ಕರ್ನಾಟಕ

karnataka

ETV Bharat / entertainment

ಫುಡ್​ ಆರ್ಡರ್​ ಮಾಡಿ, ಮನೆಯಲ್ಲೇ ಪತಿ ಜೊತೆ ಸಿನಿಮಾ ನೋಡುವುದು ದಿಪೀಕಾ ಪಡುಕೋಣೆ ಪರ್ಫೆಕ್ಟ್ ಡೇಟ್ ನೈಟ್! - ಇಂಟಿಮೇಟ್ ಡೇಟ್ ನೈಟ್‌

Deepveer: ದೀಪಿಕಾ ತನ್ನ ಪತಿ ರಣವೀರ್ ಜೊತೆಗಿನ ಇಂಟಿಮೇಟ್ ಡೇಟ್ ನೈಟ್‌ಗಳ ಬಗ್ಗೆ ತಮ್ಮ ಆದ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ.

Deepika Padukone and Ranveer Singh couple
ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ಜೋಡಿ

By

Published : Jul 17, 2023, 4:47 PM IST

ಬಾಲಿವುಡ್​ನ ಪವರ್​ ಕಪಲ್​ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಇಬ್ಬರೂ ಬ್ಯಾಕ್​ ಟು ಬ್ಯಾಕ್​ ಒಂದಲ್ಲಾ ಒಂದು ಪ್ರಾಜೆಕ್ಟ್​ ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಈ ಬ್ಯುಸಿ ಮಧ್ಯೆಯೂ ಆಗೊಮ್ಮೆ ಈಗೊಮ್ಮೆ ಈ ಸ್ಟಾರ್​ ಜೋಡಿ ಒಟ್ಟಿಗೆ ಟೈಮ್​ ಸ್ಪೆಂಡ್​ ಮಾಡುವುದನ್ನೂ ಕಾಣಬಹುದು. ಇವರ ಬ್ಯುಸಿ ಶೆಡ್ಯೂಲ್​ ಡೈರಿ ಮಧ್ಯೆಯೂ ಇಬ್ಬರೂ ಸೇರಿ ಕೆಲವೊಂದು ಗುಣಮಟ್ಟದ ಸಮಯಗಳನ್ನು ಕಳೆದಿದ್ದು, ಆ ಪುಟಗಳನ್ನು ದೀಪಿಕಾ ಪಡುಕೋಣೆ ತೆರೆದಿಟ್ಟಿದ್ದಾರೆ. ಇಬ್ಬರೂ ಒಟ್ಟಿಗೆ ಸಮಯ ಆನಂದಿಸಲು ಏನು ಮಾಡುತ್ತಾರೆ. ಆದರ್ಶ ಡೇಟ್​ ನೈಟ್​ ಕಲ್ಪನೆಯ ಬಗ್ಗೆ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ.

ನಮ್ಮ ಡೇಟ್​ ನೈಟ್ ಸುಮಧುರ ಸಂಬಂಧಕ್ಕೆ ದಾರಿ:ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ರಣವೀರ್ ಜೊತೆಗಿನ ಪರ್ಫೆಕ್ಟ್ ಡೇಟ್ ನೈಟ್ ಬಗ್ಗೆ ಮಾತನಾಡಿದ್ದಾರೆ. ಪದ್ಮಾವತ್​ ನಾಯಕಿ ದೀಪಿಕಾ ಪಡುಕೋಣೆ ಅವರಿಗೆ ಹೊರಗೆ ಹೋಗುವುದಕ್ಕಿಂತ ಹೆಚ್ಚಾಗಿ ಮನೆಯಲ್ಲೇ ಡೇಟ್ ನೈಟ್‌ ಮಾಡಲು ಬಯಸುತ್ತಾರಂತೆ. ರುಚಿಕರವಾದ ಟೇಕ್‌ ಅವೇ ಊಟವನ್ನು ಆರ್ಡರ್ ಮಾಡುವುದು ಮತ್ತು ಪೈಜಾಮಾ ಧರಿಸಿ, ತಮ್ಮ ಬೆಡ್​ ರೂಮಲ್ಲಿ ಪತಿ ಜೊತೆ ಕುಳಿತು ಒಂದೊಳ್ಳೆ ಸಿನಿಮಾ ನೋಡುವುದೇ ದೀಪಿಕಾ ಹಾಗೂ ರಣವೀರ್​ ಅವರ ಪರ್ಫೆಕ್ಟ್ ಡೇಟ್ ನೈಟ್​ ಆಗಿರುತ್ತದೆಯಂತೆ. ನಮ್ಮ ಡೇಟ್​ ನೈಟ್​ ಅವರ ಬಿಡುವಿಲ್ಲದೆ ಬ್ಯುಸಿ ಶೆಡ್ಯೂಲ್​ ಮಧ್ಯದಲ್ಲಿ ಇಬ್ಬರನ್ನೂ ಒಟ್ಟಾಗಿರುವಂತೆ ಮಾಡುತ್ತದೆ ಎನ್ನುತ್ತಾರೆ ದೀಪಿಕಾ.

