ಕರ್ನಾಟಕ

karnataka

ETV Bharat / entertainment

'ಭಾವನಾತ್ಮಕವಾಗಿ ಸಿದ್ಧವಾದಾಗ ನಾನು ಸಿನಿಮಾ ಮಾಡುತ್ತೇನೆ': ಅಮೀರ್ ಖಾನ್ - ಅಮೀರ್ ಖಾನ್ ಲೇಟೆಸ್ಟ್ ನ್ಯೂಸ್

ಸದ್ಯ ನಾನು ಕುಟುಂಬದೊಂದಿಗೆ ಸಮಯ ಕಳೆಯಲು ಇಚ್ಛಿಸುತ್ತೇನೆ, ಸಿನಿಮಾಗಳಿಂದ ಕೊಂಚ ಬ್ರೇಕ್​ ಪಡೆದಿರುವುದಾಗಿ ನಟ ಅಮೀರ್ ಖಾನ್ ತಿಳಿಸಿದ್ದಾರೆ.

Amir Khan next film
ಅಮೀರ್ ಖಾನ್ ಮುಂದಿನ ಸಿನಿಮಾ

By

Published : May 31, 2023, 1:42 PM IST

'ಲಾಲ್ ಸಿಂಗ್ ಚಡ್ಡಾ' (Laal Singh Chaddha) ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಸೂಪರ್‌ ಸ್ಟಾರ್ ಅಮೀರ್ ಖಾನ್ ಅವರು 'ಕ್ಯಾರಿ ಆನ್ ಜಟ್ಟಾ 3' (Carry On Jatta 3) ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಗಮನ ಸೆಳೆದರು. ಅಮೀರ್ ಖಾನ್ ಈ ಮೊದಲೇ ತಿಳಿಸಿದಂತೆ ಸಿನಿಮಾ ವೃತ್ತಿಜೀವನದಿಂದ ಕೊಂಚ ಬ್ರೇಕ್​ ಪಡೆಯುವ ಬಗ್ಗೆ ಚರ್ಚಿಸಿದರು ಮತ್ತು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವುದಾಗಿ ಈ ಕಾರ್ಯಕ್ರಮದಲ್ಲಿ ತಿಳಿಸಿದರು.

'ಭಾವನಾತ್ಮಕವಾಗಿ ಸಿದ್ಧರಾಗಬೇಕು'....:ಅಮೀರ್ ಖಾನ್ ಸದ್ಯ ತಾವು ರಜೆಯಲ್ಲಿರುವುದಾಗಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅವರು ತಮ್ಮ ಸಿನಿ ವೃತ್ತಿಜೀವನವನ್ನು ಪುನರಾರಂಭಿಸುವ ಮೊದಲು 'ಭಾವನಾತ್ಮಕವಾಗಿ ಸಿದ್ಧರಾಗಬೇಕು' ಎಂದು ಸಹ ಹೇಳಿದ್ದಾರೆ. 'ಕ್ಯಾರಿ ಆನ್ ಜಟ್ಟಾ 3' ಟ್ರೇಲರ್​ ಪ್ರೀಮಿಯರ್ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ವಿಚಾರಗಳನ್ನು ಹಂಚಿಕೊಂಡರು.

