ಲಾಸ್ ಏಂಜಲೀಸ್( ಅಮೆರಿಕ): ಮಾರ್ಷಲ್ ಆರ್ಟ್ ದಂತಕಥೆ, ನಟ ಬ್ರೂಸ್ ಲೀ ಅವರು ಹೆಚ್ಚು ನೀರು ಕುಡಿದು ಸಾವನ್ನಪ್ಪಿರಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಹಾಂಕಾಂಗ್‌ನಲ್ಲಿ 1973ರ ಬೇಸಿಗೆಯಲ್ಲಿ ತನ್ನ 32ನೇ ವಯಸ್ಸಿನಲ್ಲಿ ಬ್ರೂಸ್ ಲೀ ಸಾವನ್ನಪ್ಪಿದ್ದು, ಸುಮಾರು 50 ವರ್ಷಗಳ ನಂತರ ವೈದ್ಯರು ಈ ಬಗ್ಗೆ ಮಾತನಾಡಿದ್ದಾರೆ.
ನೋವು ನಿವಾರಕವನ್ನು ತೆಗೆದುಕೊಂಡ ಕಾರಣ ಮೆದುಳಿನ ಊತ ಆಗಿ ಬ್ರೂಸ್ ಲೀ ಸಾವನ್ನಪ್ಪಿದ್ದಾರೆ ಎಂದು ಅಂದಿನ ಶವಪರೀಕ್ಷೆಯ ವರದಿ ತಿಳಿಸಿತ್ತು. ಸಂಶೋಧಕರು ಈಗ ಪುರಾವೆಗಳನ್ನು ಪರಿಶೀಲಿಸಿದ್ದಾರೆ ಮತ್ತು ಹೈಪೋನಾಟ್ರೀಮಿಯಾದಿಂದ (hyponatremia) ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರಪಿಂಡದ ಅಸಮರ್ಥತೆಯು ಅವರ ಸಾವಿಗೆ ಕಾರಣ ಇರಬಹುದು ಎಂದು ತಜ್ಞರ ತಂಡವೊಂದು ಹೇಳಿದೆ.
ಇದನ್ನೂ ಓದಿ:ಶಾರುಖ್ ಖಾನ್ ನಿವಾಸ 'ಮನ್ನತ್' ಗೇಟ್ಗೆ ವಜ್ರದ ಹರಳುಗಳ ಅಲಂಕಾರ!
ಜರ್ನಲ್‌ನಲ್ಲಿ ಒಂದರಲ್ಲಿ ಪ್ರಕಟವಾದ ವರದಿಯಲ್ಲಿ ತಜ್ಞರ ತಂಡ ಹೀಗೆ ಹೇಳಿದೆ - ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರಪಿಂಡದ ಅಸಮರ್ಥತೆಯು ಬ್ರೂಸ್ ಲೀ ಅವರನ್ನು ಕೊಂದಿದೆ ಎಂದು ನಾವು ಪ್ರಸ್ತಾಪಿಸುತ್ತೇವೆ. ಬ್ರೂಸ್ ಲೀ ನಿರ್ದಿಷ್ಟ ರೀತಿಯ ಮೂತ್ರಪಿಂಡದ ಸಮಸ್ಯೆಯಿಂದ ನಿಧನರಾದರು ಎಂದು ನಾವು ಊಹಿಸುತ್ತೇವೆ ಎಂದಿದ್ದಾರೆ.
ಇದು ಹೈಪೋನಾಟ್ರೀಮಿಯಾ, ಸೆರೆಬ್ರಲ್ ಎಡಿಮಾ (ಮೆದುಳಿನ ಊತ) ಮತ್ತು ಸಾವಿಗೆ ಕಾರಣವಾಗಬಹುದು. ಮೂತ್ರದ ಮೂಲಕ ನೀರಿನ ವಿಸರ್ಜನೆಯೊಂದಿಗೆ ಹೆಚ್ಚುವರಿ ನೀರಿನ ಸೇವನೆಯು ಹೊಂದಿಕೆಯಾಗದಿದ್ದರೆ ಗಂಟೆಗಳಲ್ಲಿ ಸಾವು ಸಂಭವಿಸಬಹುದು, ಇದು ಬ್ರೂಸ್ ಲೀ ಅವರ ನಿಧನಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಬ್ರೂಸ್ ಹೈಪೋನಾಟ್ರೀಮಿಯಾಕ್ಕೆ ಸಂಬಂಧಿಸಿದಂತೆ ಅನೇಕ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. ಅಂದರೆ ಹೆಚ್ಚಿನ ಪ್ರಮಾಣದ ದ್ರವ ಪದಾರ್ಥ ಸೇವಿಸುವುದು, ಬಾಯಾರಿಕೆ ಹೆಚ್ಚಿಸುವ ಗಾಂಜಾವನ್ನು ಬಳಸುವುದು ಸೇರಿದಂತೆ ಮುಂದಾದವು ಎಂದು ತಂಡ ತಿಳಿಸಿದೆ.