ದೀಪಿಕಾ ತನ್ನ ಪತಿ ರಣವೀರ್ ಜೊತೆಗಿನ ಇಂಟಿಮೇಟ್ ಡೇಟ್ ನೈಟ್‌ಗಳ ಬಗ್ಗೆ ತಮ್ಮ ಆದ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಅವರಿಗೆ ಹೊಸ ರೆಸ್ಟೋರೆಂಟ್‌ಗಳನ್ನು ಪ್ರಯತ್ನಿಸಲು ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. "ನನ್ನ ಪತಿ ನಾನು ಮತ್ತು ನಮ್ಮ ವೃತ್ತಿಗೆ ನಾವು ತುಂಬಾ ಪ್ರಯಾಣಿಸುವ ಹಾಗೂ ಹೆಚ್ಚಿನ ಸಮಯ ಜನರೊಂದಿಗೆ ಇರುವುದು ಅಗತ್ಯವಿದೆ. ಹೌದು ಹಾಗಾಗಿ ಕೆಲವೊಮ್ಮೆ ನಾವು ಹೊರಗೆ ಹೋಗುವುದು, ತಯಾರಾಗುವುದು, ಡೇಟ್​ ನೈಟ್​ ಅನ್ನು ಇಷ್ಟಪಡುತ್ತೇವೆ. ಆದರೆ, ಹೆಚ್ಚಾಗಿ ನಾವು ಪೈಜಾಮಾದಲ್ಲಿ ನಮ್ಮ ಕೋಣೆಯಲ್ಲಿ ಕುಳಿತು ಚಲನಚಿತ್ರ ನೋಡುವುದನ್ನೇ ಆನಂದಿಸುತ್ತೇವೆ. ಮನೆಯಲ್ಲೇ ಕುಳಿತು ಫುಡ್​ ಆರ್ಡರ್​ ಮಾಡುವುದು. ಜೊತೆಗೆ ಟೈಮ್​ ಸ್ಪೆಂಡ್​ ಮಾಡುವುದನ್ನು ಇಷ್ಟ ಪಡುತ್ತೇವೆ" ಎಂದಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಚಿತ್ರದ ಸೆಟ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಪ್ರೇಮ ಅರಳಿತ್ತು. ರಾಮ್ ಲೀಲಾದ ಬಾಕ್ಸ್​ ಆಫೀಸ್​ ಹಿಟ್​ ನಂತರ ದೀಪಿಕಾ ಮತ್ತು ರಣವೀರ್ ಇನ್ನೂ ಎರಡು ಬನ್ಸಾಲಿ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಜಿರಾವ್ ಮಸ್ತಾನಿ (2015) ಮತ್ತು ಪದ್ಮಾವತ್ (2018) ಸಿನಿಮಾಗಳಲ್ಲಿ ಈ ಜೋಡಿ ಜೊತೆಯಾಗಿ ಅಭಿನಯಿಸಿದ್ದಾರೆ. ಇಟಲಿಯ ಲೇಕ್ ಕೊಮೊದಲ್ಲಿರುವ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೊದಲ್ಲಿ ಈ ಜೋಡಿ 2018ರಲ್ಲಿ ಹಸೆಮಣೆಯೇರಿತ್ತು.

ಇದನ್ನೂ ಓದಿ:ಕುಟುಂಬದ ಮುದ್ದು ಫೋಟೋ ಹಂಚಿಕೊಂಡ ನಟ ಅಜಯ್ ದೇವಗನ್​​; ಇದಕ್ಕಿಂತ ಉತ್ತಮ ಸ್ಥಳ ಬೇಕೇ ಎಂದ ನಟ!

ABOUT THE AUTHOR

...view details