ಕರ್ನಾಟಕ

karnataka

ETV Bharat / entertainment

ಸೈಫ್​ ಯಾವಾಗಲೂ ಪಾಪರಾಜಿಗಳಿಂದ ಅಂತರ ಕಾಯ್ದುಕೊಳ್ಳಲು ಇಚ್ಛಿಸುತ್ತಾರೆ: ಕರೀನಾ ಕಪೂರ್​ - ಪಾಪರಾಜಿಗಳ ವರ್ತನೆ

ಪಾಪರಾಜಿಗಳ ವರ್ತನೆ ಬಗ್ಗೆ ನಟಿ ಕರೀನಾ ಕಪೂರ್​ ಖಾನ್ ಮಾತನಾಡಿದ್ದಾರೆ.

Saif Kareena
ಸೈಫ್ ಕರೀನಾ

By

Published : Mar 19, 2023, 5:35 PM IST

ಖಾಸಗಿತನಕ್ಕೆ ಅಡ್ಡಿಪಡಿಸಿದ ಪಾಪರಾಜಿಗಳ ವಿರುದ್ಧ ಇತ್ತೀಚೆಗಷ್ಟೇ ನಟ ಸೈಫ್​ ಅಲಿಖಾನ್​ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ನನಗೆ ಪಾಪರಾಜಿಗಳ ವರ್ತನೆ, ಸಂಸ್ಕೃತಿ ಬಗ್ಗೆ ಯಾವುದೇ ತೊಂದರೆಯಿಲ್ಲ. ಆದ್ರೆ ಪತಿ ಸೈಫ್​ ಅಲಿಖಾನ್ ಅವರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್​ ತಾರಾ ದಂಪತಿಯಾದ ಸೈಫ್ ಮತ್ತು ಕರೀನಾ ಇಬ್ಬರೂ ಪಾಪರಾಜಿಗಳೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದರೂ, ಇತ್ತೀಚೆಗೆ ನಟ ಅವರ ವಿರುದ್ಧ ಕೊಂಚ ಅಸಮಾಧಾನ ತೋರಿದ್ದರು.

ಸೈಫ್ ಮತ್ತು ನೀವು ಪಾಪರಾಜಿಗಳೊಂದಿಗೆ ಅಂತರ ಕಾಪಾಡಲು ಯೋಜಿಸುತ್ತಿದ್ದೀರಾ ಎಂದು ಇತ್ತೀಚಿನ ಸಂದರ್ಶನದಲ್ಲಿ ನಟಿ ಕರೀನಾ ಕಪೂರ್​ ಖಾನ್​ ಅವರಲ್ಲಿ ಕೇಳಲಾಯಿತು. ಅದಕ್ಕೆ ಯಾವುದೇ ಮಿತಿ ಹಾಕುತ್ತಿಲ್ಲ ಎಂದು ಹೇಳಿದರು. ಸೈಫ್ ಅವರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ, ಹಾಗಾಗಿ ಅವರು ಅಂತರ ಕಾಪಾಡಿಕೊಳ್ಳುತ್ತಾರೆ ಎಂದು ಸಹ ತಿಳಿಸಿದರು.

ಸೈಫ್ ಅವರು ಪಾಪರಾಜಿಗಳಿಗೆ ಏಕೆ ಪೋಸ್​ ಕೊಡಬೇಕೆಂದು ಕೇಳುತ್ತಾರೆ. ನಾನೇನು ಮಾಡಲಿ. ಅವರು ಕೆಲವೊಮ್ಮೆ ಅಂತರ ಕಾಯ್ದುಕೊಳ್ಳಲು ಇಚ್ಛಿಸುತ್ತಾರೆ ಎಂದು ಬಹಿರಂಗಪಡಿಸಿದರು. ಇನ್ನು ಮಕ್ಕಳು ಪಠ್ಯೇತರ ಚಟುವಟಿಕೆಗಳಿಗೆ ಹೋಗುವಾಗ ಫೋಟೋ ತೆಗೆಯಬಾರದು ಎಂದು ಬಯಸುತ್ತೇನೆ ಎಂದು ಸಹ ತಿಳಿಸಿದರು.

