ಜೈಪುರ (ರಾಜಸ್ಥಾನ) : ಬಾಲಿವುಡ್ ಮತ್ತು ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಅವರ ವಿವಾಹ ಸಮಾರಂಭವು ಜೈಪುರದ ವಾರ್ ಫೋರ್ಟ್ ಮುಂಡೋಟಾದಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ಶುಕ್ರವಾರ ನಡೆದ ಮೆಹೆಂದಿ ಸಮಾರಂಭದ ನಂತರ ಶನಿವಾರ ಬೆಳಗ್ಗೆ ಪೊಲೊ ಮೈದಾನದಲ್ಲಿ ಅತಿಥಿಗಳಿಗೆ ಅದ್ಧೂರಿ ಔತಣ ಕೂಟ ಏರ್ಪಡಿಸಲಾಗಿತ್ತು.
ಮದುವೆ ಸಂಭ್ರಮದಲ್ಲಿ ನಟಿ ಹನ್ಸಿಕಾ.. ಸಡಗರದ ವಿಡಿಯೋ ನೋಡಿ! - ಈಟಿವಿ ಭಾರತ ಕನ್ನಡ
ಬಾಲಿವುಡ್ ಮತ್ತು ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಅವರ ವಿವಾಹ ಸಮಾರಂಭವು ಜೈಪುರದ ವಾರ್ ಫೋರ್ಟ್ ಮುಂಡೋಟಾದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.
ಮದುವೆ ಸಂಭ್ರಮದಲ್ಲಿ ನಟಿ ಹನ್ಸಿಕಾ..ವಿಡಿಯೋ
ವಿವಾಹ ಸಮಾರಂಭದಲ್ಲಿ ಹನ್ಸಿಕಾ ಮಧುಮಗ ಸೊಹೈಲ್ ಜೊತೆ 'ಕೇಸರಿಯಾ ತೇರಾ ಹಾಡಿಗೆ ಭರ್ಜರಿ ನೃತ್ಯ ಮಾಡಿದರು. ಇದಕ್ಕೂ ಮುನ್ನ ಇಬ್ಬರೂ ಬಿಳಿ ಬಣ್ಣದ ವಿಂಟೇಜ್ ಕಾರಿನಿಂದ ಇಳಿದು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಡೆದು ಬಂದರು. ಕಾರ್ಯಕ್ರಮದಲ್ಲಿ ನಟಿ ಹನ್ಸಿಕಾ ಮೋಟ್ವಾನಿ ಬಿಳಿ ಗೌನ್ ಮತ್ತು ಸೊಹೈಲ್ ಶೆರ್ವಾನಿಯಲ್ಲಿ ಮಿಂಚುತ್ತಿದ್ದರು.
ಇದನ್ನೂ ಓದಿ :ಮಗಳೊಂದಿನ ವಿಡಿಯೋ ಹಂಚಿಕೊಂಡ ನಟ ಅಪೂರ್ವ ಅಗ್ನಿಹೋತ್ರಿ