ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ನೆರವೇರಿಸಿದ ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ನಟನೆ ಮತ್ತು ಗುಣದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ ಧ್ರುವ ಸರ್ಜಾ. ಸಿನಿಮಾ ಮತ್ತು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ್ದ ಧ್ರುವ ಸರ್ಜಾ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಆ್ಯಕ್ಷನ್ ಪ್ರಿನ್ಸ್ ಮನೆಯಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿದೆ. ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ವಿಶೇಷ ಸ್ಥಳದಲ್ಲಿ ಹಾಗೂ ಬಹಳ ಸರಳ ಮತ್ತು ಶಾಸ್ತ್ರ ಬದ್ಧವಾಗಿ ಆಚರಣೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ಕುಟುಂಬದರು ಪ್ರೇರಣಾಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಇನ್ನೊಂದು ಕಡೆ ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು, ಆ ಕುಟುಂಬ ಇವತ್ತಿಗೂ ಚಿರು ಇಲ್ಲದ ನೋವಿನಲ್ಲಿದೆ. ಧ್ರುವ ಸರ್ಜಾ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಿರು ಸ್ಮರಣೆ ಇಲ್ಲದೇ ಆ ಕಾರ್ಯಕ್ರಮ ಕೊನೆಯಾಗುವುದಿಲ್ಲ.
ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ನೆರವೇರಿಸಿದ ಧ್ರುವ ಸರ್ಜಾ ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಘರ್ಷಿಸಲು ಸಜ್ಜಾದ 'ಮಾರ್ಟಿನ್' & 'ಯುವ'.. ಒಂದೇ ದಿನ 2 ಬಹುನಿರೀಕ್ಷಿತ ಚಿತ್ರಗಳು ರಿಲೀಸ್?
ಅದೇ ರೀತಿ ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳಲಾಗಿದೆ. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲೇ ಸೀಮಂತ ಕಾರ್ಯ ಮಾಡಿರೋದು ವಿಶೇಷ. ಹೀಗಾಗಿ ತರಹೇವಾರಿ ಹೂಗಳಿಂದ ಇಡೀ ಫಾರ್ಮ್ ಹೌಸ್ಅನ್ನು ಸಿಂಗಾರ ಮಾಡಿ ಹಳ್ಳಿ ಶೈಲಿಯಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಗಿದೆ.
ಧ್ರುವ ಸರ್ಜಾ ಅವರಿಗೆ ಪ್ರೇರಣಾ ಸೀಮಂತವನ್ನು ದೊಡ್ಡ ಹೋಟೆಲ್ನಲ್ಲಿ ಮಾಡಬಹುದಾಗಿತ್ತು. ಆದರೆ ಅವರು ಅಣ್ಣನ ಸಮಾಧಿ ಹತ್ತಿರ ಮಾಡಿದ್ದಾರೆ. ಇದು ಧ್ರುವ ಅವರಿಗೆ ಅಣ್ಣ ಚಿರು ಮೇಲಿದ್ದ ಪ್ರೀತಿ ಎಂತಹದ್ದು ಅನ್ನೋದಕ್ಕೆ ಮತ್ತೊಂದು ಸಾಕ್ಷಿ. ಈ ಸುಂದರ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಅಪ್ಪ ಅಮ್ಮ ಹಾಗು ಸ್ನೇಹಿತರು, ಹಾಗೆಯೇ ಪ್ರೇರಣಾ ಸಂಬಂಧಿಕರು ಹಾಜರಾಗಿದ್ದರು.
2019ರಲ್ಲಿ ಪ್ರೇರಣಾ ಜೊತೆ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೀತಿಸಿ ಮದುವೆಯಾದ ಧ್ರುವ ಸರ್ಜಾಗೆ 2022ರ ಅಕ್ಟೋಬರ್ನಲ್ಲಿ ಹೆಣ್ಣು ಮಗು ಜನಿಸಿತು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರೋ ಧ್ರುವ ಸರ್ಜಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ಯ ಕೆಡಿ ಹಾಗು ಮಾರ್ಟಿನ್ ಚಿತ್ರಗಳ ಶೂಟಿಂಗ್ ನಲ್ಲಿರೋ ಧ್ರುವ ಸರ್ಜಾ ಮನೆಗೆ ಸದ್ಯದಲ್ಲೇ ಹೊಸ ಅತಿಥಿಯ ಆಗಮನವಾಗಲಿದೆ.
ಇದನ್ನೂ ಓದಿ:ವಿಡಿಯೋ: ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ ಧ್ರುವ!