ಕರ್ನಾಟಕ

karnataka

ETV Bharat / entertainment

ಸಾರಾ ಅಲಿ ಖಾನ್ ತಾಯಿ ಪಾತ್ರ ನಿರ್ವಹಿಸುತ್ತಾರಾ ಕರೀನಾ! ಆಲಿಯಾಗೆ ದೀಪಿಕಾ ಸ್ಪರ್ಧಿಯೇ? - ಕರೀನಾ ಕಪೂರ್ ಖಾನ್

Koffee with Karan S8: 'ಕಾಫಿ ವಿತ್ ಕರಣ್' ಶೋನಲ್ಲಿ ಕರೀನಾ ಕಪೂರ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಭಾಗಿಯಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Koffee with Karan
ಕಾಫಿ ವಿತ್ ಕರಣ್'

By ETV Bharat Karnataka Team

Published : Nov 16, 2023, 5:56 PM IST

ಬಾಲಿವುಡ್​ನ ಖ್ಯಾತ ನಿರ್ದೇಶಕ - ನಿರ್ಮಾಪಕ ಕರಣ್ ಜೋಹರ್ ಅವರ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್' ಸೀಸನ್​ 8ರ ಲೇಟೆಸ್ಟ್ ಎಪಿಸೋಡ್​ನಲ್ಲಿ ಬಾಲಿವುಡ್ ಬೆಡಗಿಯರಾದ ಕರೀನಾ ಕಪೂರ್ ಖಾನ್ ಮತ್ತು ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ನಟಿಮಣಿಯರು ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹು ನಿರೀಕ್ಷಿತ ರ‍್ಯಾಪಿಡ್ ಫೈರ್ ಸೆಷನ್​ನಲ್ಲಿ, ದೀಪಿಕಾ ಪಡುಕೋಣೆ ಅವರನ್ನು ಸ್ಪರ್ಧಿಯಾಗಿ ನೋಡುವ ಬಗ್ಗೆ ನಟಿ ಆಲಿಯಾ ಭಟ್ ತಮ್ಮ ಅನಿಸಿಕೆ ಬಹಿರಂಗಪಡಿಸಿದರೆ, ಕರೀನಾ ಕಪೂರ್ ಖಾನ್ ಅವರು ಸಾರಾ ಅಲಿ ಖಾನ್ ಅವರ ತಾಯಿ ಪಾತ್ರ ನಿರ್ವಹಿಸೋ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ವೀಕ್ಷಕರು ಹೆಚ್ಚು ಇಷ್ಟಪಡುವ ರ‍್ಯಾಪಿಡ್ ಫೈರ್ ರೌಂಡ್​ನಲ್ಲಿ, ದೀಪಿಕಾ ಪಡುಕೋಣೆ ಅವರನ್ನು ನಿಮ್ಮ ಕಾಂಪಿಟೇಟರ್​ ಎಂದು ಭಾವಿಸುತ್ತೀರಾ? ಎಂಬ ಪ್ರಶ್ನೆ ಆಲಿಯಾ ಭಟ್ ಅವರಿಗೆ ಎದುರಾಯಿತು. ಇದಕ್ಕೆ ಆಲಿಯಾ ಭಟ್​​ ನಯವಾಗಿ 'ಇಲ್ಲ' ಎಂದು ಉತ್ತರಿಸಿದರು. ದೀಪಿಕಾ ಅವರನ್ನು ನನ್ನ ಸೀನಿಯರ್​​ ಎಂದು ಪರಿಗಣಿಸಿರುವುದಾಗಿ ತಿಳಿಸಿದರು. "ದಯವಿಟ್ಟು, ಖಂಡಿತ ಇಲ್ಲ. ಅವರೇಕೆ ನನ್ನ ಕಾಂಪಿಟೇಟರ್ ಆಗುತ್ತಾರೆ?. ಅವರು ನನ್ನ ಸೀನಿಯರ್. ಇಲ್ಲಿ ಯಾವುದೇ ಸ್ಪರ್ಧೆ ಇಲ್ಲ" ಎಂದು ಉತ್ತರಿಸಿದ್ದಾರೆ. ಮೊದಲು ಈ ಪ್ರಶ್ನೆಯನ್ನು ನಟಿ ಕರೀನಾ ಕಪೂರ್ ಖಾನ್ ಅವರಿಗೆ ಕೇಳಲಾಗಿತ್ತು. ಆದ್ರೆ ಅವರು ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಇದಕ್ಕೆ ಆಲಿಯಾ ಉತ್ತರ ನೀಡಬೇಕು. ಇದು ಆಲಿಯಾರಿಗೆ ಕೇಳಬೇಕಾದ ಪ್ರಶ್ನೆ ಎಂದು ತಿಳಿಸಿದರು.

