ಕರ್ನಾಟಕ

karnataka

ETV Bharat / entertainment

'ನಿಲ್ಲಲೇ ಬೇಕು ಎಲ್ಲ ಧಿಮಾಕು'..ಮಲಯಾಳಂ ಜೊತೆ ಕನ್ನಡದಲ್ಲೂ 'ಧೂಮಂ' ರಿಲೀಸ್​ - etv bharat kannada

ಮಲಯಾಳಂ ಜೊತೆಗೆ ಕನ್ನಡ ಭಾಷೆಯಲ್ಲೂ 'ಧೂಮಂ' ಚಿತ್ರ ಜೂನ್ 23 ರಂದು ಬಿಡುಗಡೆಯಾಗಲಿದೆ.

Dhoomam
'ಧೂಮಂ'

By

Published : Jun 20, 2023, 1:38 PM IST

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ 'ಧೂಮಂ’ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಮಾಲಿವುಡ್​ ಬಹುಬೇಡಿಕೆಯ ನಟ ಫಹಾದ್​ ಫಾಸಿಲ್​ ನಟನೆಯ ಈ ಚಿತ್ರ ಮಲಯಾಳಂನಲ್ಲಿ ಮಾತ್ರ ತೆರೆಗೆ ಬರುತ್ತೆ ಎಂಬ ಮಾತು ಕೇಳಿಬಂದಿತ್ತು. ಈ ಎಲ್ಲ ಗೊಂದಲಗಳಿಗೆ ಹೊಂಬಾಳೆ ಫಿಲ್ಮ್ಸ್​ ತೆರೆ ಎಳೆದಿದೆ. ಟ್ವೀಟ್​ ಮಾಡುವ ಮೂಲಕ ಸ್ಪಷ್ಟನೆ ನೀಡಿದೆ.

ಹೊಂಬಾಳೆ ಟ್ವೀಟ್​:ನಿರ್ಮಾಪಕ ವಿಜಯ್​ ಕಿರಗಂದೂರು ಮೊದಲ ಬಾರಿಗೆ ಮಲಯಾಳಂ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದ್ದಾರೆ. 'ಧೂಮಂ' ಮೂಲಕ ಮಾಲಿವುಡ್​ ರಂಗದಲ್ಲೂ ಮಿಂಚಲು ತಯಾರಾಗಿದ್ದಾರೆ. ಈ ಸಿನಿಮಾ ಮಲಯಾಳಂ ಭಾಷೆಯಲ್ಲಿ ಮಾತ್ರ ರಿಲೀಸ್​ ಆಗಲಿದೆ ಎನ್ನಲಾಗಿತ್ತು. ಇದು ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕೂಡ ಚಿತ್ರತಂಡ ನೀಡಿರಲಿಲ್ಲ.

ಇದೀಗ ಹೊಂಬಾಳೆ ಫಿಲ್ಮ್ಸ್​ ಎಲ್ಲ ಗೊಂದಲಗಳಿಗೂ ಅಂತ್ಯ ಹಾಡಿದೆ. ಮಲಯಾಳಂ ಜೊತೆಗೆ ಕನ್ನಡ ಭಾಷೆಯಲ್ಲೂ 'ಧೂಮಂ' ಚಿತ್ರ ತೆರೆ ಕಾಣಲಿದೆ. ಜೂನ್​ 23 ರಂದು ಮಲಯಾಳಂ ಜೊತೆಗೆ ಕನ್ನಡದಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಹೊಂಬಾಳೆ ಫಿಲ್ಮ್ಸ್​, "ನಿಲ್ಲಲೇ ಬೇಕು ಎಲ್ಲ ಧಿಮಾಕು ಕಾಲಪುರುಷನ ಕಾಲಿನ ಕೆಳಗೆ... ಧೂಮಂ ಕನ್ನಡದಲ್ಲಿ ಜೂನ್ 23 ರಂದು ರಾಜ್ಯಾದ್ಯಂತ ಬಿಡುಗಡೆ" ಎಂದು ತಿಳಿಸಿದೆ. ಇದು ಕನ್ನಡ ಸಿನಿ ಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಆದಿಪುರುಷ್​​ ಗಳಿಕೆ ಇಳಿಕೆ: ಮೂರು ದಿನದಲ್ಲಿ 300 ಕೋಟಿ ಗಳಿಸಿದ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್​ 20 ಕೋಟಿ!

ಧೂಮಂ ಸಿನಿಮಾವನ್ನು ಲೂಸಿಯಾ ಮತ್ತು ಯೂಟರ್ನ್​ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶಿಸಿದ್ದಾರೆ. ಪ್ರಖ್ಯಾತ ಬಹುಭಾಷಾ ನಟ ಫಹಾದ್​ ಫಾಸಿಲ್​ ನಾಯಕನಾಗಿ ನಟಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್ ಸೇರಿದಂತೆ ಹಲವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅನೀಸ್ ನಾಡೋಡಿ (ಪ್ರೊಡಕ್ಷನ್​ ಡಿಸೈನ್​) ಮತ್ತು ಪೂರ್ಣಿಮಾ ರಾಮಸ್ವಾಮಿ (ವಸ್ತ್ರ ವಿನ್ಯಾಸ)ವಿರಲಿದೆ. ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

ಇದನ್ನೂ ಓದಿ:'Adipurush' row: 'ಆದಿಪುರುಷ್'​​ ವಿವಾದಗಳ ಮಧ್ಯೆ ಕೇವಲ ಮೆಚ್ಚುಗೆಗೆ ಗಮನ ನೀಡಿದ ನಟಿ ಕೃತಿ ಸನೋನ್​

ABOUT THE AUTHOR

...view details