ಹಿರಿಯ ನಟಿ ಲೀಲಾವತಿ ಕನ್ನಡ ಚಿತ್ರರಂಗದಿಂದ ದೂರ ಉಳಿದು ಬಹಳ ವರ್ಷಗಳೇ ಸಂದಿವೆ. ಸದ್ಯ ಲೀಲಾವತಿಯವರು ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ, ತೋಟ ಮಾಡಿಕೊಂಡು ಮಗ ವಿನೋದ್ ರಾಜ್ ಜೊತೆ ಜೀವನ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಲೀಲಾವತಿಯವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಹಾಗೂ ಅವರ ಪದಾಧಿಕಾರಿಗಳು ಬಂದು ವಿಚಾರಿಸಿದ್ದಾರೆ.
ಅದಕ್ಕೆ ಕಾರಣ ಲೀಲಾವತಿ ಹಾಗೂ ವಿನೋದ್ ರಾಜ್ ನೆಲಮಂಗಲದ ಬಳಿ ಸೋಲದೇವನಹಳ್ಳಿಯಲ್ಲಿ ವಾಸವಿದ್ದು, ಗ್ರಾಮದ ಜನರಿಗಾಗಿ ಸ್ವಂತ ಹಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ್ದಾರೆ. ಚೆನ್ನೈ ಬಳಿ ಖರೀದಿಸಿದ್ದ ಜಮೀನನ್ನು ಲೀಲಾವತಿ ಅವರು 50 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಸೋಮದೇವನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಆರೋಗ್ಯ ಕೇಂದ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಉದ್ಘಾಟನೆ ಮಾಡಬೇಕಿತ್ತು. ಸಚಿವ ಉಮೇಶ ಕತ್ತಿಯವರ ನಿಧನದಿಂದ ಈ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಲೀಲಾವತಿ ಮಗ ವಿನೋದ್ ರಾಜ್ ತಾಯಿ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ಭಾ.ಮಾ ಹರೀಶ್ ಜೊತೆ ಮಾತನಾಡಿದ್ದಾರೆ.