ಕರ್ನಾಟಕ

karnataka

ETV Bharat / entertainment

ಶರ್ಟ್‌ಲೆಸ್ ಫೋಟೋ ಹಂಚಿಕೊಂಡ ಬಾಲಿವುಡ್​​ ಹ್ಯಾಂಡ್ಸಮ್​ ಹಂಕ್​​ ಹೃತಿಕ್​ ರೋಷನ್.. ಸಿಕ್ಸ್ ಪ್ಯಾಕ್​​ಗೆ ಮನಸೋತ ಫ್ಯಾನ್ಸ್

Hrithik Roshan shirtless photo: ಇನ್​ಸ್ಟಾಗ್ರಾಮ್​ನಲ್ಲಿ ನಟ ಹೃತಿಕ್​ ರೋಷನ್​ ಶರ್ಟ್​ಲೆಸ್​ ಮೋನೊಕ್ರೋಮ್​ ಫೋಟೋ ಶೇರ್ ಮಾಡಿದ್ದಾರೆ.

By ETV Bharat Karnataka Team

Published : Sep 3, 2023, 5:23 PM IST

Hrithik Roshan
ಹೃತಿಕ್​ ರೋಷನ್​

ಬಾಲಿವುಡ್​​ನ ಹ್ಯಾಂಡ್ಸಮ್​ ಹಂಕ್​​ ಹೃತಿಕ್​ ರೋಷನ್​​. ವಯಸ್ಸು 50ರ ಸಮೀಪದಲ್ಲಿದ್ದರೂ ಕಣ್ಣಲ್ಲಿ ಯುವಕನ ನೋಟ. ಕಟ್ಟುಮಸ್ತಾದ ಮೈಕಟ್ಟು ಹೊಂದಿರುವ ಈ ನಟ ಅದೆಷ್ಟೋ ಯುವಕರಿಗೆ ಸ್ಫೂರ್ತಿ. ಫಿಟ್ನೆಸ್​ ಐಕಾನ್​​ ಹೃತಿಕ್​ ರೋಷನ್ ಅವರಂತೆ ಸದೃಢ ಮೈಕಟ್ಟು ಹೊಂದಲು ಅದೆಷ್ಟೋ ಯುವಕರು ಪ್ರಯತ್ನಿಸುತ್ತಾರೆ.

ಹೃತಿಕ್​ ರೋಷನ್ ಫೋಟೋ ಶೇರ್: ಅಭಿಮಾನಿಗಳಿಗಾಗಿ ಬಾಲಿವುಡ್​​ ಡ್ಯಾನ್ಸಿಂಗ್​ ಸ್ಟಾರ್ ಹೃತಿಕ್​ ರೋಷನ್ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಟ ಹಂಚಿಕೊಂಡಿರುವ ಹೊಸ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಹೌದು, ಮೊಹೆಂಜೋದಾರೋ ಸಿನಿಮಾ ನಟ ತಮ್ಮ ಸಿಕ್ಸ್ ಪ್ಯಾಕ್​ ಪ್ರದರ್ಶಿಸುವ ಶರ್ಟ್​ಲೆಸ್​ ಬ್ಲ್ಯಾಕ್​ ಆ್ಯಂಡ್​ ವೈಟ್​​ ಫೋಟೋ ಶೇರ್ ಮಾಡಿದ್ದಾರೆ. ತಾವು ಹಂಚಿಕೊಂಡಿದ ಪೊಸ್ಟ್​ಗೆ 'ಫಿನಿಶ್​ ಲೈನ್​ ನೋಡಲು ಸಾಧ್ಯವಿಲ್ಲ' (Can’t see the finish line) ಎಂದು ಬರೆದುಕೊಂಡಿದ್ದಾರೆ.

