ಕರ್ನಾಟಕ

karnataka

ETV Bharat / entertainment

ತೇಜ್ ಅಭಿನಯದ ರಾಮಾಚಾರಿ 2.0 ಸಿನಿಮಾಗೆ ರಾಘವೇಂದ್ರ ರಾಜಕುಮಾರ್ ಸಾಥ್ - Etv Bharat Kannada

ನಟ ತೇಜ್​ ಅಭಿನಯಿಸಿ ನಿರ್ದೇಶಿಸಿರುವ ರಾಮಾಚಾರಿ 2.0 ಚಿತ್ರದ ಟ್ರೈಲರ್​ನ್ನು ನಟ ರಾಘವೇಂದ್ರ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ. ​

ರಾಮಾಚಾರಿ 2.0 ಟ್ರೈಲರ್​ ಬಿಡುಗಡೆ
ರಾಮಾಚಾರಿ 2.0 ಟ್ರೈಲರ್​ ಬಿಡುಗಡೆ

By

Published : Feb 27, 2023, 3:40 PM IST

ರಿವೈಂಡ್ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದ ಕನ್ನಡದ ಹುಡುಗ ತೇಜ್. ಬಾಲ ನಟನಾಗಿ ಕನ್ನಡ ಹಾಗು ತಮಿಳು ಚಿತ್ರಗಳಲ್ಲಿ ಅಭಿನಯಿಸಿರೋ ತೇಜ್, ಸದ್ಯ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಈ ಚಿತ್ರಕ್ಕೆ ರಾಮಾಚಾರಿ 2.0 ಅಂತಾ ಟೈಟಲ್ ಇಡಲಾಗಿದ್ದು, ಶೂಟಿಂಗ್ ಮುಗಿದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ರಾಮಾಚಾರಿ 2.0 ಟ್ರೈಲರ್ ನಟ ರಾಘವೇಂದ್ರ ರಾಜ್​ಕುಮಾರ್ ​ಬಿಡುಗಡೆ ಮಾಡುವ ಮೂಲಕ ಈ ಹೊಸ ಪ್ರತಿಭೆಯ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ರಾಘವೇಂದ್ರ ರಾಜ್​ಕುಮಾರ್ ಅವರು, ತೇಜ್ ಅವರು ನನಗೆ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ನಾನು ತೇಜ್ ಅವರ ತಂದೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಸಪೋರ್ಟ್ ಮಾಡಿ ಅಂದರು. ಇನ್ನು ನಟನೆ ಜೊತೆಗೆ, ನಿರ್ದೇಶಕ ಹಾಗೂ ನಿರ್ಮಾಣ ಮಾಡಿರುವ ತೇಜ್ ಮಾತನಾಡಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ಆನಂತರ ಪ್ರವೀಣ್ ನಾಯಕ್ ನಿರ್ದೇಶನದ "ಮೀಸೆ ಚಿಗುರಿದಾಗ" ಚಿತ್ರದಲ್ಲಿ ಅಭಿನಯಿಸಿದ್ದೆ. ಪಾರ್ವತಮ್ಮ ರಾಜ್​ಕುಮಾರ್, ಪುನೀತ್ ರಾಜ್​ಕುಮಾರ್ ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ತಮಿಳಿನ‌ ಕೆಲವು ಚಿತ್ರಗಳಲ್ಲೂ ನಟಿಸಿರುವ ನಾನು, ಮೂರು ವರ್ಷಗಳ ಹಿಂದೆ "ರಿವೈಂಡ್" ಚಿತ್ರ‌ ಮಾಡಿದ್ದೆ. "ನಾಗರಹಾವು" ಕಾಲದಿಂದಲೂ "ರಾಮಾಚಾರಿ" ಎಂಬ ಹೆಸರಿಗೆ ಅದರದೇ ಆದ ವಿಶೇಷ ಸ್ಥಾನ ಇದೆ ಎಂದರು.

ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ನನಗೆ ಸಿಕ್ಕಿದ್ದು ನನ್ನ ಪುಣ್ಯ. "ರಾಮಾಚಾರಿ 2.0" ವಿಭಿನ್ನ ಕಥೆಯುಳ್ಳ ಸಿನಿಮಾವಾಗಿದೆ. ರಾಘವೇಂದ್ರ ರಾಜ್​ಕುಮಾರ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನನ್ನು ಮಗ ಎಂದು ಕರೆಯುವ ರಾಘಣ್ಣ ಅವರು ನಮ್ಮ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ ಎಂದು ಹೇಳಿದರು.

ಇನ್ನು ಚಿತ್ರದಲ್ಲಿ ತೇಜ್ ಜೋಡಿಯಾಗಿ ಕೌಸ್ತುಭ ನಟಿಸಿದ್ದಾರೆ. ಜೊತೆಗೆ ಚಂದನ, ವಿಜಯ್ ಚೆಂಡೂರ್, ಮುನಿಕೃಷ್ಣ, ಸ್ಪರ್ಶ ರೇಖ, ಸ್ವಾತಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ನನ್ನನ್ನು ತೇಜ್ ತಮಿಳು ಚಿತ್ರದ ಮುಹೂರ್ತಕ್ಕೆ ಆಹ್ವಾನಿಸಿದ್ದರು. ಅಂದು ನೀವು ಒಳ್ಳೆಯ ನಟ ಆಗುತ್ತೀರಾ ಅಂದಿದ್ದೆ. ಎರಡು ಸಾವಿರ ರೂಪಾಯಿ ಅಡ್ವಾನ್ಸ್ ಸಹ ನೀಡಿದ್ದೆ. ಸುರದ್ರೂಪಿ ನಟ ತೇಜ್ ಈಗ "ರಾಮಾಚಾರಿ 2.0" ಚಿತ್ರ ನಿರ್ದೇಶಿಸಿ ನಟಿಸಿದ್ದಾರೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಡಾ||ವಿ.ನಾಗೇಂದ್ರ ಪ್ರಸಾದ್ ಹಾರೈಸಿದರು. ಸದ್ಯ ಟ್ರೈಲರ್ ನಿಂದ ಸದ್ದು ಮಾಡುತ್ತಿರುವ ರಾಮಾಚಾರಿ 2.0 ಸಿನಿಮಾ ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಸೌರವ್​ ಗಂಗೂಲಿ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿಲ್ಲ: ರಣಬೀರ್ ಸ್ಪಷ್ಟನೆ

ABOUT THE AUTHOR

...view details