ಕರ್ನಾಟಕ

karnataka

ETV Bharat / entertainment

ನಾನು ಜೀವನದಲ್ಲಿ ಒಮ್ಮೆ ಮಾತ್ರ ಪ್ರೀತಿ ಮಾಡಿದ್ದೇ; ಈಗ ಭಾವನೆಗಳೇ ಇಲ್ಲ, ಪ್ರತಿಯೊಬ್ಬರೂ ಸ್ವಾರ್ಥಿ ಎಂದಿದ್ದೇಕೆ ನಟಿ ಶೆಹನಾಜ್​ ಗಿಲ್? - ಈಟಿವಿ ಭಾರತ್​ ಕನ್ನಡ ನ್ಯೂಸ್

ಜನರು ತಮ್ಮದೇ ಆದ ಸ್ವಾರ್ಥ ಕಾರ್ಯಸೂಚಿಯನ್ನು ಹೊಂದಿರುವುದರಿಂದ ಯಾರನ್ನೂ ನಂಬುವುದು ಕಷ್ಟ ಎಂದು ನಟಿ ಶೆಹನಾಜ್ ಗಿಲ್ ಹೇಳಿದ್ದಾರೆ.

ನಟಿ ಶೆಹ್ನಾಜ್ ಗಿಲ್
ನಟಿ ಶೆಹ್ನಾಜ್ ಗಿಲ್

By

Published : Jul 5, 2023, 5:41 PM IST

ಸದಾ ತಮ್ಮ ಸಂಬಂಧಗಳ ಬಗ್ಗೆ ಖಾಸಗಿಯಾಗಿರುವ ನಟಿ ಹಾಗೂ ಗಾಯಕಿ ಶೆಹನಾಜ್ ಗಿಲ್ ಇತ್ತೀಚೆಗೆ ತಮ್ಮ ಪ್ರೀತಿಯ ಅನುಭವದ ಬಗ್ಗೆ ಮಾತನಾಡಿದ್ದಾರೆ. ನಾನು ಮೊದಲು ಪ್ರೀತಿಸುತ್ತಿದ್ದೆ, ಆದರೆ ಇದೀಗ ಭಾವನೆಯನ್ನು ಚರ್ಚಿಸಲು ಆಸಕ್ತಿ ಹೊಂದಿಲ್ಲ. ಜೀವನದಲ್ಲಿ ಯಾರೂ ನಂಬಲರ್ಹರಲ್ಲ. ಪ್ರತಿಯೊಬ್ಬರೂ ಸ್ವಾರ್ಥಿ ಕಾರ್ಯಸೂಚಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಶೆಹನಾಜ್ ತಮ್ಮ ಜೀವನದಲ್ಲಿ ನಡೆದ ಅನುಭವಗಳ ಬಗ್ಗೆ ಮಾತನಾಡುತ್ತಾ, "ನಾನು ಜೀವನದಲ್ಲಿ ಯಾರನ್ನೂ ನಂಬುವುದಿಲ್ಲ. ಯಾರೂ ನಂಬಲರ್ಹರಲ್ಲ. ಎಲ್ಲರೂ ಸ್ವಾರ್ಥಿಗಳಾಗಿದ್ದು, ಒಬ್ಬರು ಇನ್ನೊಬ್ಬರಿಗೆ ತುಂಬ ಹತ್ತಿರವಾಗಬಹದು. ಆದರೆ, ಒಂದು ಹಂತದಲ್ಲಿ ಹತ್ತಿರವಾದವರನ್ನು ಇನ್ನೊಬ್ಬರು ಮರೆತುಬಿಡುತ್ತಾರೆ ಎಂದು ಮನದಾಳದ ಮಾತುಗಳನ್ನು ಆಡಿದ್ದಾರೆ. ಇನ್ನು ಶೆಹನಾಜ್​ ಅವರ ಪ್ರೀತಿ ಸಂಬಂಧಗಳ ಬಗ್ಗೆ ಕೇಳಿದಾಗ, "ನಾನು ಒಂದೇ ಒಂದು ಬಾರಿ ಪ್ರೀತಿಸಿದ್ದೆ" ಎಂದು ಹೇಳಿದ ಮೇಲೆ ಪ್ರೀತಿಯ ಬಗ್ಗೆ ಮಾತನಾಡಬೇಡಿ ಎಂದಿದ್ದರು.

