ಕರ್ನಾಟಕ

karnataka

ETV Bharat / entertainment

ಡೇವಿಡ್ ಬೆಕ್‌ಹ್ಯಾಮ್​ಗೆ ಅದ್ಧೂರಿ ಸ್ವಾಗತ: ಫುಟ್‌ಬಾಲ್ ಐಕಾನ್ ಜೊತೆ ಬಾಲಿವುಡ್​ ತಾರೆಯರು - Sonam Kapoor

Sonam Kapoor's Party:​ ನಟಿ ಸೋನಂ ಕಪೂರ್ ಅವರ ನಿವಾಸದಲ್ಲಿ ಮಾಜಿ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಅವರಿಗಾಗಿ ಅದ್ಧೂರಿ ಪಾರ್ಟಿ ಆಯೋಜಿಸಲಾಗಿತ್ತು. ಸೆಲೆಬ್ರೇಷನ್​ಗೆ ಬಾಲಿವುಡ್ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು.

Bollywood celebrities with David Beckham
ಡೇವಿಡ್ ಬೆಕ್‌ಹ್ಯಾಮ್ ಜೊತೆ ಬಾಲಿವುಡ್​ ತಾರೆಯರು

By ETV Bharat Karnataka Team

Published : Nov 16, 2023, 6:51 PM IST

Updated : Nov 16, 2023, 7:42 PM IST

ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹುಜಾ ದಂಪತಿ ತಮ್ಮ ಮುಂಬೈ ನಿವಾಸದಲ್ಲಿ ಫುಟ್‌ಬಾಲ್ ಐಕಾನ್ ಡೇವಿಡ್ ಬೆಕ್‌ಹ್ಯಾಮ್ ಅವರಿಗೆ ಅದ್ಧೂರಿ ಸ್ವಾಗತ ಕೂಟ ಆಯೋಜಿಸಿದ್ದರು. ಬುಧವಾರ ರಾತ್ರಿ ನಡೆದ ಸಂಭ್ರಮಾಚರಣೆಯಲ್ಲಿ ಬಾಲಿವುಡ್​ ತಾರೆಯರಾದ ಅನಿಲ್ ಕಪೂರ್, ಸಂಜಯ್ ಕಪೂರ್, ಶಾಹಿದ್ ಕಪೂರ್, ಮೀರಾ ರಜ್​​ಪೂತ್, ಶಿಬಾನಿ ದಾಂಡೇಕರ್, ಫರ್ಹಾನ್ ಅಖ್ತರ್, ಕರೀಷ್ಮಾ ಕಪೂರ್, ಅರ್ಜುನ್ ಕಪೂರ್, ಮಲೈಕಾ ಅರೋರಾ ಸೇರಿದಂತೆ ಹಲವು ಖ್ಯಾತನಾಮರು ಭಾಗಿಯಾಗಿದ್ದರು. ವೆಲ್ಕಮ್ ಪಾರ್ಟಿಯ ಹಲವು ಫೋಟೋ - ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ಪ್ರಸ್ತುತ UNICEF ಗುಡ್‌ವಿಲ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಸಿದ್ಧ ಮಾಜಿ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ನಿನ್ನೆ ಸಂಜೆ ಬಾಲಿವುಡ್​ ತಾರೆಯರೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ. ಪಾರ್ಟಿಯ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಫೋಟೋವೊಂದರಲ್ಲಿ ನಟಿ ಸೋನಮ್ ಕಪೂರ್ ಒಂದೆಡೆ ಕುಳಿತಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಡೆಕೋರೇಶನ್ ಸೇರಿದಂತೆ ಇತರ ಅತಿಥಿಗಳು ಕಂಡು ಬಂದಿದ್ದಾರೆ. ತೋರಿಸುತ್ತದೆ. ಬ್ರೈಟ್ ಕಲರ್ ಸ್ಯಾರಿಯಲ್ಲಿ ನಟಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿಫುಲ್ ನೆಕ್ಲೇಸ್​, ಕಿವಿಯೋಲೆಗಳನ್ನು ಧರಿಸಿದ್ದರು. ಬನ್​ ಹೇರ್​​ಸ್ಟೈಲ್​ನ ಮೆರುಗನ್ನು ಕೆಂಗುಲಾಬಿಗಳು ಹೆಚ್ಚಿಸಿದ್ದವು.

