ಕರ್ನಾಟಕ

karnataka

ETV Bharat / entertainment

ಹನ್ಸಿಕಾ - ಸೊಹೈಲ್ ಮದುವೆ ಸಂಭ್ರಮ.. ಸಂಗೀತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ - ಹನ್ಸಿಕಾ ಮೋಟ್ವಾನಿ ಲೇಟೆಸ್ಟ್ ನ್ಯೂಸ್

ನಟಿ ಹನ್ಸಿಕಾ ಮೋಟ್ವಾನಿ ನಾಳೆ ಸೊಹೈಲ್ ಕಥುರಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಕೆಲ ಶಾಸ್ತ್ರಗಳು ನಡೆದಿದ್ದು ಫೋಟೋಗಳು ಇಲ್ಲಿವೆ.

Hansika Motwani Sohail Kathuria Sangeet ceremony pictures
ಹನ್ಸಿಕಾ ಸೊಹೈಲ್ ಸಂಗೀತ ಕಾರ್ಯಕ್ರಮದ ಫೋಟೋಗಳು

By

Published : Dec 3, 2022, 4:24 PM IST

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರು ಗೆಳೆಯ, ಉದ್ಯಮಿ ಸೊಹೈಲ್ ಕಥುರಿಯಾ ಅವರೊಂದಿಗೆ ನಾಳೆ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಮದುವೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ಮೆಹಂದಿ, ಸಂಗೀತ ಸೇರಿದಂತೆ ಬಗೆ ಬಗೆಯ ಶಾಸ್ತ್ರಗಳು ನಡೆದಿವೆ.

ಜೈಪುರದ 450 ವರ್ಷಗಳಷ್ಟು ಹಳೆಯ ಪುರಾತನ ಮಂಡೋಟಾ ಅರಮನೆ ಅವರ ಮದುವೆಗೆ ಸಾಕ್ಷಿಯಾಗುಲಿದ್ದು, ಸದ್ಯ ಲೈಟಿಂಗ್ಸ್​ನಿಂದ ಸಿಂಗಾರಗಳಿಸಲಾಗಿದೆ. ಈಗಾಗಲೇ ನಡೆದಿರುವ ಮೆಹೆಂದಿ, ಸಂಗೀತ ಕಾರ್ಯಕ್ರಮದ ಫೋಟೋಗಳನ್ನು ನಟಿ ಹನ್ಸಿಕಾ ಮೋಟ್ವಾನಿ ಹಂಚಿಕೊಂಡಿದ್ದಾರೆ. ಸೊಹೈಲ್ ಕಥುರಿಯಾ ಅವರೊಂದಿಗೆ ಸೊಹೈಲ್ ಕಥುರಿಯಾ ನಿಂತಿರುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ವಸಿಷ್ಠ ಜೊತೆ ಕ್ರಿಯೇಟಿವ್ ಆಗಿ ನಿಶ್ಚಿತಾರ್ಥ ಮಾಡಿಕೊಂಡರಂತೆ ನಟಿ ಹರಿಪ್ರಿಯಾ..

ಮೆಹಂದಿ ಫೊಟೋ ಸಹ ಸಾಕಷ್ಟು ವೈರಲ್​​ ಆಗಿದೆ. ಕೆಂಪು ಉಡುಗೆ ಧರಿಸಿದ್ದ ಅವರು ಸೋಫಾದ ಮೇಲೆ ಕುಳಿತು ಮೆಹಂದಿ ಹಚ್ಚಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಈ ವೇಳೆ, ಅವರು ಚಿತ್ರವೊಂದರ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಹಾಡಿನಲ್ಲಿ ಭಾವಿ ಪತಿ ಸೊಹೈಲ್ ಕೂಡ ಇದ್ದಾರೆ.

ಹನ್ಸಿಕಾ-ಸೊಹೈಲ್ ಮದುವೆಗೆ ಸಿದ್ಧಗೊಂಡ ಪುರಾತನ ಅರಮನೆ

ಇದನ್ನೂ ಓದಿ:ಹನ್ಸಿಕಾ ಮದುವೆ ಶಾಸ್ತ್ರಗಳು ಪ್ರಾರಂಭ: ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

ನಿನ್ನೆ ರಾತ್ರಿಯಿಂದನೇ ಮದುವೆ ಶಾಸ್ತ್ರ ಪ್ರಾರಂಭವಾಗಿದೆ. ಇಂದು ಹಳದಿ ಶಾಸ್ತ್ರ ನಡೆಯಲಿದೆ. ನಾಳೆ ಹನ್ಸಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಸೊಹೈಲ್ ಅವರು.

ABOUT THE AUTHOR

...view details