ಮುಂಬೈ: ಕ್ರಿಸ್ಮಸ್ ಸಂಭ್ರಮಾಚಾರಣೆಯನ್ನು ಬಾಲಿವುಡ್ ಸಿನಿತಾರೆಯರು ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ತಮ್ಮ ಕ್ರಿಸ್ಮಸ್ ಆಚರಣೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಅವರಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಕುಟುಂಬದೊಂದಿಗೆ ವಿಶೇಷವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಂಡಿದ್ದು, ಫೋಟೋ ಶೇರ್ ಮಾಡಿದ್ದಾರೆ.
ಕತ್ರಿನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕತ್ರಿನಾ ಅವರ ಅತ್ತೆ ವೀಣಾ ಕೌಶಲ್ ಮತ್ತು ಸಹೋದರಿ ಇಸಾಬೆಲ್ಲೆ ಕೆಂಪು ಬಟ್ಟೆಯನ್ನು ಧರಿಸಿ ಮಿಂಚುತ್ತಿದ್ದಾರೆ. ಇನ್ನು ವಿಕ್ಕಿ ಕೌಶಲ್ ಮತ್ತು ಅವರ ಸಹೋದರ ಸನ್ನಿ ಕ್ರಿಸ್ಮಸ್ ತಾತನ ಟೋಪಿ ಧರಿಸಿದ್ದಾರೆ. ವಿಕ್ಕಿಯಂತೂ ಸಾಂತಾ ಅವತಾರದಲ್ಲಿ ಅಭಿಮಾನಿಗಳನ್ನು ಫುಲ್ ರಂಜಿಸಿದ್ದಾರೆ.
ವಿಕ್ಕಿಯ ತಂದೆ ಮಕ್ಕಳ ಖುಷಿ ಕಂಡು ಚಂದದ ನಗು ಬೀರಿ ಫೋಟೋಗೆ ಫೋಸ್ ನೀಡಿದ್ದಾರೆ. ಅಂತೂ ಪರ್ಫೆಕ್ಟ್ ಪ್ಯಾಮಿಲಿಯ ಚಂದದ ಫೋಟೋ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ. ಅದರ ಜೊತೆಗೆ ಕತ್ರಿನಾ ಇನ್ನೊಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸುಂದರವಾಗಿ ಅಲಂಕೃತವಾದ ಕ್ರಿಸ್ಮಸ್ ಟ್ರೀ ಮೇಲೆ ವಿಕ್ಯಾಟ್ ಚಿತ್ರ ಕಂಗೊಳಿಸುತ್ತಿದೆ. ಈ ಎರಡು ಚಿತ್ರವನ್ನು ಹಂಚಿಕೊಂಡ ಅವರು ಮೇರಿ ಕ್ರಿಸ್ಮಸ್ ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಇನ್ನೂ ಇದೇ ಫೋಟೋವನ್ನು ವಿಕ್ಕಿ ಕೌಶಲ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಕ್ಯಾಟ್ ಚಿತ್ರಗಳಿಗೆ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಕಮೆಂಟ್ಸ್ ಮಾಡಿದ್ದಾರೆ. ಅದರಲ್ಲಿ ಒಬ್ಬರು" ಪಂಜಾಬಿ ಸಾಂತಾ ಮುದ್ದಾಗಿ ಕಾಣುತ್ತಿದ್ದಾರೆ" ಅಂತ ಬರೆದರೆ ಮತ್ತೊಬ್ಬರು "ಒಬ್ಬ ಪಂಜಾಬಿ ವ್ಯಕ್ತಿಯನ್ನು ಸಾಂತಾನನ್ನಾಗಿ ಮಾಡಲು ಅವನ ಹೆಂಡತಿಗೆ ಮಾತ್ರ ಸಾಧ್ಯ" ಎಂದು ಹೇಳಿದ್ದಾರೆ. ವಿಕ್ಯಾಟ್ ಜೋಡಿ ಇತ್ತೀಚೆಗಷ್ಟೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಮೆಮೊರೇಬಲ್ ಆಗಿ ಆಚರಿಸಿಕೊಂಡಿದ್ದರು.