ಕರ್ನಾಟಕ

karnataka

ETV Bharat / entertainment

'chef ಚಿದಂಬರ' ಚಿತ್ರೀಕರಣ ಮುಕ್ತಾಯ... ಮೇಕಿಂಗ್​ ವಿಡಿಯೋ ನೋಡಿ​ - Chef Chidambara making video

ಅನಿರುದ್ಧ್ ಜತ್ಕರ್ ಅಭಿನಯದ 'chef ಚಿದಂಬರ' ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಮೇಕಿಂಗ್​ ವಿಡಿಯೋ ಅನಾವರಣಗೊಳಿಸಿದೆ.

Chef Chidambara
'chef ಚಿದಂಬರ'

By ETV Bharat Karnataka Team

Published : Oct 11, 2023, 2:31 PM IST

ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಯಾಂಡಲ್​ವುಡ್​​ ನಟ ಅನಿರುದ್ಧ್ ಜತ್ಕರ್. ಇವರು ನಾಯಕರಾಗಿ ನಟಿಸಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ 'chef ಚಿದಂಬರ'. ರಾಘು ಸಿನಿಮಾ ಖ್ಯಾತಿಯ ಎಂ. ಆನಂದರಾಜ್ ನಿರ್ದೇಶನದ ಶೆಫ್​​ ಚಿದಂಬರ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಶೂಟಿಂಗ್​​ ಅನುಭವವನ್ನು ಚಿತ್ರತಂಡ ಹಂಚಿಕೊಂಡಿದ್ದು ಹೀಗೆ.

'chef ಚಿದಂಬರ' ಚಿತ್ರತಂಡ

ನಿರ್ದೇಶಕ ಎಂ. ಆನಂದರಾಜ್ ಮಾತನಾಡಿ, ನಮ್ಮ ಚಿತ್ರದ ಚಿತ್ರೀಕರಣ ಆಗಸ್ಟ್ 10 ರಂದು ಆರಂಭವಾಗಿತ್ತು. ಅಕ್ಟೋಬರ್ 10ರಂದು ಮುಕ್ತಾಯವಾಗಿದೆ. ಒಟ್ಟು 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ಸಿನಿಮಾ. ಅನಿರುದ್ಧ್ ಜತ್ಕರ್ ಅವರು ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈವರೆಗೆ ನಿರ್ವಹಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಉಳಿದಂತೆ ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಾಹಂತೇಶ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

'chef ಚಿದಂಬರ' ಚಿತ್ರೀಕರಣ ಮುಕ್ತಾಯ

ನಟ ಅನಿರುದ್ಧ್ ಜತ್ಕರ್ ಮಾತನಾಡಿ, ನಾನು ಎಂದಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ತಿಳಿಸಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಸಿನಿ ಪ್ರಿಯರಿಗೆ ನಮ್ಮ ಚಿತ್ರ ಇಷ್ಟ ಆಗಲಿದೆ ಎಂದು ಮಾಹಿತಿ ಕೊಟ್ಟರು.

ಇದನ್ನೂ ಓದಿ:ಒಂದು ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಸಿನಿಮಾ: ಟೀಸರ್​ ರಿಲೀಸ್

ಅನಿರುದ್ಧ್ ಜತ್ಕರ್​ ಜೋಡಿಯಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ಜೋಡಿಯಾಗಿದ್ದಾರೆ‌.‌ ನಿಧಿ ಸುಬ್ಬಯ್ಯ ಮಾತನಾಡಿ, ನಾನು ಈವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದೇನೆ. ನನ್ನ ಈ ಪಾತ್ರ ಎಲ್ಲರಿಗೂ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಮತ್ತೋರ್ವ ನಟಿ ರೆಚೆಲ್ ಡೇವಿಡ್ ಮಾತನಾಡಿ, ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಕಥೆ ಎರಡೂ ಚೆನ್ನಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:'ಯುವ ಪೀಳಿಗೆಯನ್ನು ಪ್ರೋತ್ಸಾಹಿಸಲು ಬಿಗ್ ಬಾಸ್​ಗೆ ಹೋಗಿದ್ದೆ': ಶಾಸಕ‌ ಪ್ರದೀಪ್ ಈಶ್ವರ್

ನಿರ್ದೇಶಕರೇ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ "chef ಚಿದಂಬರ" ಚಿತ್ರಕ್ಕಿದೆ. ಸೌಂಡ್ ಇಂಜಿನಿಯರ್ ಬಿ.ಆರ್ ನವೀನ್ ಕುಮಾರ್ ಕೂಡ ಈ ಚಿತ್ರದಲ್ಲಿ ಕೆಲಸ‌ ಮಾಡಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ. ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಿದ್ದು, ಶೀಘ್ರದಲ್ಲೇ ಟ್ರೇಲರ್​ ಅನಾವರಣಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

ABOUT THE AUTHOR

...view details