ಪ್ರೆಗ್ನೆನ್ಸಿ ವದಂತಿಗಳ ನಡುವೆ ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ, ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಶನಿವಾರ ರಾತ್ರಿ ಡಿನ್ನರ್ಗೆಂದು ತೆರಳಿದ್ದರು. ಈ ವೇಳೆ ಅವರಿಬ್ಬರು ಹೆರಿಗೆ ಆಸ್ಪತ್ರೆಯ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನತಾಶಾ ನಿಜವಾಗಿಯೂ ತಾಯಿಯಾಗುತ್ತಿದ್ದಾರೆಯೇ? ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಈ ದಂಪತಿ ಮುಂಬೈನ ಖಾರಾ ಪ್ರದೇಶದಲ್ಲಿನ ಕ್ಲಿನಿಕ್ನಿಂದ ಹೊರಬರುತ್ತಿರುವಾಗ ಪಾಪರಾಜಿಗಳಿಗೆ ಕಾಣಿಸಿಕೊಂಡರು.
ವರುಣ್ ಮತ್ತು ನತಾಶಾ ಇಬ್ಬರು ಕಾರಿನತ್ತ ಪ್ರಯಾಣಿಸುವಾಗ ಪಾಪ್ಗಳಿಗೆ ಚಂದನೆಯ ನಗು ಬೀರಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವರುಣ್ ಮತ್ತು ನತಾಶಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ದಂಪತಿ ಇನ್ನೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ವರುಣ್ ಮತ್ತು ನತಾಶಾ ಹೈಸ್ಕೂಲ್ ದಿನಗಳಿಂದ ಪ್ರೀತಿಸುತ್ತಿದ್ದರು. 2021 ರ ಜನವರಿ 24 ರಂದು ಪ್ರಿಯತಮೆ ನತಾಶಾ ಅವರನ್ನೇ ಮದುವೆಯಾಗುವ ಮೂಲಕ ವರುಣ್ ಧವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯು ಮಹಾರಾಷ್ಟ್ರದ ಅಲಿಬಾಗ್ನಲ್ಲಿ ನಡೆದಿತ್ತು. ಕೊರೊನಾ ಸಮಯವಾಗಿದ್ದರಿಂದ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರಷ್ಟೇ ಭಾಗಿಯಾಗಿದ್ದರು.
ಇದನ್ನೂ ಓದಿ:ಭಾರಿ ಮಳೆಯಲ್ಲೇ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ನಯನತಾರಾ, ವಿಘ್ನೇಶ್ ಶಿವನ್..
ಇನ್ನೂ ವರುಣ್ ಧವನ್ ಸಿನಿಮಾ ವಿಚಾರವಾಗಿ ಹೇಳುವುದಾದರೆ, ನಟ ಇತ್ತೀಚೆಗೆ ಅಮರ್ ಕೌಶಿಕ್ ನಿರ್ದೇಶನದ ಕಾಮಿಡಿ ಸಿನಿಮಾ ಭೇಡಿಯಾದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿತ್ತು. ವರುಣ್ ಮುಂದೆ ನಿತೇಶ್ ತಿವಾರಿ ಅವರ ನಿರ್ದೇಶನದ ಬವಾಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ವರುಣ್ ಜೊತೆ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ.
ಗಿಗಿ ಹಡಿದ್ಗೆ ಕಿಸ್ ಮಾಡಿದ ವರುಣ್:ಮಾರ್ಚ್ 31 ರಂದು ಮುಂಬೈನಲ್ಲಿ ನಿತೇಶ್ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಸ್ಟಾರ್ ನಟ ನಟಿಯರು ಹೆಜ್ಜೆ ಹಾಕಿ ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದರು. ವರುಣ್ ಧವನ್ ಸಹ ಭರ್ಜರಿ ಸ್ಟೆಪ್ ಹಾಕಿದ್ದರು. ತಮ್ಮ ನೃತ್ಯ ಪ್ರದರ್ಶನದ ವೇಳೆ ಮಾಡೆಲ್ ಗಿಗಿ ಹಡಿದ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದ ನಟ ಅವರನ್ನು ಎತ್ತಿ, ಅವರ ಕೆನ್ನೆಗೆ ಮುತ್ತಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುವುದರ ಜೊತೆಗೆ ಭಾರಿ ಟೀಕೆಯನ್ನು ಎದುರಿಸಿತ್ತು.
ನಟನ ವಿರುದ್ಧ ಕೆಲ ನೆಟ್ಟಿಗರು ಅಸಮಧಾನ ಹೊರಹಾಕಿ ಟ್ರೋಲ್ ಮಾಡಿದ್ದರು. ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದ ನಂತರ ನಟ ವರುಣ್ ಧವನ್, ಇದು ಯೋಜಿತ ಎಂದು ಹೇಳಿದ್ದರು. ಮೊದಲೇ ಪ್ಲಾನ್ ಮಾಡಿ ಹಾಗೆ ಮಾಡಿದೆವು ಎಂದು ಸ್ಪಷ್ಟಪಡಿಸಿದ್ದರು. ಮಾಡೆಲ್ ಗಿಗಿ ಹಡಿದ್ ಕೂಡ ನಟನ ಪರ ನಿಂತರು. ತಮ್ಮ ಬಾಲಿವುಡ್ ಕನಸುಗಳನ್ನು ಪೂರೈಸಲು ಅವಕಾಶ ಸಿಕ್ಕಿತು ಎಂದು ತಮ್ಮ ಇನ್ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದರು.
ಇದನ್ನೂ ಓದಿ:ನೂರು ಕೋಟಿ ವೆಚ್ಚದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ದೇಶಕ ಕೆ.ಎಸ್ ರಾಮ್ ಜಿ