'ಲವ್ ಮಾಕ್ಟೇಲ್' ಸಿನಿಮಾ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ. ಅದರ ನಂತರ ಬಂದ ದಿಲ್ ಪಸಂದ್ ಮತ್ತು ಲವ್ ಬರ್ಡ್ಸ್ ಚಿತ್ರಗಳು ಅಂದುಕೊಂಡಂತೆ ಯಶಸ್ಸು ಕಾಣದಿದ್ದರೂ ಸ್ಯಾಂಡಲ್ವುಡ್ನಲ್ಲಿ ಕೃಷ್ಣನ ಬೇಡಿಕೆ ಮಾತ್ರ ಆಗಿಲ್ಲ. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡ್ತಾ ಇರೋ ನಟ ಸದ್ಯ 'ಲವ್ ಮಿ ಆರ್ ಹೇಟ್ ಮಿ' ಅಂತಾ ಜಪ ಮಾಡ್ತಾ ಇದ್ದಾರೆ.
ಹೌದು. ಡಾರ್ಲಿಂಗ್ ಕೃಷ್ಣ ಬೆಳ್ಳಿತೆರೆಯಲ್ಲಿ ನಾಯಕನಾಗಿ ನಟಿಸಲು ಪ್ರಾರಂಭಿಸಿ ದಶಕಗಳೇ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ತಾವೇ ಸಿನಿಮಾಗಳಿಗೆ ಕಥೆ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಇವರ ಕೈಯಲ್ಲಿ ಕೌಸಲ್ಯ ಸುಪ್ರಜಾ ರಾಮ, ಶುಗರ್ ಫ್ಯಾಕ್ಟರಿ, ಲವ್ ಮಿ ಆರ್ ಹೇಟ್ ಮಿ ಸಿನಿಮಾಗಳಿವೆ.
ಅದರಲ್ಲಿ 'ಲವ್ ಮಿ ಆರ್ ಹೇಟ್ ಮಿ' ಬಿಡುಗಡೆಗೆ ಸಜ್ಜುಗೊಂಡಿದೆ. ಸಿನಿಮಾ ಟೈಟಲ್ ಕೇಳುವಾಗಲೇ ಡಾ.ರಾಜ್ಕುಮಾರ್ ಅಭಿನಯದ ಶಂಕರ್ ಗುರು ಸಿನಿಮಾದ ಹಾಡೇ ನೆನಪಿಗೆ ಬರುತ್ತದೆ. ಈ ಚಿತ್ರದ ಶೂಟಿಂಗ್ ಕೂಡ ಸೈಲೆಂಟ್ ಆಗಿಯೇ ಮುಕ್ತಾಯಗೊಂಡಿದ್ದು, ಕೃಷ್ಣ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Raj B Shetty’s Toby: ರಾಜ್ ಬಿ ಶೆಟ್ರ 'ಟೋಬಿ' ಮೋಷನ್ ಪೋಸ್ಟರ್ ಔಟ್; ಸಿನಿಮಾ ಬಿಡುಗಡೆ ದಿನವೂ ಫಿಕ್ಸ್