ಗೆಳತಿ ಸಬಾ ಅಜಾದ್​ ಪ್ರತಿಕ್ರಿಯೆ ಏನು? ಬಹುಬೇಡಿಕೆಯ ನಟ ಹಂಚಿಕೊಂಡ ಪೋಸ್ಟ್ ಸಾಕಷ್ಟು ಮೆಚ್ಚುಗೆ ಪಡೆದಿದೆ. ಅಭಿಮಾನಿಗಳು ಫೈಯರ್​ ಮತ್ತು ರೆಡ್ ಹಾರ್ಟ್ ಎಮೋಜಿ ಮೂಲಕ ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಗೆಳತಿ ಸಬಾ ಅಜಾದ್​ ಕೂಡ ನಟನ ಫೋಟೋಗೆ ಅಭಿಮಾನಿಗಳಂತೆ ಫೈಯರ್​ ಆ್ಯಂಡ್​ ಹಾರ್ಟ್ ಎಮೋಜಿ ಹಾಕಿದ್ದಾರೆ. ಉಳಿದಂತೆ ಚಿತ್ರರಂಗದ ಹಲವರು ಈ ಫೋಟೋವನ್ನು ಇಷ್ಟಪಟ್ಟಿದ್ದಾರೆ.

ಹೃತಿಕ್​ ರೋಷನ್ ಫೋಟೋ ವೈರಲ್​:ಇನ್ನು ಸೋಷಿಯಲ್​ ಮೀಡಿಯಾದಲ್ಲಿ ನಟನ ಫೋಟೋ ವೈರಲ್​ ಆಗಿದೆ. ಅಭಿಮಾನಿಗಳು ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಹಾಟ್​ ಎಂಬ ಕಾಮೆಂಟ್​ ಹೆಚ್ಚಾಗಿದೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ ಕಹೋ ನಾ ಪ್ಯಾರ್​ ಹೈ 2 ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಬೆಸ್ಟ್ ಬಾಡಿ ಇನ್​ ಬಾಲಿವುಡ್​ ಎಂದು ನೆಟ್ಟಿಗರೋರ್ವರು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿ ಫೈಟರ್​ ರೆಡಿ ಎಂದು ಬರೆದಿದ್ದಾರೆ.

ಇದನ್ನೂ ಓದಿ:ಶಾರುಖ್ 'ಜವಾನ್' ಭರ್ಜರಿ ಓಪನಿಂಗ್​​ ನಿರೀಕ್ಷೆ; ಫಸ್ಟ್‌ ಡೇ ಶೋಗೆ ಮಾರಾಟವಾದ ಟಿಕೆಟ್​​ಗಳೆಷ್ಟು?!

ನಟ ಹೃತಿಕ್​ ರೋಷನ್​ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'​. ದೀಪಿಕಾ ಪಡುಕೋಣೆ ಮತ್ತು ಅನಿಲ್​ ಕಪೂರ್​ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಫೈಟರ್​ ಸಿನಿಮಾದ ಮೋಷನ್​ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಇಂಡಿಯನ್ ಏರ್ ಫೋರ್ಸ್​ ಪೈಲಟ್​ ಲುಕ್​​ ಕೊಟ್ಟಿದ್ದು, ಪೋಸ್ಟರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:Box office battle: ಪಠಾಣ್​ ದಾಖಲೆ ಮುರಿಯುವತ್ತ ಗದರ್​ 2: ಓಎಂಜಿ 2 ಸಂಪಾದನೆ ಹೇಗಿದೆ?

ಮಂದಿನ ಗಣರಾಜ್ಯೋತ್ಸವದ ಮುನ್ನಾದಿನದಂದು ಫೈಟರ್​ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಹೌದು, ಬಿಗ್​ ಸ್ಟಾರ್ ಕಾಸ್ಟ್ ಹೊಂದಿರುವ ಬಹುನಿರೀಕ್ಷಿತ ಸಿನಿಮಾ 2024 ರ ಜನವರಿ 25 ರಂದು ಅದ್ಧೂರಿಯಾಗಿ ತೆರೆಕಾಣಲಿದೆ. ಇದಲ್ಲದೇ, ಹೃತಿಕ್​ ಬಳಿ ವಾರ್​ 2 ಸಿನಿಮಾ ಕೂಡ ಇದೆ.​ ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಮತ್ತು ಆರ್​ಆರ್​ಆರ್​ ಖ್ಯಾತಿಯ ಜೂನಿಯರ್​ ಎನ್​ಟಿಆರ್​ ಕೂಡ ಇದ್ದಾರೆ.

ABOUT THE AUTHOR

...view details