ಇದನ್ನೂ ಓದಿ:'ಈ ದೃಶ್ಯ ನಮ್ಮ ಚಿತ್ರದ ಒಂದು ಭಾಗ': ಅಭಿಮಾನಿಗೆ ಹೊಡೆದ​ ವಿಡಿಯೋಗೆ ಪ್ರತಿಕ್ರಿಯಿಸಿದ ನಾನಾ ಪಾಟೇಕರ್

ಅವಕಾಶ ಸಿಕ್ಕರೆ ಸಾರಾ ಅಲಿ ಖಾನ್ ಅವರ ತಾಯಿ ಪಾತ್ರ ನಿರ್ವಹಿಸೋ ಬಗ್ಗೆ ಕರೀನಾ ಕಪೂರ್​ ಖಾನ್​​ ಅವರನ್ನು ಪ್ರಶ್ನಿಸೋ ಅವಕಾಶವನ್ನು ಕರಣ್ ಜೋಹರ್ ಮಿಸ್​ ಮಾಡಿಕೊಳ್ಳಲಿಲ್ಲ. ಸಾರಾ ಅವರು ನಟ ಸೈಫ್ ಅಲಿ ಖಾನ್​, ನಟಿ ಅಮ್ರಿತಾ ಸಿಂಗ್​​ ದಂಪತಿ ಪುತ್ರಿ. ಅಮ್ರಿತಾ ಸಿಂಗ್​​ ಅವರಿಂದ ವಿಚ್ಛೇದನ ಪಡೆದ ಸೈಫ್ ಅಲಿ ಖಾನ್ 2012ರಲ್ಲಿ ಕರೀನಾ ಕಪೂರ್​ ಅವರನ್ನು ಮದುವೆಯಾಗುತ್ತಾರೆ. ಅದಾಗ್ಯೂ, ಸಾರಾ ಅಲಿ ಖಾನ್ ಮತ್ತು ಕರೀನಾ ಕಪೂರ್​ ಖಾನ್​​ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕರಣ್​ ಜೋಹರ್ ಪ್ರಶ್ನೆಗೆ ಉತ್ತರಿಸಿದ ಬೇಬೋ, "ನಾನೋರ್ವ ನಟಿ. ನಾನು ಎಲ್ಲಾ ವಯಸ್ಸಿನ ಪಾತ್ರಗಳಲ್ಲಿಯೂ ನಟಿಸಬಲ್ಲೆ''. ನಿಮಗೆ ಗೊತ್ತಿಲ್ಲ, ಪಾತ್ರ ಒಳ್ಳೆಯದಾಗಿದ್ದರೆ ಯಾವ ವಯಸ್ಸಿನದ್ದಾದರೂ ನಾನು ನಟಿಸಬಲ್ಲೆ ಎಂದು ತಿಳಿಸಿದರು. ಪ್ರಶ್ನೆಯನ್ನು ಮತ್ತಷ್ಟು ವಿಸ್ತರಿಸಿದ ಕರಣ್​, "ಹಾಗಾದರೆ ನೀವು ಅದಕ್ಕೆ ಮುಕ್ತರಾಗಿದ್ದೀರಾ?" ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಕರೀನಾ, ವೈವಿಧ್ಯಮಯ ಪಾತ್ರಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬಾಕ್ಸ್ ಆಫೀಸ್ ಪೈಪೋಟಿ; ಕತ್ರಿನಾ, ವಿಜಯ್ ಸೇತುಪತಿ ಅಭಿನಯದ 'ಮೇರಿ ಕ್ರಿಸ್ಮಸ್' ಮುಂದೂಡಿಕೆ

ಕರಣ್ ಜೋಹರ್ ನಿರೂಪಣೆಯ ಕಾಫಿ ವಿಥ್ ಕರಣ್ ಸೀಸನ್ 8ರಲ್ಲಿ ಈಗಾಗಲೇ ರಣ್​​ವೀರ್ ಸಿಂಗ್ - ದೀಪಿಕಾ ಪಡುಕೋಣೆ, ಸನ್ನಿ ಡಿಯೋಲ್ - ಬಾಬಿ ಡಿಯೋಲ್ ಮತ್ತು ಸಾರಾ ಅಲಿ ಖಾನ್ - ಅನನ್ಯಾ ಪಾಂಡೆ ಭಾಗಿಯಾಗಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ ಕಾಜೋಲ್ - ರಾಣಿ ಮುಖರ್ಜಿ ಮತ್ತು ಅಜಯ್ ದೇವಗನ್ - ರೋಹಿತ್ ಶೆಟ್ಟಿ ಅವರಂತಹ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details