲಂಕಾಸುರ ಚಿತ್ರವನ್ನು ಮೆಚ್ಚಿಕೊಂಡು ಯು/ಎ ಪ್ರಮಾಣಪತ್ರ ನೀಡಿದೆ. ಶೀಘ್ರದಲ್ಲೇ ಲಂಕಾಸುರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಚಿತ್ರದಲ್ಲಿ ವಿನೋದ್ ಪ್ರಭಾಕರ್ ಉದ್ದ ಕೂದಲು ಬಿಟ್ಟು ಪಕ್ಕಾ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಲಂಕಾಸುರ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಜನರ ಮೆಚ್ಚುಗೆ ಗಳಿಸಿದೆ.
ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ ಅವರು ವಿನೋದ್ ಪ್ರಭಾಕರ್ ಅವರೊಂದಿಗೆ ಅಭಿನಯಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಕೂಡ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.