ಹೈದರಾಬಾದ್: ಬಾಲಿವುಡ್ ನಟಿ ದಿವ್ಯಾ ಖೋಸ್ಲಾ ಕುಮಾರ್ ಅವರು ಚಿತ್ರೀಕರಣ ಸಮಯದಲ್ಲಿ ಗಾಯಗೊಂಡಿರುವ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಗಾಯದಿಂದ ಬೇಗ ಗುಣಮುಖವಾಗುವಂತೆ ಆರ್ಶೀವಾದ ಮಾಡಿ ಎಂದು ತಮ್ಮ ಅಭಿಮಾನಿಗಳ ಬಳಿ ವಿನಂತಿಸಿಕೊಂಡಿದ್ದಾರೆ. ‘‘ನನ್ನ ಮುಂಬರುವ ಪ್ರಾಜೆಕ್ಟ್ನ ಆ್ಯಕ್ಷನ್ ಸೀಕ್ವೇನ್ಸ್ನಲ್ಲಿ ತೀವ್ರವಾಗಿ ಗಾಯಗೊಂಡೆ. ಆದರೆ, ಪ್ರದರ್ಶನವು ಮುಂದುವರೆಯಬೇಕು. ನಿಮ್ಮೆಲ್ಲರ ಆರ್ಶಿವಾದ ಮತ್ತು ಬೇಗ ಗುಣಮುಖವಾಗುವ ಶಕ್ತಿ ನನಗೆ ಬೇಕು ಎಂಬ ಶೀರ್ಷಿಕೆಯೊಂದಿಗೆ ದಿವ್ಯಾ ಖೋಸ್ಲಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಟೊವನ್ನು ಹಂಚಿಕೊಂಡಿದ್ದಾರೆ.
ನಟಿಯ ಪೋಸ್ಟ್ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಕಾಮೆಂಟ್ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ ‘‘ಮೇಡಂ ಬೇಗಾ ಗುಣಮುಖರಾಗಿ’’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರನು ‘‘ ನಿಮಗೆ ತುಂಬಾ ನೋವಾಗಿದೆ ನೀವು ಬೇಗ ಗುಣಮುಖರಾಗಿ, ಚೆನ್ನಾಗಿ ಕೆಲಸ ಮಾಡಲಿ ಎಂದು ಪ್ರಾರ್ಥಿಸುತ್ತೇನೆ, ಇಂಡಸ್ಟ್ರಿಯಲ್ಲಿ ನಿಮಗೆ ಒಳ್ಳೆಯ ಹೆಸರು ಬರಲಿ, ಕಾಳಜಿ ವಹಿಸಿ’’ ಎಂದು ಬರೆದಿದ್ದಾರೆ.
ಮತ್ತೊಂದಡೆ, ಇತರ ಬಳಕೆದಾರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿರುವುದನ್ನು ಕಾಣಬಹುದಾಗಿದೆ. ‘‘ನಿರೀಕ್ಷಿಸಿ, ಏನು? ಇದಕ್ಕೆ ಆರ್ಶೀವಾದ ಮತ್ತು ಗುಣ ಪಡಿಸುವ ಶಕ್ತಿ ಬೇಕೆ’’ ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರ ‘‘ಮಧ್ಯಮ ವರ್ಗದ ಮನೆಯ ತಾಯಿಯೊಬ್ಬರು ಇದನ್ನು ದಿನ ನಿತ್ಯದ ಆಧಾರದ ಮೇಲೆ ಪಡೆಯುತ್ತಾರೆ LOL’’ ಎಂದು ಬರೆದಿದ್ದಾರೆ.