ಕರ್ನಾಟಕ

karnataka

ETV Bharat / entertainment

ಅರಿಜಿತ್​​ ಸಿಂಗ್ ಕೈ ಹಿಡಿದೆಳೆದ ಮಹಿಳಾ ಅಭಿಮಾನಿ: ಸ್ಟಾರ್​ ಸಿಂಗರ್‌ಗೆ ಗಾಯ - Arijit Singh music show

ಸೋಮವಾರ ನಡೆದ ಮ್ಯೂಸಿಕ್​ ಶೋನಲ್ಲಿ ಗಾಯಕ​ ಅರಿಜಿತ್​​ ಸಿಂಗ್ ಗಾಯಗೊಂಡಿದ್ದಾರೆ.

Arijit Singh injured
ಗಾಯಗೊಂಡ ಅರಿಜಿತ್​​ ಸಿಂಗ್

By

Published : May 9, 2023, 2:10 PM IST

ಬಾಲಿವುಡ್ ಸ್ಟಾರ್ ಸಿಂಗರ್​ ಅರಿಜಿತ್​​ ಸಿಂಗ್ (Arijit Singh) ಇತ್ತೀಚೆಗೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದರ ಅಂಗವಾಗಿ ಅಭಿಮಾನಿಗಳಿಗಾಗಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಲಾಯಿತು. ಸಾಮಾನ್ಯವಾಗಿ ಸಂಗೀತ ಕಾರ್ಯಕ್ರಮಗಳಲ್ಲಿ ನಡುನಡುವೆ ಅವರು ತಮ್ಮ ಅಭಿಮಾನಿಗಳಿಂದಲೂ ಹಾಡಿಸುತ್ತಾರೆ. ಅದರಂತೆ ಸೋಮವಾರ ನಡೆದ ಮ್ಯೂಸಿಕ್​ ಶೋನಲ್ಲಿ ವೇದಿಕೆ ಮೇಲಿಂದಲೇ ಅಭಿಮಾನಿಗಳಿಗೆ ಶುಭಾಶಯ ಕೋರಿದರು.

ಸಂಗೀತ ಮಾಂತ್ರಿಕ ಅರಿಜಿತ್​​ ಸಿಂಗ್ ಅವರಿಗೆ ಡೊಡ್ಡ ಫ್ಯಾನ್​ ಫಾಲೋವಿಂಗ್​​​ ಇದೆ. ತಮ್ಮ ಕಂಠಸಿರಿಯಿಂದಲೇ ಸಿಕ್ಕಾಪಟ್ಟೆ ಜನಪ್ರಿಯತೆ ಜೊತೆಗೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಸಂಗೀತಕ್ಕೆ ಅಭಿಮಾನಿಗಳ ಮಂತ್ರಮುಗ್ಧಗೊಳ್ಳುತ್ತಾರೆ. ಈವರೆಗೆ ಹಲವು ಸೂಪರ್​ ಹಿಟ್​ ಹಾಡುಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ದೇಶದ ವಿವಿಧೆಡೆ ಲೈವ್​ ಮ್ಯೂಸಿಕ್​ ಶೋನ ನಡೆಸಿಕೊಡುತ್ತಾರೆ. ಇವರ ಸ್ವರ ಕೇಳಲು ಅಭಿಮಾನಿಗಳ ಸಾಗರ ಬಂದು ಸೇರುತ್ತದೆ. ಅದರಂತೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಸೋಮವಾರ ಸಂಗೀತ ಕಾರ್ಯಕ್ರಮ ನೀಡಿದ್ದರು.

ಈ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಸ್ಟಾರ್ ಸಿಂಗರ್​ ಅರಿಜಿತ್​​ ಸಿಂಗ್ ಅವರ ಕೈ ಕುಲುಕಲು ಯತ್ನಿಸಿದರು. ಅಭಿಮಾನಿ ಪ್ರೀತಿಗೆ ಗಾಯಕ ಕೂಡ ಸ್ಪಂದಿಸಿದರು. ಉತ್ಸುಕರಾದ ಅಭಿಮಾನಿ ಅರಿಜಿತ್​​ ಸಿಂಗ್ ಅವರ ಕೈಯನ್ನು ಬಿಗಿಯಾಗಿ ಹಿಡಿದಿದ್ದಾರೆ. ಅಭಿಮಾನಿಯ ಉತ್ಸಾಹಕ್ಕೆ ಗಾಯಕ ನಿಯಂತ್ರಣ ಕಳೆದುಕೊಳ್ಳಲಿದ್ದರು. ಅವರ ಕೈಗೆ ಗಾಯವಾಗಿದೆ. ಫ್ಯಾನ್ ಗಾಯಕನ ಕೈಯನ್ನು ಬಲವಾಗಿ ಎಳೆದಿದ್ದರಿಂದ ಕೈ ಉಳುಕಿದೆ ಎಂದು ವರದಿಯಾಗಿದೆ.

ಈ ವಿಚಾರವಾಗಿ ಸಿಟ್ಟಿಗೆದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂದು ಅರಿಜಿತ್​ ಸಿಂಗ್ ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋ ವೈರಲ್​ ಆಗಿದೆ. ಅದನ್ನು ಕಂಡು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಕೈ ಉಳುಕಿದ್ದಕ್ಕೆ ಕೈಗೆ ಬ್ಯಾಂಡೇಜ್ ಹಾಕಿ, ಸೂಕ್ತ ಚಿಕಿತ್ಸೆ ನೀಡಿರುವ ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಅಲ್ಲದೇ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಗಿಟಾರ್ ನುಡಿಸದಂತೆ ಗಾಯಕನಿಗೆ ತಿಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಮೆಚ್ಚಿನ ಗಾಯಕ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳಿ ಸೂಪರ್ ಸ್ಟಾರ್ ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ತಿಳಿಸುತ್ತಿದ್ದಾರೆ.

ಇದನ್ನೂ ಓದಿ:ವಿಜಯ್ ದೇವರಕೊಂಡ ಬರ್ತ್​​ ಡೇ ಗಿಫ್ಟ್​​: 'ನನ್ನ ರೋಜಾ ನೀನೇ' ಹಾಡು ಅನಾವರಣ

ಅರಿಜಿತ್​​ ಸಿಂಗ್ ಅವರು ಗಡಿಗಳನ್ನು ದಾಟಿ ಬಹುಭಾಷೆಗಳ ಹಾಡುಗಳನ್ನು ಹಾಡಿದ್ದಾರೆ. ಬಾಲಿವುಡ್​ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರ ಹಾಡುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಸೂಪರ್​ ಹಿಟ್ 'ಆಶಿಕಿ 2' ಸಿನಿಮಾ ಮೂಲಕ ಹೆಚ್ಚು ಜನಪ್ರಿಯರಾದರು. ಆ ಚಿತ್ರದ ನಂತರ ಅವರು ಹಿಂದಿ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದರು.

ಇದನ್ನೂ ಓದಿ:ಕಾಂತಾರ 2 ಸಿನಿಮಾ ಸ್ಕ್ರಿಪ್ಟ್​ ಬಹುತೇಕ ರೆಡಿ; ಶೀಘ್ರದಲ್ಲೇ ಶೂಟಿಂಗ್‌ಗೆ ತಯಾರಿ

ABOUT THE AUTHOR

...view details