ಇತ್ತೀಚೆಗಷ್ಟೇ ಬಾಲಿವುಡ್​ ನಟ ಸೈಫ್​ ಅಲಿಖಾನ್​ ಅವರು ಪತ್ನಿ, ನಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ತಡರಾತ್ರಿ (2 ಗಂಟೆ) ಪಾರ್ಟಿಯಿಂದ ಹಿಂದಿರುಗುತ್ತಿದ್ದ ವೇಳೆ ಪಾಪರಾಜಿಗಳೊಂದಿಗೆ ಅಸಮಧಾನ ವ್ಯಕ್ತಪಡಿಸಿದ್ದರು. ಮನೆಯ ಹೊರಗೆ ಈ ತಾರಾ ದಂಪತಿ ಫೋಟೋಗಾಗಿ ಪಾಪರಾಜಿಗಳು ನಿಂತಿದ್ದರು. ಅಂದು ಕೊಂಚ ಅಸಮಾಧಾನಗೊಂಡ ನಟ ಸೈಫ್, 'ನಮ್ಮ ಬೆಡ್ರೂಮ್​ ತನಕ ಬನ್ನಿ..' ಎಂದು ವ್ಯಂಗ್ಯದ ಜೊತೆಗೆ ಹಾಸ್ಯ ರೀತಿಯಲ್ಲಿ ತಿಳಿಸಿದ್ದರು. ಈ ವಿಡಿಯೋ ಸಾಮಾಜಿಕ ಕಾಲತಾಣದಲ್ಲಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಕಟ್ಟಡದ ಸಿಬ್ಬಂದಿಯನ್ನು ನಿರ್ಲಕ್ಷ್ಯದ ಕಾರಣದಿಂದ ವಜಾಗೊಳಿಸಲಾಗಿದೆ ಎಂದು ವರದಿ ಆಗಿತ್ತು. ಆದರೆ, ಯಾರನ್ನೂ ವಜಾ ಮಾಡಿಲ್ಲ ಎಂದು ಸೈಫ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:'ನಮ್ಮ ಬೆಡ್ರೂಮ್​ ತನಕ ಬನ್ನಿ..': ಪಾಪರಾಜಿಗಳ ವರ್ತನೆಗೆ ನಟ ಸೈಫ್​ ಅಲಿಖಾನ್ ರಿಯಾಕ್ಷನ್​

ಸಿಬ್ಬಂದಿಯನ್ನು ಸಮರ್ಥಿಸಿಕೊಂಡ ನಟ ಸೈಫ್​ ಅಲಿಖಾನ್​ ಇದು ವಾಚ್‌ಮನ್‌ ತಪ್ಪಲ್ಲ ಎಂದು ಹೇಳಿದರು. ವದಂತಿಗಳನ್ನು ಅಲ್ಲಗೆಳೆದ ಸೈಫ್, ಛಾಯಾಗ್ರಾಹಕರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಪಾಪರಾಜಿಗಳು ಖಾಸಗಿ ಒಡೆತನದ ಕಟ್ಟಡದ ಗೇಟ್ ಮೂಲಕ ಪ್ರವೇಶಿಸಿದರು, ಭದ್ರತಾ ಸಿಬ್ಬಂದಿಯನ್ನು ದಾಟಿದರು, ನಮ್ಮ ಸಂಪೂರ್ಣವಾಗಿ ಆಕ್ರಮಿಸಿದರು. ನಂತರ 20 ಕ್ಯಾಮರಾಗಳಿಂದ ನಮ್ಮ ಮತ್ತು ಸುತ್ತಮುತ್ತಲಿನ ಚಿತ್ರಗಳನ್ನು ಸೆರೆಹಿಡಿದರು. ಇದು ಸ್ವೀಕಾರ್ಹವಲ್ಲ, ಪ್ರತಿಯೊಬ್ಬರೂ ತಮ್ಮ ಮಿತಿ ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದ್ದರು.

ಇದನ್ನೂ ಓದಿ:ನಾಟು ನಾಟು ಕ್ರೇಜ್: RC15 ಶೂಟಿಂಗ್​ ಸೆಟ್​​ ಮರಳಿದ ರಾಮ್​ ಚರಣ್​ ಜೊತೆ ಕುಣಿದು ಕುಪ್ಪಳಿಸಿದ ಪ್ರಭುದೇವ ಟೀಂ

ABOUT THE AUTHOR

...view details