ಕರ್ನಾಟಕ

karnataka

ETV Bharat / entertainment

ಯಶ್​ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​?! - Kareena Kapoor Khan

Toxic movie: ರಾಕಿಂಗ್​ ಸ್ಟಾರ್ ಯಶ್​ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಬಾಲಿವುಡ್​ ಬೇಬೋ ಕರೀನಾ ಕಪೂರ್​ ಖಾನ್​ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Kareena Kapoor Khan in Yash starrer 'Toxic' movie
ಯಶ್​ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​

By ETV Bharat Karnataka Team

Published : Jan 4, 2024, 1:26 PM IST

ರಾಕಿಂಗ್​ ಸ್ಟಾರ್​​ ಯಶ್​ ನಟನೆಯ ಮುಂದಿನ ಸಿನಿಮಾ ಬಗ್ಗೆ ಕೋಟ್ಯಂತರ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಕೂಡ ಕಾತರರಾಗಿದ್ದಾರೆ. ಕಳೆದ ತಿಂಗಳಷ್ಟೇ ಸಿನಿಮಾ ಘೋಷಣೆಯಾಗಿ, ವಿಡಿಯೋವೊಂದು ಅನಾವರಣಗೊಂಡಿತ್ತು. ಈ ಗ್ಲಿಂಪ್ಸ್​ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಯಶ್​​ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಹೀಗೆ ದಿನೇ ದಿನೆ ಕುತೂಹಲ ಹೆಚ್ಚಿಸುತ್ತಿರುವ ಟಾಕ್ಸಿಕ್​ ಸಿನಿಮಾಗೆ ಸಂಬಂಧಿಸಿದಂತೆ ಸುದ್ದಿಯೊಂದು ಸಖತ್​ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಬಾಲಿವುಡ್​​ ನಟಿ ಕರೀನಾ ಕಪೂರ್​ ಖಾನ್​ ಅವರು ಯಶ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ 'ಬೇಬೋ' ಖ್ಯಾತಿಯ ಕರೀನಾ ಕಪೂರ್ ಖಾನ್ ಇಂದಿಗೂ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಒಂದು ಸಮಯದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡು, ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. 43ರ ಹರೆಯದಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಬೇಬೋ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಕರೀನಾ ಕಪೂರ್ ಖಾನ್​​ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕಳೆದ 23 ವರ್ಷಗಳಿಂದ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಕರೀನಾ ಸೌತ್ ಸಿನಿಮಾದಲ್ಲಿ ತಮ್ಮ ನಟನಾ ಸಾಮರ್ಥ್ಯ ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಕೆಜಿಎಫ್ ಸ್ಟಾರ್ ಯಶ್ ಅವರ ಮುಂಬರುವ ಚಿತ್ರ 'ಟಾಕ್ಸಿಕ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

2023ರ ಡಿಸೆಂಬರ್ 8ರಂದು ಯಶ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ತಮ್ಮ ಹೊಸ ಚಿತ್ರ 'ಟಾಕ್ಸಿಕ್' ಅನ್ನು ಘೋಷಿಸಿದ್ದರು. ಒಂದೂವರೆ ವರ್ಷದಿಂದ ಯಶ್-​19ಗಾಗಿ ಕಾತರರಾಗಿದ್ದ ಅಭಿಮಾನಿಗಳಲ್ಲಿ ಸಂತೋಷದ ಅಲೆ ಎದ್ದಿದೆ. ಇದೀಗ ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ನಟಿಸಬಹುದು ಎನ್ನಲಾಗುತ್ತಿದೆ. ಈ ಮೂಲಕ ಬಾಲಿವುಡ್​ ಬೇಬೋ ಸೌತ್​​ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೀರ್​ ಪುತ್ರಿ: ಇರಾ- ನೂಪುರ್ ಮದುವೆ ವಿಡಿಯೋ

ವರದಿಗಳ ಪ್ರಕಾರ, ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ನಟ ಯಶ್ ಅವರು ಮುಂದಿನ ದಿನಗಳಲ್ಲಿ ಕರೀನಾ ಕಪೂರ್ ಖಾನ್ ಹೆಸರನ್ನು ಘೋಷಿಸಬಹುದು. ಕೆಲವೇ ವಾರಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಸಹ ಹೇಳಲಾಗುತ್ತಿದೆ. ಕರೀನಾ ಅವರಿಗೂ ಮುನ್ನ ಯಶ್ ನಟನೆಯ ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ನಟ ಸಂಜಯ್ ದತ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಕ್ಲೈಮ್ಯಾಕ್ಸ್ ತಲುಪಿದ 'ಮ್ಯಾಕ್ಸ್': ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್​

'ಟಾಕ್ಸಿಕ್' ಯಶ್ ವೃತ್ತಿಜೀವನದ 19ನೇ ಚಿತ್ರ. ತಮ್ಮ ಚಿತ್ರದ ಘೋಷಣೆಯ ಸಮಯದಲ್ಲಿ ಸಣ್ಣ ಟೀಸರ್ ಅನ್ನು ಸಹ ಹಂಚಿಕೊಂಡಿದ್ದರು. ಕೆವಿಎನ್ ಪ್ರೊಡಕ್ಷನ್ ಅಡಿ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. 2025ರ ಏಪ್ರಿಲ್​ 10 ರಂದು ಸಿನಿಮಾ ತೆರೆಕಾಣಲಿದೆ.

ABOUT THE AUTHOR

...view details