ಕರ್ನಾಟಕ

karnataka

ETV Bharat / entertainment

ಕುವೈತ್​​ನಲ್ಲಿ ವಿಜಯ್ ಅಭಿನಯದ 'ಬೀಸ್ಟ್' ಚಿತ್ರ ನಿಷೇಧ

ವಿಜಯ್​ ಮತ್ತು ಪೂಜಾ ಹೆಗ್ಡೆ ನಟಿಸಿರುವ ಬೀಸ್ಟ್​ ಏ. 13ರಂದು ತೆರೆಕಾಣಲಿದ್ದು, ಈ ಸಿನಿಮಾಕ್ಕೆ ಕುವೈತ್​ನಲ್ಲಿ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ.

Pakistan terror plot violence in Beast movie reason
ವಿಜಯ್ ಅಭಿನಯದ 'ಬೀಸ್ಟ್' ಚಿತ್ರವನ್ನು ಕುವೈತ್ ನಿಷೇಧಿಸಲಾಗಿದೆ

By

Published : Apr 5, 2022, 10:19 PM IST

ಚೆನ್ನೈ: ನೆಲ್ಸನ್ ದಿಲೀಪ್‌ಕುಮಾರ್ ಅವರ ನಿರ್ದೇಶನದ ಬೀಸ್ಟ್​ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಜಯ್​ ಮತ್ತು ಪೂಜಾ ಹೆಗ್ಡೆ ಅಭಿನಯದ ಈ ಚಿತ್ರವನ್ನು ಕುವೈತ್​ನಲ್ಲಿ ನಿಷೇಧಿಸಲಾಗಿದೆ ಎಂದು ಉದ್ಯಮದ ಪಂಡಿತರು ಮಂಗಳವಾರ ಹೇಳಿದ್ದಾರೆ.

ಮನರಂಜನಾ ಮಾಧ್ಯಮಗಳ ಪ್ರಕಾರ ಕುವೈತ್​ ಮಾಹಿತಿ ಸಚಿವಾಲಯ ತಮಿಳು ಚಿತ್ರಗಳನ್ನು ನಿಷೇಧಿಸಿದೆ ಎಂದು ಹೇಳಿಕೊಂಡರೂ, ಸಿನಿಮಾ ನಿಷೇಧದ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸಿನಿಮಾದಲ್ಲಿರುವ ಪಾಕಿಸ್ತಾನಿ ಭಯೋತ್ಪಾದನೆ ಮತ್ತಯ ಹಿಂಸಾಚಾರದ ಬಗ್ಗೆ ಇರುವುದರಿಂದ ನಿಷೇಧಿಸಲಾಗಿದೆ ಎಂದು ಊಹಿಸಲಾಗಿದೆ. ಮಲಯಾಳಂನ ಕುರುಪ್​, ತಮಿಳಿನ ಎಫ್​ಐಆರ್​ ಕೂಡ ಕುವೈತ್​ನಲ್ಲಿ ನಿಷೇಧಿಸಲಾಗಿತ್ತು. ಯೋಧ ಭಯೋತ್ಪಾದಕರ ಜೊತೆ ಹೇಗೆ ವ್ಯವಹರಿಸುತ್ತಾನೆ ಎಂಬುದು ಚಿತ್ರದಲ್ಲಿದೆ. ಏ.​ 13ರಂದು ಬಹು ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಕೊಟ್ಟ ಭರವಸೆ ಈಡೇರಿಸಿದ ಪೂನಂ : ಕ್ಯಾಮೆರಾ ಮುಂದೆ ಟಾಪ್​​ಲೆಸ್​ ಆದ ಪಾಂಡೆ


ABOUT THE AUTHOR

...view details