'ಸದ್ಯ ಕುಟುಂಬಕ್ಕೆ ಸಮಯ ಮೀಸಲು'...:ಅವರ ಮುಂದಿನ ಯೋಜನೆಗಳ ಕುರಿತು ಕೇಳಿದಾಗ, ಅಮೀರ್ ಅವರು ಬೆಂಬಲಿಸಲು ಬಂದಿರುವ ಪಂಜಾಬಿ ಚಿತ್ರದ (Carry On Jatta 3) ಮೇಲೆ ಗಮನ ಕೇಂದ್ರೀಕರಿಸಲು ಎಲ್ಲರಿಗೂ ಸಲಹೆ ನೀಡಿದರು. "ನೀವೆಲ್ಲರೂ ಕುತೂಹಲದಿಂದಿರಬೇಕು" ಎಂದು ಹೇಳಿದರು. "ನಾನು ನಿಮಗೆ ಶೀಘ್ರ ಉತ್ತರವನ್ನು ನೀಡಲು ಬಿಡಿ, ನನ್ನ ಮುಂದಿನ ಯೋಜನೆ ಸಂಬಂಧ ನಾನು ಇನ್ನೂ ನಿರ್ಧರಿಸಿಲ್ಲ. ಸದ್ಯ ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ. ನಾನು ಅದರ ಬಗ್ಗೆ ಉತ್ಸುಕನಾಗಿದ್ದೇನೆ. ನಾನು ಸದ್ಯ ಮಾಡಲು ಬಯಸಿದ್ದು ಅದನ್ನೇ. ಭಾವನಾತ್ಮಕವಾಗಿ ಸಿದ್ಧವಾದಾಗ ನಾನು ಸಿನಿಮಾ ಮಾಡುತ್ತೇನೆ" ಎಂದು ಉತ್ತರಿಸಿದರು.

ಅಮೀರ್ ಖಾನ್​ ಕೊನೆಯ ಬಾರಿಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಬಾಕ್ಸ್​​ ಆಫೀಸ್​ನಲ್ಲಿ ಸದ್ದು ಮಾಡಲಿಲ್ಲ. ಆದರೆ ನೆಟ್‌ಫ್ಲಿಕ್ಸ್‌ನಲ್ಲಿ ಉತ್ತಮ ವಿಮರ್ಶೆಯನ್ನು ಪಡೆಯಿತು. ಈ ಚಲನಚಿತ್ರವು ಹಾಲಿವುಡ್ ಕ್ಲಾಸಿಕ್ ಫಾರೆಸ್ಟ್ ಗಂಪ್‌ನ ಅಧಿಕೃತ ಹಿಂದಿ ರಿಮೇಕ್​. ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮತ್ತು ಮೋನಾ ಸಿಂಗ್ ನಟಿಸಿದ್ದಾರೆ. ಇನ್ನೂ ಕಾಜೋಲ್ ಮತ್ತು ರೇವತಿಯ ಸಲಾಮ್ ವೆಂಕಿ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾಗಳ ಬಳಿಕ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ, ಮುಂದಿನ ಸಿನಿಮಾದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಖಾನ್​ ಪುತ್ರಿ: ಸಾಮರಸ್ಯದ ಸಂದೇಶ ಸಾರಿದ ನಟಿ ಸಾರಾ

ಕ್ಯಾರಿ ಆನ್ ಜಟ್ಟಾ 3ರ ಪ್ರಥಮ ಪ್ರದರ್ಶನದಲ್ಲಿ, ಕಪಿಲ್ ಶರ್ಮಾ ಅವರ ನಟನೆಯನ್ನು ಅಮೀರ್ ಶ್ಲಾಘಿಸಿದರು. ಚಿತ್ರದಲ್ಲಿ ಗಿಪ್ಪಿ ಗ್ರೆವಾಲ್, ಬಿನ್ನು ದಿಲ್ಲೋನ್, ಸೋನಮ್ ಬಜ್ವಾ, ಗುರುಪ್ರೀತ್ ಘುಗ್ಗಿ, ಜಸ್ವಿಂದರ್ ಭಲ್ಲಾ ಒಳಗೊಂಡಿರುವ ತಾರಾಗಣವಿದೆ. ಜೂನ್ 29 ಚಿತ್ರಮಂದಿರಗಳಲ್ಲಿ Carry On Jatta 3 ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಮದುವೆಗೇಕೆ ಆಹ್ವಾನಿಸಲಿಲ್ಲ? ಕರಣ್​ ಜೋಹರ್ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಉತ್ತರ ಹೀಗಿತ್ತು!

ABOUT THE AUTHOR

...view details