ಹೈದರಾಬಾದ್:ಮೂರು ಪ್ರಮುಖ ಸಿನಿಮಾಗಳು ಸೆಪ್ಟೆಂಬರ್ 28 ರಂದು ಬೆಳ್ಳಿತೆರೆಗೆ ಅಪ್ಪಳಿಸಿದ್ದವು. ಗಲ್ಲಾಪೆಟ್ಟಿಗೆಯಲ್ಲಿ ಮುಖಾಮುಖಿ ಸ್ಪರ್ಧೆಯನ್ನು ಒಡ್ಡಿವೆ. ಕಂಗನಾ ರಣಾವತ್ ಅಭಿನಯದ ಚಂದ್ರಮುಖಿ 2 ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಜೊತೆಗೆ ಹಾಸ್ಯ ಚಲನಚಿತ್ರ ಫುಕ್ರೆ- 3 ಒಂದೇ ದಿನ ಥಿಯೇಟರ್‌ಗಳಿಗೆ ಪ್ರವೇಶಿಸಿದ್ದವು. ಬಾಕ್ಸ್ ಆಫೀಸ್‌ನಲ್ಲಿ ಮೂರು ಚಿತ್ರಗಳ ನಡುವೆ ಪೈಪೋಟಿ ಉಂಟಾಗಿತ್ತು. ಫುಕ್ರೆ- 3 ಚಿತ್ರವು ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನಿಂತಿದ್ದು, ಐದನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಕಮಾಲ್ ಮುಂದುವರೆಸಿದೆ.
7.47 ಕೋಟಿ ರೂ. ಬಾಚಿಕೊಂಡ ದಿ ವ್ಯಾಕ್ಸಿನ್ ವಾರ್:ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ''ಆರಂಭಿಕ ಅಂದಾಜಿನ ಪ್ರಕಾರ, ಕಡಿಮೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆರೆಕಂಡ ವ್ಯಾಕ್ಸಿನ್ ವಾರ್ ಚಿತ್ರ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಐದನೇ ದಿನ- ರೂ 1.73 ಕೋಟಿ ಗಳಿಕೆ ಮಾಡಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರವು ಈಗ ಅಂದಾಜು ಐದು ದಿನಗಳಲ್ಲಿ ಒಟ್ಟು 7.47 ಕೋಟಿ ರೂ. ಗಳಿಸಿದೆ. ಸುಮಾರು 10 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ತಯಾರಾಗಿದೆ ಎಂದು ವರದಿಯಾಗಿದೆ.
19.83 ಕೋಟಿ ರೂ. ಗಳಿಸಿದ ಚಂದ್ರಮುಖಿ 2:ಮತ್ತೊಂದೆಡೆ, ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಂದ್ರಮುಖಿ 2 ಚಿತ್ರ ತನ್ನ ನಾಲ್ಕು ದಿನಗಳ ಕಲೆಕ್ಷನ್‌ನಲ್ಲಿ ಯೋಗ್ಯವಾದ ಮೊತ್ತವನ್ನು ಕಲೆ ಹಾಕಿದೆ. ಸ್ಯಾಕ್ನಿಲ್ಕ್ ವರದಿ ಮಾಡಿದಂತೆ, ಆರಂಭಿಕ ಅಂದಾಜಿನ ಪ್ರಕಾರ, ಹಾರರ್-ಕಾಮಿಡಿ ಚಿತ್ರ ಐದನೇ ದಿನ- 4.92 ಕೋಟಿ ರೂ. ಗಳಿಸಿರುವ ಸಾಧ್ಯತೆಯಿದೆ. ಈವರೆಗೆ ಒಟ್ಟು 19.83 ಕೋಟಿ ರೂ. ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ.
ಫುಕ್ರೆ- 3 ಚಿತ್ರದ ಒಟ್ಟು ಕಲೆಕ್ಷನ್ 61.06 ಕೋಟಿ ರೂ.:ಮೇಲೆ ತಿಳಿಸಿದ ಚಲನಚಿತ್ರಗಳಿಗೆ ಹೋಲಿಸಿದರೆ, ಫುಕ್ರೆ 3 ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ನಂಬಲಾಗದಷ್ಟು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಸ್ಯಾಕ್ನಿಲ್ಕ್‌ನ ಆರಂಭಿಕ ಅಂದಾಜಿನ ಪ್ರಕಾರ, ಕಾಮಿಡಿ ಚಿತ್ರವು 5ನೇ ದಿನ- 16.41 ಕೋಟಿ ರೂ. ನಿವ್ವಳ ಲಾಭ ಗಳಿಸುವ ಸಾಧ್ಯತೆಯಿದೆ. ಇದು ಇಲ್ಲಿಯವರೆಗಿನ ಅತ್ಯಧಿಕ ಗಳಿಕೆಯಾಗಿದೆ. ಚಿತ್ರವು ಈವರೆಗೆ ಒಟ್ಟು ಕಲೆಕ್ಷನ್ 61.06 ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ:ತೇಜಸ್ ಟೀಸರ್ ರಿಲೀಸ್: 'ಭಾರತದ ತಂಟೆಗೆ ಬಂದರೆ ಬಿಡುವ ಮಾತೇ ಇಲ್ಲ' ಅಂತಿದ್ದಾರೆ ಕಂಗನಾ ರಣಾವತ್