ಆನಂದ್ ಅಹುಜಾ ಅವರು ಪತ್ನಿ ಸೋನಮ್ ಕಪೂರ್ ಹಾಗೂ ಡೇವಿಡ್ ಬೆಕ್‌ಹ್ಯಾಮ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟ ಅರ್ಜುನ್ ಕಪೂರ್ ಕೂಡ ಗೆಳತಿ - ನಟಿ ಮಲೈಕಾ ಅರೋರಾ ಜೊತೆ ಪಾರ್ಟಿಗೆ ಆಗಮಿಸಿದ್ದರು. ತಮ್ಮ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಬ್ಲ್ಯಾಕ್​ ಡ್ರೆಸ್​ನಲ್ಲಿ ಅರ್ಜುನ್ ಕಪೂರ್ ಹ್ಯಾಡ್ಸಂ ಲುಕ್​ ಕೊಟ್ರೆ, ಮಲೈಕಾ ಓವರ್​ ಸೈಜ್​​ ಶರ್ಟ್, ಬ್ಲ್ಯಾಕ್​​ ಸ್ಕರ್ಟ್ ಧರಿಸಿ ಸ್ಟೈಲಿಶ್​ ಲುಕ್ ಕೊಟ್ರು.

ಇದನ್ನೂ ಓದಿ:'ಈ ದೃಶ್ಯ ನಮ್ಮ ಚಿತ್ರದ ಒಂದು ಭಾಗ': ಅಭಿಮಾನಿಗೆ ಹೊಡೆದ​ ವಿಡಿಯೋಗೆ ಪ್ರತಿಕ್ರಿಯಿಸಿದ ನಾನಾ ಪಾಟೇಕರ್

ಮಲೈಕಾ ಮತ್ತು ಬೆಕ್‌ಹ್ಯಾಮ್ ಜೊತೆಗಿನ ಫೋಟೋ ಹಂಚಿಕೊಂಡ ನಟ ಅರ್ಜುನ್ ಕಪೂರ್, ಬಹಳ ವರ್ಷಗಳಿಂದ ನನ್ನೀ ಮೆಚ್ಚಿನ ವ್ಯಕ್ತಿಯನ್ನು ಭೇಟಿಯಾಗಲು ಬಯಸಿದ್ದೆ. ಡೇವಿಡ್‌ ಬೆಕ್‌ಹ್ಯಾಮ್ ಅವರನ್ನು ಭೇಟಿಯಾಗಿದ್ದು ಕೃತಜ್ಞನಾಗಿದ್ದೇನೆ. ನನ್ನ ಬಾಲ್ಯದ ಕನಸನ್ನು ನನಸು ಮಾಡಿದ್ದಕ್ಕಾಗಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಅವರಿಗೆ ಧನ್ಯವಾದಗಳು ಎಂಬರ್ಥದಲ್ಲಿ ಹೃದಯಸ್ಪರ್ಶಿ ಬರಹಗಳನ್ನು ಬರೆದುಕೊಂಡಿದ್ದಾರೆ. ಕರೀಷ್ಮಾ ಕಪೂರ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೆಕ್‌ಹ್ಯಾಮ್‌ ಅವರೊಂದಿಗಿನ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ:ಸಾರಾ ಅಲಿ ಖಾನ್ ತಾಯಿ ಪಾತ್ರ ನಿರ್ವಹಿಸುತ್ತಾರಾ ಕರೀನಾ! ಆಲಿಯಾಗೆ ದೀಪಿಕಾ ಸ್ಪರ್ಧಿಯೇ?

ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮತ್ತೊಂದು ಫೋಟೋದಲ್ಲಿ ಸೋನಮ್ ಕಪೂರ್​ ತಮ್ಮ ಸಂಬಂಧಿಗಳಾದ ಸಂಜಯ್ ಕಪೂರ್, ಮಹೀಪ್ ಕಪೂರ್, ಮೋಹಿತ್ ಮರ್ವಾ ಮತ್ತು ಅಂತರಾ ಮಾರ್ವಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ನಿನ್ನೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನೂ ವೀಕ್ಷಿಸಿದ್ದಾರೆ.

Last Updated : Nov 16, 2023, 7:42 PM IST

ABOUT THE AUTHOR

...view details