ಇದನ್ನೂ ಓದಿ :ಮಗಳು ಹುಟ್ಟಿ ಕೆಲವೇ ದಿನಗಳಲ್ಲಿ ಶೂಟಿಂಗ್​ನಲ್ಲಿ ಭಾಗಿ: 'ತುಮ್ ಕ್ಯಾ ಮಿಲೇ' ಅನುಭವ ಹಂಚಿಕೊಂಡ ಆಲಿಯಾ ಭಟ್​

ಪ್ರೀತಿಯಲ್ಲಿ ಮೋಸವಾಗಿದೆಯಾ ಎಂದು ಮತ್ತೊಮ್ಮೆ ಶೆಹನಾಜ್ ಗಿಲ್ ಅವರಿಗೆ ಪ್ರಶ್ನೆ ಕೇಳಿದಾಗ, ನಾನು ಯಾರಿಗೂ ದ್ರೋಹ, ಮೋಸ ಮಾಡಿಲ್ಲ ಆದರೆ, ಎಲ್ಲರೂ ನನಗೆ ಮೋಸ ಮಾಡಿದ್ದಾರೆ. ಪ್ರೀತಿಯಲ್ಲಿ ನೋವಾದಾಗಲೆಲ್ಲ ಸಾಂತ್ವನಕ್ಕಾಗಿ ನಾನು ಅಧ್ಯಾತ್ಮದತ್ತ ಕಡೆ ಮುಖ ಮಾಡಿದ್ದೇನೆ. ಮುಂಬೈಗೆ ತೆರಳಿದ ನಂತರವೇ ಪ್ರೀತಿಯಲ್ಲಿ ಸಮಾನತೆಯ ಬಗ್ಗೆ ಕಲಿತಿದ್ದೇನೆ. ಏಕೆಂದರೆ ಹಳ್ಳಿಗಳಲ್ಲಿ ಜನರು ಮಹಿಳೆಯರ ಬಗ್ಗೆ ಮೀಸಲು ಮನೋಭಾವ ಹೊಂದಿದ್ದಾರೆ. ಮುಂಬೈನಲ್ಲಿ ತಾನು ಉತ್ತಮ ಜೀವನ ಹೊಂದಿದ್ದೇನೆ ಎಂದು ಉತ್ತರಿಸಿದ್ದಾರೆ.

ಬಳಿಕ ಪ್ರೀತಿಯು ಯಾರನ್ನಾದರೂ ಕಾಳಜಿ ವಹಿಸುತ್ತದೆ. ಮತ್ತು ಅವರ ಬಗ್ಗೆ ಸಹಾನುಭೂತಿ ಹೊಂದುವುದಾಗಿದೆ. ಪ್ರೀತಿಯಲ್ಲಿ ದೈಹಿಕ ಸ್ಪರ್ಶ ಇರಬೇಕು. ನೋವಿನಲ್ಲಿರುವವರನ್ನು ನೀವು ತಬ್ಬಿಕೊಂಡಾಗ ಅವರಿಗೆ ಸಾಂತ್ವನ ಹೇಳಿದರೆ. ಅದಕ್ಕಿಂತ ಸುಂದರವಾದದ್ದು ಇನ್ನೊಂದಿಲ್ಲ. ಯಾರನ್ನಾದರೂ ಪ್ರೀತಿಸುವುದರಲ್ಲಿ ನಾಚಿಕೆ ಪಡಬೇಕಾಗಿಲ್ಲ. ಆದರೆ ಪ್ರೀತಿ ಏನೆಂದು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ಶೆಹನಾಜ್​ ಮೌನವಹಿಸಿದ್ದಾರೆ.

ಹಿಂದಿ ಬಿಗ್​ ಬಾಸ್ 13 ಶೋ​ ನಲ್ಲಿ ಒಟ್ಟಿಗಿದ್ದ ಶೆಹನಾಜ್​ ಮತ್ತು ದಿವಂಗತ ಬಾಲಿವುಡ್​ ಕಿರುತೆರೆ ನಟ ಸಿದ್ಧಾರ್ಥ್​ ನಡುವೆ ಆತ್ಮೀಯ ಸಂಬಂಧ ಇತ್ತು. ಆದರೆ, ಅಧಿಕೃತವಾಗಿ ಇದನ್ನು ಅವರು ಬಯಲು ಮಾಡಿರಲಿಲ್ಲ. ಸಿದ್ಧಾರ್ಥ್ ಶುಕ್ಲಾ ಇಂದು ಇಲ್ಲದಿದ್ದರೂ ಸಹಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ವದಂತಿಗಳಿವೆ. ಆದರೇ ಈ ಬಗ್ಗೆ ಶೆಹನಾಜ್​ ಮಾತ್ರ ಪ್ರೀತಿ ಬಗ್ಗೆ ಎಲ್ಲಿಯೂ ಮಾತನಾಡದೇ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ :ಕಂಗನಾ ರಣಾವತ್ 'ತೇಜಸ್', ಟೈಗರ್ ಶ್ರಾಫ್ 'ಗಣಪತ್ ಭಾಗ-1' ಸಿನಿಮಾ ಒಂದೇ ದಿನ ತೆರೆಗೆ

ABOUT THE AUTHOR

...view details