2023ರ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ಸಿನಿಮಾ ತಾರೆಯರು ರಾಜಕೀಯಕ್ಕೆ ಪ್ರವೇಶಿಸಲು ಉತ್ಸಾಹ ತೋರುತ್ತಿದ್ದಾರೆ. ಅದರಂತೆ ಇದೀಗ ಮತ್ತೊಬ್ಬ ನಟ ಕೂಡ ಪಾಲಿಟಿಕ್ಸ್ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದರಲ್ಲೊಂದು ಅಚ್ಚರಿಯ ಸಂಗತಿಯಂದ್ರೆ, ಈ ನಟ ಹಾಲಿ ಶಾಸಕ ಮುನಿರತ್ನ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರಂತೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಸಿನಿಮಾ ನಟ ಸ್ಪರ್ಧೆ ಮಾಡಲು ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.
ಹಾಗಿದ್ದರೆ ಈ ಸ್ಟಾರ್ ಎಂಟ್ರಿಯಿಂದ ರಾಜರಾಜೇಶ್ವರಿ ನಗರದಲ್ಲಿ ಓಟ್ ಡಿವೈಡ್ ಆಗ್ಬಹುದಾ?, ನಟನ ರಾಜಕೀಯ ಎಂಟ್ರಿಯಿಂದ ಯಾವ ಪಕ್ಷಕ್ಕೆ ಲಾಭ, ಯಾವುದಕ್ಕೆ ನಷ್ಟ? ಈ ಸ್ಟಾರ್ ಹಿಂದೆ ರಾಜಕೀಯ ದಿಗ್ಗಜರ ದಂಡೇ ಇದೆ ಎಂಬ ಚರ್ಚೆಗಳು ಸ್ಯಾಂಡಲ್ವುಡ್ನಲ್ಲಿ ನಡೆಯುತ್ತಿವೆ. ಹೌದು, ಈ ಸ್ಟಾರ್ ನಟ ಬೇರೆ ಯಾರೂ ಅಲ್ಲ, ಚೇತನ್ ಚಂದ್ರ. ಬರೋಬ್ಬರಿ 15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿರುವ ಚೇತನ್, ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹುಚ್ಚುಡುಗ್ರು, ಸಂಯುಕ್ತ 2, ಪ್ಲಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇಯಾದ ಐಡೆಂಟಿಟಿ ಹೊಂದಿದ್ದಾರೆ. ಸದ್ಯ ಚೇತನ್ ಚಂದ್ರ ಅಭಿನಯದ ಇತ್ತೀಚಿನ ಚಿತ್ರ 'ಪ್ರಭುತ್ವ' ಇದೀಗ ಬಿಡುಗಡೆಗೂ ಸಜ್ಜಾಗಿದೆ.
ಇಂದಿನ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡೋ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಚೇತನ್ ಚಂದ್ರ ಕ್ರಾಂತಿಕಾರಿ ಯುವಕನಾಗಿ ಕಾಣಿಸಿಕೊಂಡಿದ್ದು, ವ್ಯವಸ್ಥೆ ಮತ್ತು ಮತದಾನದ ಬಗ್ಗೆ ಹೇಳಿರುವ ಡೈಲಾಗ್ಸ್ಗಳು ಹೈಲೈಟ್ ಆಗಿವೆ. ಅಲ್ಲದೇ ಈ ಸಿನಿಮಾದಿಂದಾಗಿ ಪ್ರೇರಣೆಗೊಂಡು ಚೇತನ್ ಚಂದ್ರ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.
ಇದನ್ನೂ ಓದಿ:"ದಸರಾ" ಚಿತ್ರತಂಡಕ್ಕೆ ಚಿನ್ನದ ನಾಣ್ಯ ಗಿಫ್ಟ್ ನೀಡಿದ ನಟಿ ಕೀರ್ತಿ ಸುರೇಶ್! ಯಾಕೆ ಗೊತ್ತಾ?