ನಟಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸಂಬಂಧ ಈಗಾಗಲೇ ಬಹಿರಂಗವಾಗಿದ್ದು, ಇಬ್ಬರೂ ಈ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಈ ಜೋಡಿ ಬಾಕುವಿಗೆ ವಿಹಾರಕ್ಕಾಗಿ ತೆರಳಿದ್ದಾರೆ. ಅವರು ಅಲ್ಲಿ ತಂಗಿರುವ ಮನೆಗೆ ಕೆಲವು ಆಪ್ತರು ಮತ್ತು ಕುಟುಂಬದ ಸದಸ್ಯರನ್ನು ಆಹ್ವಾನಿಸಿದ್ದರು. ಅರ್ಜುನ್ ಸಹೋದರಿ, ನಟಿ ಜಾಹ್ನವಿ ಕಪೂರ್ ತಮ್ಮ ವದಂತಿ ಗೆಳೆಯ ಶಿಖರ್ ಪಹಾರಿಯಾ ಜೊತೆ ಅಲ್ಲಿಗೆ ತೆರಳಿದ್ದರು. ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ಕೂಡ ಭೇಟಿ ನೀಡಿದ್ದರು.
ಪಾಪರಾಜಿ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ಜಾಹ್ನವಿ ಮತ್ತು ಶಿಖರ್ ಒಟ್ಟಿಗೆ ಕಾರಿನಲ್ಲಿ ತೆರಳುತ್ತಿರುವುದನ್ನು ಕಾಣಬಹುದು. ವದಂತಿಯಲ್ಲಿರುವ ಪ್ರೇಮ ಪಕ್ಷಿಗಳು ಅರ್ಜುನ್ನನ್ನು ಭೇಟಿ ಮಾಡುವಾಗ ಬಿಳಿ ಬಣ್ಣ ದಿರಿಸಿನಲ್ಲಿ ಅವಳಿಯಾಗಿ ಕಾಣಿಸಿಕೊಂಡರು. ಮತ್ತೊಂದೆಡೆ, ವರುಣ್ ಧವನ್ ನೀಲಿ ಮುದ್ರಿತ ಶರ್ಟ್ನಲ್ಲಿ ಗಮನ ಸೆಳೆದರು. ಅವರ ಪತ್ನಿ ಮತ್ತು ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಜೊತೆಯಲ್ಲಿದ್ದರು. ಅವರು ಕಪ್ಪು ಪ್ಯಾಂಟ್ ಮತ್ತು ಬಿಳಿ ಕ್ರಾಪ್ ಟಾಪ್ ಧರಿಸಿದ್ದರು.
ಜಾಹ್ನವಿ ಕಪೂರ್ ಸಿನಿಮಾ.. ಇನ್ನೂ ಜಾಹ್ನವಿ ಕಪೂರ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬವಾಲ್, ದೇವರ, ಮಿಸ್ಟರ್ ಅಂಡ್ ಮಿಸೆಸ್ ಮಾಹಿ, ಉಲ್ಜಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಚಿತ್ರಗಳಿಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಮುಂದಿನ ಪ್ರಾಜೆಕ್ಟ್ಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಹೀಗೆ ಒಂದರ ಹಿಂದೆ ಒಂದರಂತೆ ಬಹುಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ 'ಬವಾಲ್' ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾ ವಿಚಾರವಾಗಿಯೇ ಜಾಹ್ನವಿ ಕಪೂರ್ ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.