ಕರ್ನಾಟಕ

karnataka

ETV Bharat / entertainment

ಕನ್ನಡ ಓಟಿಟಿ ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ - Kannada Ott Bigg Boss House

ಕನ್ನಡ ಓಟಿಟಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ.

Comedy Kiladi Lokesh Entry to Kannada Ott Bigg Boss House
ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ

By

Published : Sep 15, 2022, 6:57 PM IST

ಕನ್ನಡ ಓಟಿಟಿ ಬಿಗ್ ಬಾಸ್ ಶೋ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಫಿನಾಲೆ ನಡೆಯಲಿದೆ. ಈ ಹೊತ್ತಿನಲ್ಲಿ ಬಿಗ್​ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಶೋನಲ್ಲಿ ಕಮಾಲ್ ಮಾಡಿರುವ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ

ಸ್ಯಾಂಡಲ್​ವುಡ್​ನಲ್ಲಿ ತನ್ನ ಟ್ಯಾಲೆಂಟ್​ನಿಂದ ಗುರುತಿಸಿಕೊಂಡಿರುವ ಲೋಕೇಶ್ ಈ ಮೊದಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಕಾಲಿಗೆ ಗಾಯವಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು. ಇದೀಗ 38 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ಮತ್ತೆ ದೊಡ್ಮನೆಗೆ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಆದರೆ, ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲ. ಬದಲಾಗಿ ಅತಿಥಿಯಾಗಿ ಹೋಗಿದ್ದಾರೆ. ಕಾರ್ಯಕ್ರಮದ ಕೊನೆಯ ಹಂತದಲ್ಲಿರುವಾಗ ಅತಿಥಿಯಾಗಿ ಮನೆ ಮಂದಿಗೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ:ಕನ್ನಡದ ಬಿಗ್ ಬಾಸ್ ಒಟಿಟಿ ಶೋ.. ವಿನ್ನರ್ ಯಾರಾಗ್ತಾರೆ, ಮಾಜಿ ಸ್ಪರ್ಧಿಗಳು ಹೇಳೋದೇನು?

ಇನ್ನು ಬಿಗ್ ಬಾಸ್ ಮನೆಗೆ ಲೋಕೇಶ್ ಅವರ ಎಂಟ್ರಿ ಮನೆ ಮಂದಿಗೆ ಖುಷಿ ಕೊಟ್ಟಿದೆ. ಮತ್ತೆ ಮನೆಯವರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ. ಇನ್ನು ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಗೆಲುವಿನ ಪಟ್ಟ ಯಾರ ಪಾಲಾಗಲಿದೆ ಎಂಬುದು ಗೊತ್ತಾಗಲಿದೆ.

ABOUT THE AUTHOR

...view details